ಡೈಲಿ ವಾರ್ತೆ:13 ಆಗಸ್ಟ್ 2023
ಮೊಡಂಕಾಪು : ಕಾರ್ಮೆಲ್ ಪದವಿ ಪೂರ್ವ ಕಾಲೇಜು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ರಿಚರ್ಡ್ ಮಿನೇಜಸ್ ಉಪಾಧ್ಯಕ್ಷರಾಗಿ ಪುಷ್ಪಲತಾ ಆಯ್ಕೆ.
ಬಂಟ್ವಾಳ : ಮೊಡಂಕಾಪು ಕಾರ್ಮೆಲ್ ಪದವಿ ಪೂರ್ವ ಕಾಲೇಜು ಇದರ 40 ನೇ ಶಿಕ್ಷಕ ರಕ್ಷಕ ಸಂಘದ 2023 – 24ನೇ ಸಾಲಿನ ನೂತನ ಅಧ್ಯಕ್ಷರಾಗಿ ರಿಚರ್ಡ್ ಮಿನೇಜಸ್ ಲೊರೆಟ್ಟೋ ಹಾಗೂ ಉಪಾಧ್ಯಕ್ಷರಾಗಿ ಪುಷ್ಪಲತಾ ಅವರು ಆಯ್ಕೆಯಾಗಿದ್ದಾರೆ.
ಕಾಲೇಜು ಪ್ರಾಂಶುಪಾಲೆ ವಂದನೀಯ ಭಗಿನಿ ನವೀನ ಅವರ ಅಧ್ಯಕ್ಷತೆಯಲ್ಲಿ ಕಾಲೇಜಿನಲ್ಲಿ ನಡೆದ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ನಿಕಟಪೂರ್ವ ಅಧ್ಯಕ್ಷೆ ನೇತ್ರಾವತಿ ಅಧಿಕಾರ ಹಸ್ತಾಂತರಿಸಿದರು. ಸಂಘದ ಗೌರವ ಸದಸ್ಯ ಲೈನಲ್ ಡಿ.ಸೋಜ, ಶಿಕ್ಷಕ ಸದಸ್ಯರಾದ ವಂದನೀಯ ಭಗಿನಿ ವೀರ, ವಂದನೀಯ ಭಗಿನಿ ಪೆಲ್ಸಿಟಾ, ರೋಶನ್ ಪಿಂಟೋ ಶುಭ ಹಾರೈಸಿದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಲತೀಫ್ ನೇರಳಕಟ್ಟೆ, ಜಗದೀಶ್ ಕೊಯಿಲ, ರಮೇಶ್ ಅನ್ನಪಾಡಿ, ಎಂ.ಎನ್.ಕುಮಾರ್ ಮೆಲ್ಕಾರ್, ಅಬ್ದುಲ್ ಮಜೀದ್, ಅಬ್ದುಲ್ ಹಕೀಂ, ವಾಸುದೇವ ಹೊಳ್ಳ, ಝಕಾರಿಯ, ಮುಹಮ್ಮದ್ ಬಿ, ಜೀವನ್ ಲೋಬೊ, ಅನಿಲ್ ಮೊರಾಸ್, ವ್ಯಾಲೆಟ್ ಮಿನೇಜಸ್, ಅನಿಲ್ ಹೆರಾಲ್ಡ್ ಫ್ರಾಂಕ್, ನಳಿನಿ, ಅಸ್ಮಾ, ನೇತ್ರಾವತಿ ವಿ.ಆರ್., ಮುಮ್ತಾಜ್, ಗೀತಾ ಜೆ.ಬಂಗೇರ, ಕುಸುಮ , ಶಾಂಭವಿ , ಸವಿತಾ, ಶೀಲಾ ನಿರ್ಮಲಾ ವೇಗಸ್, ಹೇಮಲತಾ ಹಾಗೂ ಪುಷ್ಪಾವತಿ ಉಪಸ್ಥಿತರಿದ್ದರು.