



ಡೈಲಿ ವಾರ್ತೆ:22 ಆಗಸ್ಟ್ 2023


ವಿಟ್ಲ : ಹೊರೈಝನ್ ಶಾಲೆಯ ಅಭಿವೃದ್ಧಿಯಲ್ಲಿ ಶ್ರಮಿಸುತ್ತಿರುವ ಮಹನಿಯರಿಗೆ ಅಭಿನಂದನಾ ಸಮಾರಂಭ.
ವಿಟ್ಲ ; ಕೇಂದ್ರ ಜುಮಾ ಮಸೀದಿ ವಿಟ್ಲ ಇದರ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ಶಾಲೆಯ ಅಭಿವೃದ್ಧಿಯಲ್ಲಿ ಶ್ರಮಿಸುತ್ತಿರುವ ಮಹನೀಯರಿಗೆ ಅಭಿನಂದನಾ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಝುಬೈರ್ ಮಾಸ್ಟರ್ ವಹಿಸಿದ್ದರು. ಕಾರ್ಯದರ್ಶಿ ನೋಟರಿ ಅಬೂಬಕರ್ ವಿಟ್ಲ ಪ್ರಸ್ತಾವಿಕ ಮಾತುಗಳನ್ನಾಡಿದರು.
ಇದೇ ವೇಳೆ ಶಾಲೆಯ ಪ್ರಗತಿಗಾಗಿ ಶ್ರಮಿಸುತ್ತಿರುವ ವಿಟ್ಲ ಕೇಂದ್ರ ಜುಮಾ ಮಸೀದಿ ಇದರ ಆಡಳಿತ ಸಮಿತಿ ಪದಾಧಿಕಾರಿಗಳು, ವಿಟ್ಲ ಯೂತ್ ವಿಂಗ್ ನಾ ರಫೀಕ್ ಪೊನ್ನೋಟು, ವಿ.ಕೆ.ಎಂ. ಹಂಝ ಸಹಿತ ಹಲವರನ್ನು ಅಭಿನಂದಿಸಲಾಯಿತು.
ಶಾಲಾ ಕೋಶಾಧಿಕಾರಿ ಅಂದುಞಿ ಗಮಿ, ಮೇಲ್ವಿಚಾರಕ ಗಫೂರ್ ಪೊನ್ನೋಟು ,ಟ್ರಸ್ಟಿ ಇಕ್ಬಾಲ್ ಹಳೆಮನೆ, ಮಸೀದಿ ಅಧ್ಯಕ್ಷ ಶೀತಲ್ ಇಕ್ಬಾಲ್, ಕಾರ್ಯದರ್ಶಿ ಹಮೀದ್ ಬದ್ರಿಯಾ, ಕೋಶಾಧಿಕಾರಿ ಶರೀಫ್ ಪೊನ್ನೊಟ್ಟು, ಅಬೂಬಕರ್ ಅನಿಲಕಟ್ಟೆ, ಲತೀಫ್ ಅನಿಲಕಟ್ಟೆ, ಹಮೀದ್ ಕುದ್ದುಪದವು,ಉಪ ಮುಖ್ಯ ಶಿಕ್ಷಕಿ, ಗಾಯತ್ರಿ, ರಫೀಕ್ ಮಾಸ್ಟರ್ ಒಕ್ಕೆತ್ತೂರು ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಸ್ವಾಗತಿಸಿದರು, ಶಾಲಾ ಆಡಳಿತ ಸಮಿತಿಯ ಹನೀಫ್ ಎಂ.ಎ.ವಂದಿಸಿದರು.