ಡೈಲಿ ವಾರ್ತೆ:20 ಆಗಸ್ಟ್ 2023
ವರದಿ : ವಿದ್ಯಾಧರ ಮೊರಬಾ
ಅಂಕೋಲಾ:ದೇವರಾಜ ಅರಸು ಅವರ 108ನೇ ಜನ್ಮ ದಿನಾಚಣೆ – ಅರಸುರವರ ದೂರದೃಷ್ಟಿಯ ಆಡಳಿತ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿ : ಅಶೋಕ ಭಟ್
ಅಂಕೋಲಾ : ಡಿ.ದೇವರಾಜ ಅರಸು ಅವರು ಸಾಮಾಜಿಕ ನ್ಯಾಯ ಒದಗಿಸಲು ಬಗರ ಹುಕ್ಕುಂ ಸಾಗು ವಳಿಕೆ ಪದ್ಧತಿ ಜಾರಿಗೆ ತಂದಿರುವುದು ಐತಿಹಾಸಿಕ ಮತ್ತು ಕ್ರಾಂತಿಕಾರಿ ನಿರ್ಣಯ. ಇದರಿಂದ ದೀನ ದಲಿ ತರು, ಬಡವರು ಮತ್ತು ರೈತರಿಗೆ ಅನುಕೂಲವಾಗಿದೆ ಎಂದು ತಹಸೀಲ್ದಾರ್ ಅಶೋಕ ಭಟ್ ಹೇಳಿದರು.
ತಾಲೂಕ ಆಡಳಿತ, ತಾಪಂ., ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಇಲ್ಲಿಯ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಆಯೋಜಿಸಿದ ಡಿ. ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತ ನಾಡಿ, ಅರಸು ಅವರ ದೂರದೃಷ್ಟಿಯ ಆಡಳಿತ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಯಾದವು ಎಂದರು.
ಪದ್ಮಶ್ರೀ ತುಳಸಿ ಗೌಡ ಅವರು ಮಾತನಾಡಿ, ನಾನು ಚಿಕ್ಕಂದಿರುವಾಗಲೇ ಗಿಡ ಮರಗಳನ್ನು ನೆಟ್ಟಿ ರಕ್ಷಣೆ ಮಾಡಿದ್ದೇನೆ. ಇದನ್ನು ಗುರುತಿಸಿ ಅರಣ್ಯ ಇಲಾಖೆಯವರು ನನಗೆ ಪ್ರಶಸ್ತಿ ಲಭ್ಯತೆಗೆ ಕಾರಣರಾದರು. ವಿದ್ಯಾರ್ಥಿಗಳು ಸಹ ತಮ್ಮ ಜನ್ಮದಿನದೆಂದು ಗಿಡವನ್ನು ನೆಟ್ಟಿ ಅದರ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಗೂ ಮುಂದಾಗಿ ಎಂದರು.
ಹಿಂದುಳಿದ ವರ್ಗಗಳ ವಸತಿ ನಿಲಯದ ವಿದ್ಯಾರ್ಥಿಗಳಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.84 ಅಂಕ ಪಡೆದ ಹರೀಶ ಪಿ.ಪಟಗಾರ ಮತು ಪಿಯುಸಿಯಲ್ಲಿ ಶೇ.95 ಅಂಕ ಪಡೆದ ಸಹನಾ ಸತೀಶ ನಾಯ್ಕ ಹಾಗೂ ಪದ್ಮಶ್ರೀ ತುಳಿಸಿ ಗೌಡ, ನಾಟಿ ವೈದ್ಯ ಹನುಮಂತ ಗೌಡ ಸನ್ಮಾನಿಸಲಾಯಿತು. ಡಿ.ದೇವರಾಜ ಅರಸು ಕುರಿತು ಪ್ರಬಂಧ ಸ್ಪರ್ಧೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕೆಎಲ್‍ಇ ಮಹಾವಿದ್ಯಾಲಯದ ಉಪನ್ಯಾಸಕ ಮಂಜುನಾಥ ಇಟಗಿ ಅವರು ಡಿ.ದೇವರಾಜ ಅರಸು ಅವರ ಕುರಿತು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ತಾಪಂ.ಯೋಜನಾಧಿಕಾರಿ ನಾಗಭೂಷಣ ಕಲ್ಮನೆ, ಬಿಇಓ ಮಂಗಳಲಕ್ಷೀ ಪಾಟೀಲ್, ನಾಟಿ ವೈದ್ಯ ಹನುಮಂತ ಗೌಡ, ಹಿರಿಯ ನಾಗರಿಕ ಹೊನ್ನಪ್ಪ ನಾಯಕ ಮೊಗಟಾ ಮಾತನಾಡಿದರು. ಸಿಡಿಪಿಒ ಸವಿತಾ ಶಾಸ್ತ್ರೀಮಠ, ಪುರಸಭೆ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಉಪಸ್ಥಿತರಿದ್ದರು.
ಬಿಸಿಎಂ. ಪ್ರಭಾರ ತಾಲೂಕು ಕಲ್ಯಾಣಾಧಿಕಾರಿ ಸೀತಾ ಗೌಡ ಪ್ರಾಸ್ತವಿಕ ಮಾತನಾಡಿ, ವಿದ್ಯಾಥಿನೀಯರಾದ ಮಾಲಾ ಪಟಗಾರ ಪ್ರಾರ್ಥಿಸಿದರು, ಚಂದನಾ ನಾಯ್ಕ ಸಂಗಡಿಗರು ನಾಡಗೀತೆ ಪ್ರಸ್ತುತ ಪಡಿಸಿದರು. ಬಿಸಿಎಂ. ಗಂಡು ಮಕ್ಕಳ ವಸತಿ ನಿಲಯದ ಮೇಲ್ವೆಚಾರಕ ಶಿವಾನಂದ ನಾಯ್ಕ, ವಿದ್ಯಾರ್ಥಿ ಭಾರತಿ ಪಟ ಗಾರ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸಂಘಟನಾಧಿಕಾರಿ ಡಿ.ಎಲ್.ರಾಠೋಡ, ಪ್ರಥಮ ದರ್ಜೆ ಸಹಾಯಕ ಬೀರಣ್ಣ ನಾಯಕ ಸೀಳ್ಯೆ, ಸಿಡಿಪಿಓ ಕಚೇರಿಯ ಸುರೇಖಾ ನಾಯಕ ಭಾವಿಕೇರಿ, ಪ್ರೀಯಾ ನಾಯಕ, ವಿದ್ಯಾರ್ಥಿ ಗಳು, ವಸತಿ ನಿಲಯದ ಸಿಬ್ಬಂದಿಗಳ ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.