ಡೈಲಿ ವಾರ್ತೆ:15 ಆಗಸ್ಟ್ 2023


ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ. ಉಡುಪಿ ಜಿಲ್ಲೆ (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)

ದೇಶಾದ್ಯಂತ 76ರ ಸ್ವಾತಂತ್ರ್ಯೋತ್ಸವದ ಸಂಭ್ರಮ…., ಭಾರತೀಯರ ಭಾವೈಕ್ಯತೆಯ ಸಮಾಗಮಕ್ಕೆ 76 ವರ್ಷ……, ಬ್ರಿಟಿಷರ ಕಪಿಮುಷ್ಠಿಯಿಂದ ಭಾರತ ಸ್ವಾತಂತ್ರ್ಯ ಪಡೆದು ಪರಿಪೂರ್ಣ ಜಗತ್ತು ನಿರ್ಮಾಣ…., ವೀರ ಹುತಾತ್ಮರ ಗದ್ದುಗೆಯ ಮೇಲೆ ತ್ರಿವಣ ಧ್ವಜದ ಹಾರಾಟದ ಸಾಂಕೇತಿಕ ರೂಪವೇ – ಸ್ವಾತಂತ್ರ್ಯೋತ್ಸವ….!” ಒಂದೇ ಮಾತರಂ…..!”

ಸ್ವಾತಂತ್ರ್ಯೋತ್ಸವದ ತನ್ನ ಮಿತ್ತ ವಿಶೇಷ ಲೇಖನ: ಆಗಸ್ಟ್ 15 ಸ್ವಾತಂತ್ರ್ಯೋತ್ಸವ ದಿನಾಚರಣೆ….!”
ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದಂತಹ ಮಹಾತ್ಮರು ಇಂದು ಇದ್ದಿದ್ದರೆ ನಮ್ಮ ದೇಶವನ್ನು ಕಂಡು ಮರುಗುತ್ತಿದ್ದರು. ಅದಲ್ಲದೆ, ಇಂದಿನ ರಾಜಕೀಯ ವ್ಯವಸ್ಥೆಯನ್ನು ನೋಡಿ ತಲೆ ಚಚ್ಚಿಕೊಳ್ಳುತ್ತಿದ್ದರು. ಯಾಕೆಂದರೆ, ದೇಶದಲ್ಲಿ ಅಥವಾ ರಾಜ್ಯದಲ್ಲಿ ರಾಜಕಾರಣಿಗಳ ಆಡಳಿತದಿಂದ ಜನರು ಹೈರಾಣ ಆಗಿ ಹೋಗಿದ್ದಾರೆ. ಅದಲ್ಲದೆ ಪಕ್ಷ ಪಕ್ಷಗಳ ನಡುವಿನ ದಿಕ್ಕಾಟದಲ್ಲಿ ದೇಶವನ್ನ ರಾಜ್ಯವನ್ನ ಮಾರಲು ಹೊರಟಿರುವಂಥ ರಾಜಕಾರಣಿಗಳಿಗೆ ಅಂದಿನ ಸ್ವಾತಂತ್ರ್ಯ ಹೋರಾಟಗಾರರು ಹೆಡೆಮುರಿ ಕಟ್ಟುವಂತ ಪ್ರಯತ್ನ ಮಾಡುತ್ತಿದ್ದರು. ಆದರೆ ಭವಿಷ್ಯ ಇವರು ಹುತಾತ್ಮರಾಗಿ ಕೈಲಾಸವನ್ನ ಸೇರಿರುವುದರಿಂದ ರಾಜಕಾರಣಿಗಳ ಆಟೋಪಗಳಿಗೆ ದೇಶವೇ ಮಾರುಕಟ್ಟೆಯಾಗಿ ಹೋಯಿತು.


ಪ್ರತಿ ವರ್ಷವೂ ಸ್ವಾತಂತ್ರ್ಯ ದಿನ ಬಂದಾಗ ದೇಶದ ಶ್ರೇಷ್ಠ ಹುತಾತ್ಮರನ್ನು ನೆನಪಿಸಿಕೊಂಡು ಜೈಕಾರವನ್ನು ಹಾಕುತ್ತೇವೆ, ಸಂಭ್ರಮಿಸುತ್ತೇವೆ, ನಮಗೂ ಸ್ವಾತಂತ್ರ್ಯ ಸಿಕ್ಕಿದೆ ಎಂದು ಬೀಗುತ್ತೇವೆ. ಆದರೆ ಸ್ವಾತಂತ್ರ್ಯದ ಹಿಂದಿನ ಮರ್ಮವನ್ನು ಅಳೆಯಲು ಯಾರಿಂದಲೂ ಸಾಧ್ಯವಿಲ್ಲ, 1947ರಲ್ಲಿ ದಕ್ಕಿದ ಸ್ವಾತಂತ್ರ್ಯ ಇಂದು ನಮಗೆ ಪಾಠವಾಯಿತು.
ಅಂದಿನ ಸ್ವಾತಂತ್ರ್ಯವೇ ಇಂದಿನ ಅಭಿಮಾನದ ಬದುಕು:
ದೇಶವೊಂದು ಸ್ವಾತಂತ್ರ್ಯಾಗಲು ಬಲಿಷ್ಠವಾದಂತ ಪಡೆ ಹಾಗೂ ಬ್ರಿಟಿಷರ ವಿರುದ್ಧ ರಣ ಕಹಾಳೆಯನ್ನು ನಡೆಸಲು ಬಲಿಷ್ಠವಾದಂತ ಭಾರತೀಯ ಪ್ರಜೆಗಳು ಅಂದಿನ ಕಾಲಕ್ಕೆ ಅವಶ್ಯಕತೆ ಇತ್ತು ,ಅದಲ್ಲದೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರು ನಮ್ಮ ಮೇಲೆ ದಂಗೆ ಎದ್ದು ಬಂದು, ನಮ್ಮ ವಸಾಹತುಶಾಹಿ ಸವಲತ್ತುಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ, ನಮ್ಮ ದೇಶವನ್ನ ಪೂರ್ಣವಾಗಿ ಸುತ್ತುವರಿದು ದೇಶದಲ್ಲಿನ ಉತ್ಪಾದನೆ ಮತ್ತು ಸಂಪತ್ತನ್ನು ಕೊಳ್ಳೆ ಹೊಡೆಯಲು ಬ್ರಿಟಿಷ್ ಸಮುದಾಯ ಯೋಚಿಸಿತು. ಆದರೆ ಮಹಾತ್ಮ ಗಾಂಧೀಜಿ, ಜವಾಹರ್ಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಹೀಗೆ ನೂರಾರು ಹೋರಾಟಗಾರರು ದೇಶದ ಸಂಪತ್ತನ್ನ ಕೊಳ್ಳೆಹೊಡೆಯಲು ಹಾಗೂ ದೇಶದಲ್ಲಿನ ಸಂಸ್ಕೃತಿಯನ್ನ ಬಿಟ್ಟುಕೊಡಲು ತಯಾರಿಲ್ಲದೆ ,ತಮ್ಮ ಪ್ರಾಣವನ್ನ ಲೆಕ್ಕಿಸದೆ, ಹೋರಾಡಿ ಸ್ವಾತಂತ್ರ್ಯ ತಂದು ಕೊಡುವಲ್ಲಿ ಯಶಸ್ವಿಯಾದರು. ಆದರೆ, ಅಂತ ಹುತಾತ್ಮರ ಬಲಿದಾನವನ್ನು ನಾವು ಇಂದು ಮೆಟ್ಟಿಲುಗಳಾಗಿ ಮಾಡಿಕೊಂಡು, ಮುಂದೆ ಸಾಗುತ್ತಿದ್ದೇವೆ ಎಂದರೆ ಹಿಂಡಿರುವ ಹಾಗೂ ಅದರ ಒಳ ಮರ್ಮ ನಾವು ತಿಳಿಯಲೇಬೇಕು. ದೇಶ ಸ್ವಾತಂತ್ರ್ಯ ಆಗಿದೆ ಎನ್ನುವುದಕ್ಕಿಂತ, ಹೆಚ್ಚಾಗಿ ದೇಶದಲ್ಲಿ ಮಹಿಳೆಯರಿಗೆ ಅದೆಷ್ಟು ಸ್ವಾತಂತ್ರ್ಯ ಸಿಕ್ಕಿದೆ. ಪಕ್ಷ ಪಕ್ಷಗಳ ನಡುವಿನ ಭೇದಭಾವದಿಂದ ಇಂದು ದೇಶ ಅವನತಿಯ ಹಂತದತ್ತ ಸಾಗಲು ಅಣಿಯಾಗುತ್ತಿದೆ. ಇದನ್ನು ನಾವು ಅರ್ಥ ಮಾಡಿಕೊಳ್ಳದೆ ಪಕ್ಷಕ್ಕಾಗಿ ಮತವನ್ನು ನೀಡಿದರೆ ಮಾತ್ರ ದೇಶ ಅಥವಾ ರಾಜ್ಯ ಸುಭದ್ರವಾಗುತ್ತೆ ಅನ್ನೋದು ನೂರಕ್ಕೆ ನೂರು ಸುಳ್ಳು .ಆದರೆ ,ಅವರವರ ಪಕ್ಷ ಅವರವರ ಪಂತ ವನ್ನು ಗಟ್ಟಿ ಮಾಡಿಕೊಳ್ಳಲು ಹೊರತು, ದೇಶಕ್ಕಾಗಿ ಎಲ್ಲ, ರಾಜ್ಯಕ್ಕಾಗಿಯಲ್ಲ ನೆನಪಿರಲಿ…!”

ಬಲಿದಾನದ ಆ ದಿನಗಳು ರೋಚಕ:-
ಆಡಳಿತದಿಂದ ಭಾರತ ದೇಶ 1947 ಆಗಸ್ಟ್ 15 ರಂದು ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಇಡೀ ದೇಶದಲ್ಲಿ ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ಹಲವೆಡೆ ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ “ಜನ ಗಣ ಮನ”ವನ್ನು ಹಾಡ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಡಿದ ನಾಯಕರನ್ನು ಸ್ಮರಿಸಲಾಗುತ್ತದೆ.
ಮಹತ್ತರ ಭಾಗ್ಯದೊಡನೆ ಒಪ್ಪಂದ ತೀರ್ಪಿನ ಭಾಷಣದ ಮಹತ್ವ:-
ಜೂನ್ 3,1947 ರಂದು ಅಂದಿನ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್‌ಬ್ಯಾಟನ್, ಬ್ರಿಟಿಷ್ ಭಾರತ ಸಾಮ್ರಾಜ್ಯವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಭಜಿಸುವುದಾಗಿ ಘೋಷಿಸಿದನು. ಇದರ ನಂತರ ಭಾರತದ ಸ್ವಾತ್ರಂತ್ರ್ಯ ಕಾಯಿದೆ 1947 ರ ಅನ್ವಯ ಆಗಸ್ಟ್ 15, 1947 ರಂದು ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲಾಯಿತು. ಅಂದಿನ ಮದ್ಯರಾತ್ರಿ,(12.15ರ) ನಂತರ ಜವಾಹರಲಾಲ್ ನೆಹರು ಅವರು ದೇಶದ ಪ್ರಥಮ ಪ್ರಧಾನ ಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದು ಅವರು ರಾಷ್ಟ್ರವನ್ನುದ್ದೇಶಿಸಿ, ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣ ( ‘ಭಾಗ್ಯದೊಡನೆ ಒಪ್ಪಂದ’ ಭಾಷಣ) ಮಾಡಿದರು.
ಪ್ರಧಾನಮಂತ್ರಿ ನೆಹರು ಮತ್ತು ಉಪಪ್ರಧಾನಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲರು ಲಾರ್ಡ್ ಮೌಂಟ್ ಬ್ಯಾಟನ್ನರನ್ನು ಭಾರತದ ಗವರ್ನರ್ ಆಗಿ ಮುಂದುವರೆಯಲು ಕೋರಿದರು. ಜೂನ್ 1945 ರಲ್ಲಿ ಅವರ ಸ್ಥಾನಕ್ಕೆ ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಬಂದರು. ಪಟೇಲರು 595 ರಾಜಸಂಸ್ಥಾನಗಳ ಭಾರತದ ರಾಜಕೀಯ ಏಕೀಕರಣ ದ ಜವಾಬ್ದಾರಿಯನ್ನು ವಹಿಸಿಕೊಂಡರು, ಜುನಾಗಢ , ಜಮ್ಮು ಮತ್ತು ಕಾಶ್ಮೀರ, ಮತ್ತು ಹೈದರಾಬಾದ್ ಸಂಸ್ಥಾನ ಗಳನ್ನು ಭಾರತಕ್ಕೆ ಸೇರ್ಪಡೆ ಮಾಡುವಲ್ಲಿ ಸೈನಿಕ ಬಲವನ್ನು ಉಪಯೋಗಿಸಿ “ರೇಷ್ಮೆ ಕೈಗವಸಿನಲ್ಲಿ ಉಕ್ಕಿನ ಮುಷ್ಠಿ” ತಂತ್ರವನ್ನು ಉಪಯೋಗಿಸಿದರು.

ಸಂವಿಧಾನ ರಚನಾಸಭೆಯು ಸಂವಿಧಾನದ ಕರಡ ಸಭೆಯನ್ನು 26 ನವೆಂಬರ್ 1949 ರಂದು ಸಿದ್ಧಗೊಳಿಸುವ ಕಾರ್ಯವನ್ನು ಸಂಪೂರ್ಣಗೊಳಿಸಿತು . 26 ಜನವರಿ 1950 ರಂದು ಭಾರತೀಯ ಗಣರಾಜ್ಯ ವನ್ನು ಅಧಿಕೃತವಾಗಿ ಘೋಷಿಸಲಾಯಿತು. ಸಂವಿಧಾನ ರಚನಾಸಭೆಯು ಡಾ. ರಾಜೇಂದ್ರಪ್ರಸಾದರನ್ನು ದೇಶದ ಪ್ರಥಮ ರಾಷ್ಟ್ರಪತಿ ಯನ್ನಾಗಿ ಚುನಾಯಿಸಿತು . ಅವರು ಗವರ್ನರ್ ಜನರಲ್ ರಾಜಗೋಪಾಲಾಚಾರಿಯವರಿಂದ ಅಧಿಕಾರವನ್ನು ಸ್ವೀಕರಿಸಿದರು .ನಂತರ ಸ್ವತಂತ್ರ ಸಾರ್ವಭೌಮ ಭಾರತವು ಇನ್ನೆರಡು ಪ್ರದೇಶಗಳನ್ನು ತನ್ನಲ್ಲಿ ಸೇರಿಸಿಕೊಂಡಿತು . ಅವು 1961ರಲ್ಲಿ ಪೋರ್ಚುಗೀಸ್ ನಿಯಂತ್ರಣದಿಂದ ವಿಮೋಚನೆಗೊಳಿಸಿದ ಗೋವಾ ಮತ್ತು ಫ್ರೆಂಚರು 1954ರಲ್ಲಿ ಒಪ್ಪಿಸಿದ ಪಾಂಡಿಚೇರಿ . 1942 ರಲ್ಲಿ ಭಾರತವು ತನ್ನ ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು . ಶೇ. 92 ಕ್ಕೂ ಹೆಚ್ಚು ಮತದಾರರು ಅದರಲ್ಲಿ ಭಾಗವಹಿಸಿದರು. ಅದರಿಂದಾಗಿ ಭಾರತವು ವಾಸ್ತವದಲ್ಲಿ ಜಗತ್ತಿನ ಅತೀ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿತು.

ದೇಶದಲ್ಲಿ ಸ್ವಾತಂತ್ರ್ಯವನ್ನೇ ಮರೆತು ಕ್ಷುಲ್ಲಕ ಕಾರಣಕ್ಕಾಗಿ ಬದುಕನ್ನೇ ಬಲಿಕೊಡುತ್ತಿರುವ ಇಂದಿನ ಯುವ ಪಡೆ:-
ಪಕ್ಷ ಪಕ್ಷ ಳ ನಡುವಿನ ಸರಕಾರದಲ್ಲಿ ನಾವಿಂದು ಬದುಕುತ್ತಿದ್ದೇವೆ. ಜನರ ನಡುವಿನ ವೈಶ್ಯದಲ್ಲಿ ಜಗತ್ತಿನೊಳಗಿನ ಜನರು ಆಸ್ತಿ ಹೊನ್ನು ಹೆಣ್ಣು, ಮಣ್ಣಿಗಾಗಿ ಜೀವನವನ್ನು ತೆಟ್ಟಿರುವಂತಹ ಉದಾಹರಣೆಗಳು ನಡೆಯುತ್ತಲೇ ಇದೆ. ದೇಶ ಸೇವೆ ಹಾಗೂ ದೇಶಕ್ಕಾಗಿ ತಮ್ಮ ಪ್ರಾಣವನ್ನ ಎತ್ತುವುದಕ್ಕಿಂತ ಹೆಚ್ಚಾಗಿ ಕುಟುಂಬದೊಳಗಿನ ವಿಷ ಬೀಜವನ್ನು ಬಿತ್ತಿ, ಮಣ್ಣು ಪಾಲಾಗುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಆದರೆ ಹಣ ಎಂಬ ವ್ಯಾಮೋಹದಲ್ಲಿ ಸಿಲುಕಿರುವಂತಹ ಜನರು ಮಾನವೀಯತೆ ಮನುಷ್ಯತ್ವ ಮರೆತು, ಕ್ರೌರತನವನ್ನೇ ರೂಡಿಸಿಕೊಂಡು, ಜೀವನದಲ್ಲಿ ಇನ್ನೊಬ್ಬರಿಗೂ ಕೂಡ ಬದುಕಲಾರದಂತ ಸ್ಥಿತಿ ನಿರ್ಮಿಸಿದ್ದಾರೆ. ದೇಶದಲ್ಲಿನ ಆಂತರಿಕ ವಾತಾವರಣ ಹಾಗೂ ಭದ್ರತೆಯನ್ನು ಕಾಪಾಡುವಂತ ದೃಷ್ಟಿಯಲ್ಲಿ ಪ್ರತಿಯೊಬ್ಬ ನಾಗರಿಕರು ದೇಶದ ಮೇಲಿರುವಂತ ಅಭಿಮಾನವನ್ನ ಹೆಚ್ಚಿಸಿಕೊಳ್ಳಬೇಕು, ಅದಲ್ಲದೆ, ಮುಂದಿನ ಪೀಳಿಗೆಗೂ ದೇಶದ ಮಹತ್ವ ಮತ್ತು ದೇಶದಲ್ಲಿನ ವಿವಿಧ ತರಹದ ಸಂಸ್ಕೃತಿಗಳನ್ನ ಜಗತ್ತಿಗೆ ಸಾರಬೇಕು. ಹಾಗೆಯೇ ,ಸ್ವಾತಂತ್ರ್ಯಕ್ಕಾಗಿ ಹೋರಾಡಿದಂತಹ ಮಹಾತ್ಮರನ್ನ ಅಗಸ್ಟ್ 15ರಂದು ಮಾತ್ರ ನೆನಪಿಸಿಕೊಳ್ಳದೆ, ಪ್ರತಿದಿನವೂ ಅವರ ಬಗ್ಗೆ ಗುಣಗಾನ ಹಾಗೂ ಅವರಲ್ಲಿನ ಸ್ವಾತಂತ್ರ್ಯ ಹೋರಾಟದ ಕಿಚ್ಚಿನ ಮಹತ್ವವನ್ನು ಇಂದಿನ ಮಕ್ಕಳಿಗೆ ಪಠ್ಯ ಹಾಗೂ ಪಟ್ಟಿಯೇತರ ವಿಚಾರಗಳಲ್ಲಿ ಬೋಧಿಸಿರುವುದರಿಂದ ಜನಸಾಮಾನ್ಯರಿಗೆ ಅದರ ಬಗ್ಗೆ ಒಲವು ಹಾಗೂ ವಿಶೇಷವಾದಂತಹ ಗೌರವ ಹೆಚ್ಚುತ್ತದೆ. ಸ್ವಾತಂತ್ರ್ಯ ಎಲ್ಲರಿಗೂ ದಕ್ಕಿದಂತಹ ಮೌಲ್ಯ ವಾದಂತಹ ಸಂಪತ್ತು ಈ ಜಗತ್ತಿನಲ್ಲಿ ಜಲಚರ ಜೀವಿಯಿಂದ ಹಿಡಿದು, ನೆಲದ ಮೇಲೆ ವಾಸಿಸುವಂಥ ಮನುಷ್ಯನವರೆಗೂ ತನ್ನದೇ ಆದಂತಹ ಸ್ವಾತಂತ್ರವನ್ನು ಕೊಂಡುಕೊಂಡಿದ್ದಾನೆ. ಅದಲ್ಲದೆ,ಆ ಸ್ವಾತಂತ್ರ್ಯವನ್ನ ನಾವು ಉಪಯೋಗಿಸಿಕೊಳ್ಳುವಂತ ರೀತಿ ಇನ್ನೊಬ್ಬರಿಗೆ ಮಾರಕವಾಗದೆ, ಇತರರಿಗೂ ಸಹಾಯ ಸಹಕಾರ ರೂಪದಲ್ಲಿ ನಡೆದಾಗ ಮಾತ್ರ ಅಂತಹ ಸ್ವಾತಂತ್ರ್ಯೋತ್ಸವಕೆ ಬೆಲೆ ಬರುತ್ತದೆ. ಅದಲ್ಲದೆ ನಾವು ಆಕಾಶದ ಎತ್ತರ ಹಾರೈಸುವಂತಹ ತಿರಂಗಗಳು ಭಾವೈಕ್ಯತೆಯ ಸಂಕೇತವನ್ನು ಸಾರುವ ಹಾಗೆ ,ನಮ್ಮನ್ನು ಶಾಂತಿಯ ದ್ಯೋತಕವಾಗಿ ಸಮಾಜಕ್ಕೆ ಅರ್ಪಿಸಲ್ಪಡುತ್ತದೆ .ಆ ಕಾರಣಕ್ಕಾಗಿ ಸರುವರು ಸ್ವಾತಂತ್ರ್ಯೋತ್ಸವವನ್ನು ಆಚರಿಸುವಾಗ ಬೋಲೊ ಭಾರತ್ ಮಾತಾ ಕಿ… ಜೈ… ಎಂದು ಹೊಗಳುತ್ತಾರೆ ,ಕೊಂಡಾಡುತ್ತಾರೆ. ಒಟ್ಟಾರೆಯಾಗಿ 76ನೇ ಸ್ವಾತಂತ್ರ್ಯದ ಸಂಭ್ರಮದಲ್ಲಿ ಜಗತ್ತು ಪ್ರಕಾಶಮಾನವಾಗುವುದರೊಂದಿಗೆ, ಜಗತ್ತಿನಲ್ಲಿನ ಭಾವೈಕ್ಯ ಶಕ್ತಿಗಳು ಒಂದಾಗಿ, ಹಿಂದೂ ಹಾಗೆ ಇನ್ನಿತರ ಸಂಸ್ಕೃತಿಯನ್ನು ಉಳಿಸಲು ಕಾರಣಿಭೂತರಾಗಬೇಕು. 76ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಸರ್ವರಿಗೂ ಒಳಿತನ್ನ ಮಾಡುವುದರೊಂದಿಗೆ, ದೇಶ ಕಟ್ಟುವ ಕಾಯಕವನ್ನು ರೂಡಿಸಿಕೊಂಡರೆ, ಇಂತಹ ಮಹತ್ವದ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ. ಆ ಕಾರಣಕ್ಕಾಗಿ ಎಲ್ಲರೂ ಸಂಭ್ರಮದಿಂದ ಆಗಸ್ಟ್ 15ರ 1947ರ ಸ್ವಾತಂತ್ರ್ಯ ಅದಕ್ಕೆ, ಪರಿಪೂರ್ಣ 76ನೇ ವರ್ಷಗಳನ್ನ ನಾವು ಎದುರು ನೋಡುತ್ತಿದ್ದೇವೆ. ಹಾಗಾಗಿ ದೇಶದ ಮೇಲೆ ಇರಲಿ. ಪ್ರೀತಿ ಎನ್ನುವ ಸಂಕೇತ ಪ್ರತಿಯೊಬ್ಬರ ಮನದಲ್ಲಿ ಜಾಗ್ರತವಾಗಿರಲಿ. ಸರ್ವರಿಗೂ ದೇಶ ಕಂಡ 76ನೇ ಯ ಸ್ವಾತಂತ್ರೋತ್ಸವದ ಶುಭಾಶಯಗಳು.

– ಕೆ. ಸಂತೋಷ ಶೆಟ್ಟಿ, ಮೊಳಹಳ್ಳಿ ,ಕುಂದಾಪುರ ಉಡುಪಿ ಜಿಲ್ಲೆ. (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)m:9632581508