ಡೈಲಿ ವಾರ್ತೆ:29 ಆಗಸ್ಟ್ 2023

ವರದಿ : ವಿದ್ಯಾಧರ ಮೊರಬಾ

ಅಂಕೋಲಾ: ಮನೆ, ಹಾಗೂ ಬೈಕ್ ಕಳ್ಳತನದ ಖತರ್ನಾಕ್ ಕಳ್ಳರ ಬಂಧನ- 2 ಬೈಕ್ ವಶಕ್ಕೆ, ಎಸ್ಪಿಯಿಂದ ಅಂಕೋಲಾ ಪೊಲೀಸರಿಗೆ ಅಭಿನಂದನೆ ಪ್ರಸಂಶೆ


ಅಂಕೋಲಾ : ತಾಲೂಕಿನ ಗ್ರಾಮೀಣ ಮತ್ತು ಪಟ್ಟಣ ಸೇರಿದಂತೆ ಹಲವು ದಿನಗಳಿಂದ ನಡೆದ ಮನೆ ಕಳ್ಳತನ ಹಾಗೂ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಅಂಕೋಲಾ ಪೊಲೀಸರ ತನಿಖಾ ತಂಡದವರು ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಬೈಕ್‍ಗಳನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ.

ಆರೋಪಿತರು ಮಂಗಳೂರಿನ ಬೆಂಗ್ರೆ ನಿವಾಸಿ ಹಾಲಿ ಸುರತ್ಕಲ್ ಕೃಷ್ಣಾಪುರದ ಡಿಜೆ ಅಪರೇಟಿರ್ ಮಹಮ್ಮದ್ ಸಲ್ಮಾನ್ ತಂದೆ ಮಹಮ್ಮದ ಗೌಸ (23), ಕಾರವಾರ ಕೋಡಿಭಾಗದ ಕಾಳಿ ರಿವರ್ ಗಾರ್ಡ್‍ನ ಹತ್ತಿರದ ನಿವಾಸಿ ರೋಹಿತ್ ಆನಂದ ಹರಿಜನ (21) ಬಂಧೀತ ಆರೋಪಿಗಳಾಗಿದ್ದಾರೆ.

ಆ.15ರಂದು ಅಂಕೋಲಾ ಬಸ್ ನಿಲ್ದಾಣದ ಎದುರಿನ ರಸ್ತೆ ಬದಿಯಲ್ಲಿ ನಿಲ್ಲಿಸಿಟ್ಟ (ಕೆಎ30/ಎಲ್3080) ನೊಂದಣ ಸಂಖ್ಯೆಯ ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನ್ನು ಕಳ್ಳತನವಾಗಿರುವ ಕುರಿತು ಬೊಬ್ರುವಾಡ ಬ್ರಾಹ್ಮಣ ದೇವಸ್ಥಾನದ ನಿವಾಸಿ ನಿವೃತ್ತ ನೌಕರ ಗಣಪತಿ ಶಿವು ನಾಯ್ಕ ದೂರು ನೀಡಿದ್ದರು.

ಕಳ್ಳತನದ ವಿವರ : ಮಹಮ್ಮದ ಸಲ್ಮಾನ ಈತನು ತಾನು ಉಡುಪಿಯ ರಂಜಿತ ಪೂಜಾರಿಯೊಂದಿಗೆ ಅಂಕೋಲಾದ ರಾಷ್ಟ್ರೀಯ ಹೆದ್ದಾರಿಯ ಅಂಗಡಿ ಮುಂದೆ ನಿಲ್ಲಿಸಿಟ್ಟ ಒಂದು ಬೈಕ್ ಕಳ್ಳತನ ಮಾಡಿದ್ದಾಗಿ, ಕಾರವಾರದ ರೋಹಿತ ಹರಿಜನ ಸೇರಿಕೊಂಡು ಕುಮಟಾ ತಾಲೂಕಿನ ಹಿರೇಗುತ್ತಿಯಲ್ಲಿ ಒಂದು ಮನೆ ಗಳ್ಳತನ ಮಾಡಿರುವ ಕುರಿತು, ಅಂಕೋಲಾ ಬಸ್ ನಿಲ್ದಾಣದ ಎದುರಿನ ರಸ್ತೆ ಅಂಚಿಗೆ ನಿಲ್ಲಿಸಿಟ್ಟ ಬೈಕ್ ಮತ್ತು ಕಾರವಾರದ ಕೋಡಿಭಾಗದ ನದಿವಾಡದಲ್ಲಿ ಒಂದು ಬೈಕ್, ಅಂಕೋಲಾ ಪುರಲಕ್ಕಿ ಬೇಣದ ಒಂದು ಮನೆ ಹಾಗೂ ವಂದಿಗೆಯ ಒಂದು ಮನೆಯಲ್ಲಿ ನಿಲ್ಲಿಸಿಟ್ಟ ಬೈಕ್ ಕಳ್ಳತನಕ್ಕೆ ಯತ್ನ ಮತ್ತು ಅಂಕೋಲಾ ವಂದಿಗೆಯ ಜಮಗೋಡ್, ಶೆಟಗೇರಿಯಲ್ಲಿ ತಲಾ ಒಂದು ಮನೆಯಂತೆ ಒಟ್ಟೂ 3 ಮನೆ ಕಳ್ಳತನ ಮಾಡಿರುವದಾಗಿ ಪೊಲೀಸ್ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಜಿಲ್ಲಾ ಎಸ್ಪಿ ವಿಷ್ಣುವರ್ಧನ ಅವರ ಮಾರ್ಗದರ್ಶನದಲ್ಲಿ ಪಿಐ ಸಂತೋಷ ಶೆಟ್ಟಿ ನೇತೃತ್ವದಲ್ಲಿ ಪಿಎಸ್‍ಐ ಗಳಾದ ಉದ್ಧಪ್ಪ ಧರೆಪ್ಪನವರ, ಜಯಶ್ರೀ ಪ್ರಭಾಕರ, ಸುಹಾಸ್ ಆರ್., ಸುನೀಲ ಹುಲ್ಲೊಳ್ಳಿ, ಸಿಬ್ಬಂದಿಗಳಾದ ಶ್ರೀಕಾಂತ ಕಟಬರ, ವೆಂಕಟ್ರಮಣ ನಾಯ್ಕ, ಮನೋಜ ಡಿ, ಆಶೀಪ್ ಕುಂಕೂರು, ಜಗದೀಶ ನಾಯ್ಕ, ಕಿರಣ ನಾಯ್ಕ, ಗುರುರಾಜ ನಾಯ್ಕ, ಸಿಡಿಆರ್ ವಿಭಾಗದ ಸಿಬ್ಬಂದಿಗಳಾದ ಉದಯ ಗುನಗಾ, ರಮೇಶ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.