ಡೈಲಿ ವಾರ್ತೆ:27 ಆಗಸ್ಟ್ 2023

ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟದಿಂದ ಮತ್ತೊಂದು ಮನೆ ಮನೆ ಭಜನೆಗೆ ಚಾಲನೆ

ಕಳೆದ 6 ವರ್ಷದಿಂದ ಭಜನೆ ಉಳಿಸಿ ಬೆಳೆಸಲು ಹಲವಾರು ಕಾರ್ಯಕ್ರಮ ಆಯೋಜನೆ ಮಾಡುದರ ಮೂಲಕ ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟ ಉಡುಪಿ ಜಿಲ್ಲೆಗೆ ಮಾದರಿಯಾಗಿದೆ.

ಒಕ್ಕೂಟದ ಎಲ್ಲಾ ಕಾರ್ಯಕ್ರಮ ದಲ್ಲೂ ಬಹು ಮುಖ್ಯ ಮತ್ತು ಮಾದರಿ ಹಾಗೂ ಪ್ರೇರಣೆಯ ಕಾರ್ಯಕ್ರಮ ಅಂದರೆ ಅದು ಮನೆ ಮನೆ ಭಜನೆ.

ಕುಂದಾಪುರ ತಾಲೂಕು ಭಜನಾ ಒಕ್ಕೂಟದ ಸಹಕಾರದಲ್ಲಿ ವಿವಿಧ ಭಜನಾ ಮಂಡಳಿಯವರು ಮಹಿಳಾ ಭಜನಾ ಮಂಡಳಿ ಸೇರಿದಂತೆ ಸರಿ ಸುಮಾರು 4000 ಮಿಕ್ಕಿ ಮನೆಯಲ್ಲಿ ಭಜನಾ ಪುಸ್ತಕ ತಾಳ ನೀಡಿ ಭಜನಾ ಕಾರ್ಯಕ್ರಮ ಆಯೋಜನೆ ಮಾಡಿದ್ದ್ದು ಹೆಮ್ಮೆಯ ಪಡುವ ವಿಚಾರವಾಗಿದೆ.

ಇದೀಗ ಮನೆ ಮನೆ ಭಜನೆಯ ಮಾದರಿಯಾಗಿ ಹಾಲಾಡಿ ವಲಯದಲ್ಲಿ ಪ್ರಥಮ ಬಾರಿಗೆ ಹಾಲಾಡಿ ವಲಯ ಅಧ್ಯಕ್ಷರಾದ ಸುಶೀಲ ಶೆಡ್ತಿ ಹಾಗೂ ಕಾರ್ಯದರ್ಶಿ ಪಲ್ಲವಿ ಹಾಗೂ ಊರಿನವರ ನೇತೃತ್ವದಲ್ಲಿ ಹಾಗೂ ಭಜನಾ ಮಂಡಳಿಯವರ ಸಹಕಾರದಲ್ಲಿ ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿ ರಾಚನಬೆಟ್ಟು ಜನ್ನಾಡಿ ಸದಸ್ಯರಿಂದ ಇಂದು ಮನೆ ಮನೆ ಭಜನೆಗೆ ಆರಂಭ ಮಾಡುತ್ತಿದ್ದು ನಿಮ್ಮ ಮನೆ ಮನೆ ಭಜನಾ ಕಾರ್ಯಕ್ರಮ
ಶ್ರೀ ರಾಮ ದೇವರು ಜಟ್ಟಿಗೇಶ್ವರ ದೇವರ ಅನುಗ್ರಹದಿಂದ ಯಶಸ್ವಿ ಯಾಗಿ ಸಾಗಿ ಜನ್ನಾಡಿ ಪರಿಸರದ ಪ್ರತಿ ಮನೆ ಮನೆಯಲ್ಲಿ ತಾಳದ ವೇಧ ಘೋಷಣೆ ಮೊಳಗಲಿ ಎಂದು ಶುಭ ಹಾರೈಕೆ ಯೊಂದಿಗೆ
ಜಯಕರ ಪೂಜಾರಿ ಗುಲ್ವಾಡಿ
ಗೌರವ ಅಧ್ಯಕ್ಷರು
ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟ ಕುಂದಾಪುರ.