ಡೈಲಿ ವಾರ್ತೆ:18 ಆಗಸ್ಟ್ 2023
ಸಂಪಾದಕರು: ಇಬ್ರಾಹಿಂ ಕೋಟ
ಕುಂದಾಪುರ:ನಮ್ಮ ನಾಡ ಒಕ್ಕೂಟದ ಸಹಭಾಗಿತ್ವದಲ್ಲಿ ಕಮ್ಯೂನಿಟಿ ಸೆಂಟರ್ ಲೋಕಾರ್ಪಣೆ
ಕುಂದಾಪುರ:ನಮ್ಮ ನಾಡ ಒಕ್ಕೂಟದ ಸಹಭಾಗಿತ್ವದಲ್ಲಿ ಕಮ್ಯೂನಿಟಿ ಸೆಂಟರ್ ನ್ನು ದಿನಾಂಕ 17 ರಂದು ಗುರುವಾರ ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿರುವ ಮುತ್ತು ಮಹಲ್ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಲೋಕಾರ್ಪಣೆ ಗೊಂಡಿತು.
ಇದರ ಉದ್ಘಾಟನೆಯನ್ನು ಕಟ್ಟಡದ ಮಾಲೀಕರಾದ ಡಾ. ವೈ ಎಸ್ ಹೆಗ್ಡೆ ಉದ್ಘಾಟಿಸಿ ಅವರು ಮಾತನಾಡಿ
ಇಂದು ಎಷ್ಟೋ ಪ್ರತಿಭಾವಂತ ಹೆಣ್ಣುಮಕ್ಕಳು ಕೂಡಾ ಬಡತನದ ಕಾರಣದಿಂದ ವಿದ್ಯೆಯಿಂದ ವಂಚಿತರಗಿದ್ದಾರೆ. ಇದರಿಂದ ಪ್ರತಿಭೆಗಳು ಮನೆಯಲ್ಲಿಯೇ ಇದ್ದು ವ್ಯರ್ಥವಾಗುವ ಪರಿಸ್ಥಿತಿ ಬಂದಿದೆ. ಅಂತವರನ್ನು ಗುರುತಿಸಿ ವಿದ್ಯೆ ಕೊಡುವ ಕಾರ್ಯ ಮಾಡಬೇಕು. ಈ ಕೆಲಸವನ್ನು ಇಂದು “ನಮ್ಮ ನಾಡ ಒಕ್ಕೂಟ” ಮಾಡತ್ತಿದೆ. ಇದು ದೇವರು ಮೆಚ್ಚುವ ಕೆಲಸವಾಗಿದೆ – ಎಂದು ನಗರದ ವಾಣಿಜ್ಯ ಮಳಿಗೆ ‘ಮುತ್ತು ಮಹಲ್’ ಕಟ್ಟಡ ಮಾಲೀಕ ಡಾ. ವೈ. ಎಸ್. ಹೆಗ್ಡೆ ಶ್ಲಾಘಿಸಿದರು.
ನಮ್ಮನಾಡ ಒಕ್ಕೂಟ ಸಹಭಾಗಿತ್ವದಲ್ಲಿ ನಗರದಲ್ಲಿ ಆರಂಭಗೊಂಡ ಕಮ್ಯುನಿಟಿ ಸೆಂಟರನ್ನು ಶಾಸ್ತ್ರಿ ವೃತ್ತ ಸಮೀಪದ ಮುತ್ತು ಮಹಲ್ ಕಟ್ಟಡದಲ್ಲಿ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿ ಅವರು ಶುಭ ಹಾರೈಸಿದರು.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ದೊರಕಿಸುವುದು, ಆಸಕ್ತರಿಗೆ ಉದ್ಯೋಗದ ಬಗ್ಗೆ ಮಾಹಿತಿ ನೀಡಿ ಕೆಲಸ ಕೊಡಿಸುವಂತ ಕಾರ್ಯ ನಮ್ಮ ನಾಡ ಒಕ್ಕೂಟ ಮಾಡುತ್ತಿದೆ.
ನಿಜಕ್ಕೂ ಇದೆಲ್ಲಾ ಸಮಾಜಮುಖಿಯಾದ ಕಾರ್ಯಗಳು. ಈ ಸಂಸ್ಥೆಯ ಇಂತಹ ಕಾರ್ಯಗಳಲ್ಲಿ ತನಗೂ ಒಂದು ಅಳಿಲು ಸೇವೆ ಸಲ್ಲಿಸುವ ಅವಕಾಶ ಈ ಮೂಲಕ ಒದಗಿದೆ ಎಂದು ಅವರು ಕೃತಜ್ಞತೆ ಹೇಳಿದರು.
ಈ ಸಂಘಟನೆಯು ನಮ್ಮ ಜಿಲ್ಲೆಯಲ್ಲಿ ಮಾತ್ರವಲ್ಲದೆ, ಪರಹಿತ ಕಾರ್ಯಗಳ ಮೂಲಕ ರಾಜ್ಯದಲ್ಲೂ ಹೆಮ್ಮರವಾಗಿ ಬೆಳೆಯಲಿ ಎಂದು ಡಾ. ಹೆಗ್ಡೆ ಹಾರೈಸಿದರು.
ಆರಂಭದಲ್ಲಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದ ಕುಂದಾಪುರ ಕಮ್ಯೂನಿಟಿ ಸೆಂಟರ್ ನ ಪ್ರದಾನ ಕಾರ್ಯದರ್ಶಿ ಹುಸೇನ್ ಹೈಕಾಡಿಯವರು ನಮ್ಮ ನಾಡ ಒಕ್ಕೂಟ ದ ಕಾರ್ಯವೈಖರಿಗಳ ಬಗ್ಗೆ ಸವಿಸ್ತಾರವಾಗಿ ಹೇಳಿದರು. ಈ ಕಮ್ಯೂನಿಟಿ ಸೆಂಟರ್ ನಲ್ಲಿ
ನಮ್ಮ ಸಮುದಾಯದ ವರಿಗೆ ಶಿಕ್ಷಣ, ಆರೋಗ್ಯ ಉದ್ಯೋಗ,
ಇದರ ಜೊತೆಗೆ ಅಯುಷ್ಮಾನ್ ಕಾರ್ಡ್, ಆಧಾರ್ ಕಾರ್ಡ್ ಸ್ಕಾಲರ್ ಶಿಪ್, ರೇಷನ್ ಕಾರ್ಡ್, ಸರ್ಕಾರಿ ಉದ್ಯೋಗ ಇತರ ಮಾಹಿತಿ ಕಾರ್ಯಕ್ರಮ ವನ್ನು ಈ ಕಚೇರಿಯ ಮೂಲಕ ಮಾಡಿಕೊಡಲಾಗುವುದು.
ಈ ಕಚೇರಿಯ ಮೂಲಕ ನಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಯುವಕರಿಗೆ ಮಾರ್ಗದರ್ಶನ ಇನ್ನಿತರ ತರಬೇತಿ ಕಾರ್ಯಕ್ರಮವನ್ನೂ ನಡೆಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ನಮ್ಮನಾಡ ಒಕ್ಕೂಟ (ಎನ್ ಎನ್ ಓ)ಕಮ್ಯೂನಿಟಿ ಸೆಂಟರ್ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಇವರು ವಹಿಸಿದ್ದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಇಬ್ರಾಹಿಂ ಸಾಹೇಬ್ ಹಂಗಾರಕಟ್ಟೆ, ಎನ್ ಎನ್ ಓ ಉಡುಪಿ ಜಿಲ್ಲಾಧ್ಯಕ್ಷ ಬೆಳ್ವೆ ಮುಸ್ತಾಕ್ ಅಹಮ್ಮದ್, ಕುಂದಾಪುರ ಘಟಕ ಅಧ್ಯಕ್ಷ ಕಂಡ್ಲೂರು ಹಾಜಿ ದಸ್ತಗಿರಿ ಸಾಹೇಬ್, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹುಸೇನ್, ಉಡುಪಿ ಟ್ರಸ್ಟ್ ಸದಸ್ಯರಾದ ಉಡುಪಿ ಪಿರ್ ಮೊಹಮ್ಮದ್, ಎನ್ ಎನ್ ಓ ಹೆಬ್ರಿ ಘಟಕದ ಅಧ್ಯಕ್ಷ ರಫೀಕ್ ಅಜೆಕಾರು, ಜಿಲ್ಲಾ ಸದಸ್ಯ ಅಬ್ದುಲ್ ಖಾದರ್ ಮೂಡುಗೋಪಾಡಿ ಹಾಗೂ ಎನ್ ಎನ್ ಓ ಕಮ್ಯೂನಿಟಿಯ ಜಿಲ್ಲಾ ಮತ್ತು ತಾಲೂಕಿನ ಸದಸ್ಯರು ಹಾಗೂ ಜಮಾತ್ ಬಾಂಧವರು ಉಪಸ್ಥಿತರಿದ್ದರು.
ಪಳ್ಳಿ ಉಸ್ಮಾನ್ ಗುಲ್ವಾಡಿ ಕಾರ್ಯಕ್ರಮವನ್ನು ನಿರೂಪಿಸಿದರು
ಎನ್ ಎನ್ ಓ ಉಡುಪಿ ಜಿಲ್ಲಾ ಉಪಾಧ್ಯಕ್ಷ ಅಬುಮೊಹಮ್ಮದ್ ವಂದಿಸಿದರು.