ಡೈಲಿ ವಾರ್ತೆ:16 ಆಗಸ್ಟ್ 2023

ಸಂಪಾದಕರು: ಇಬ್ರಾಹಿಂ ಕೋಟ

ಇತಿಹಾಸ ಪ್ರಸಿದ್ಧ ಕಂಡ್ಲೂರು ಶ್ರೀ ಕನ್ನಿಕಾಪರಮೇಶ್ವರೀ ಮಾರಿ ಜಾತ್ರೆ ಸಂಪನ್ನ

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಂಡ್ಲೂರು ಶ್ರೀ ಕನ್ನಿಕಾಪರಮೇಶ್ವರೀ ಮಾರಿ ಜಾತ್ರೆಯು ಆ. 16 ರಂದು ಬುಧವಾರ ವಿಜೃಂಭಣೆಯಿಂದ ನಡೆಯಿತು.

ಹಿಂದೂ, ಮುಸ್ಲಿಂ ಭಾವೈಕ್ಯತೆಯಿಂದ ನಡೆಯುವ ಈ ಮಾರಿಹಬ್ಬವು ಪ್ರತಿ ಆಷಾಡ ಮಾಸದ ಕೊನೆಯ ಮಂಗಳವಾರ ಮತ್ತು ಬುಧವಾರ ಜರಗುತ್ತದೆ.

ಮಾರೀಹಬ್ಬದ ವಿಶೇಷತೆ: ಮಂಗಳವಾರ ರಾತ್ರಿ ದೇವಸ್ಥಾನದಲ್ಲಿ ವಿಜೃಂಭಣೆಯ ಪೂಜೆ ನಡೆಯುತ್ತದೆ. ನಂತರ ಶ್ರೀ ಮಾರಿ ಅಮ್ಮನ ಪೂಜೆ ಮಾಡಿ ಬೆಳಗ್ಗಿನ ಜಾವ ಸಾಧಾರಣ ಐದು ಗಂಟೆಗೆ ಕನ್ನಿಕಾಪರಮೇಶ್ವರೀ ದೇವಸ್ಥಾನದಿಂದ ಮಾರಿ ಗದ್ದುಗೆ, ಅಂದರೆ ಕಂಡ್ಲೂರಿನ ಮಸೀದಿಯ ಮುಂಭಾಗದಲ್ಲಿ ಇರುವ ಗದ್ದುಗೆಗೆ ಕರೆದೊಯ್ಯುತ್ತಾರೆ, ಇದು ಬಹಳ ವಿಶೇಷ. ಏಕೆಂದರೆ ಹಿಂದೂ, ಮುಸ್ಲಿಂ ಬಾಂಧವ್ಯ ಹೇಗಿದೆ ಎನ್ನುವುದನ್ನು ಈ ಮಾರಿಜಾತ್ರೆಯಿಂದ ನಮಗೆ ತಿಳಿಯುತ್ತದೆ.

ಇದನ್ನು ಹೊಸಬರು ನೋಡಿದರೆ ಆಶ್ಚರ್ಯ ಪಡಬಹದು. ಹಾಗೆಯೇ ಇದು ತುಂಬಾ ವರ್ಷಗಳಿಂದ ನಡೆಯುತ್ತಾ ಬರುತ್ತಿದೆ.

ಈ ಹಬ್ಬಕ್ಕೆ ಸಮಾಜದ ಎಲ್ಲಾ ವರ್ಗದ ಜನರು ಬೇಕಾಗುತ್ತಾರೆ. ಆರ್ಚಕರು, ನಾಥಪಂಥದ ಜೋಗಿಯರು, ಮಡಿವಾಳರು, ಬ್ರಾಹ್ಮಣರು, ಮೊಗವೀರರು, ಆಚಾರ್ಯರು, ಗುಡಿಗಾರರು, ಕುಂಬಾರರು ಹಾಗೂ ಅಮಾಸೆಬೈಲಿನಲ್ಲಿರುವ ಒಂದು ಕುಟುಂಬವಿದೆ ಆ ಸಮುದಾಯದವರು ಹಾಗೂ ಇತರ ಪಂಗಡದವರು ಭಕ್ತಿಯಿಂದ ಈ ಮಾರಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಹೀಗೆ ಹಲವು ಸಮಾಜದವರ ಸೇರುವಿಕೆಯಿಂದ ಬಹಳ ವಿಜೃಂಭಣೆಯಿಂದ ಮಾರಿಜಾತ್ರೆ ನಡೆಯುತ್ತದೆ.