ಡೈಲಿ ವಾರ್ತೆ:30 ಆಗಸ್ಟ್ 2023

ವರದಿ : ವಿದ್ಯಾಧರ ಮೊರಬಾ

ರಕ್ಷಾ ಬಂಧನ ಹಬ್ಬದ ಶುಭ ದಿನ ಗೃಹಲಕ್ಷ್ಮೀ ಯೋಜನೆ ಶಾಶ್ವತವಾಗಿರಲಿ : ಸುಕ್ರೀ ಗೌಡ

ಅಂಕೋಲಾ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಗೆ ರಾಜ್ಯಾದಂತ ಏಕಕಾಲ ದಲ್ಲಿ ಚಾಲನೆ ನೀಡುವ ಪ್ರಯುಕ್ತ ಅಂಕೋಲಾ ತಾಲೂಕಾ ಮಟ್ಟದ ಕಾರ್ಯಕ್ರಮ ಪಟ್ಟಣದ ಸ್ವತಂತ್ರ್ಯಾ ಸಂಗ್ರಾಮ ಭವನದಲ್ಲಿ ಬುಧವಾರ ಪದ್ಮಶ್ರೀ ಪುರಸ್ಕøತರಾದ ಸುಕ್ರಿ ಗೌಡ ಮತ್ತು ಡಾ.ತುಳಸಿ ಗೌಡ ಜಂಟಿ ಯಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಸುಕ್ರಿ ಗೌಡ ಮಾತನಾಡಿ, ನೂಲು ಹುಣ್ಣಮೆ ಹಾಗೂ ರಕ್ಷಾ ಬಂಧನ ಹಬ್ಬದ ಶುಭ ದಿನದಂದೇ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಇದರಿಂದ ಎಲ್ಲ ಗ್ರಹಿಣಿಯರಿಗೆ ಒಳ್ಳೆಯದಾಗಲಿ ಮತ್ತು ಯೋಜನೆ ಶಾಶ್ವತವಾಗಿರಿ ಎಂದು ಹಾರೈಸಿ ಯೋಜನೆಯ ಕುರಿತಂತೆ ಒಂದು ಜಾನಪದ ಗೀತೆಯನ್ನು ಹಾಡಿದರು.

ಪದ್ಮಶ್ರೀ ಡಾ. ತುಳಸೀ ಗೌಡ ಮಾತನಾಡಿ, ನನ್ನ ವೃತ್ತಿಯೇ ಗಿಡ ನೆಡುವದಾಗಿತ್ತು ಗಿಡಗಳಿಂದ ತಂಪು ಗಾಳಿ, ಕಟ್ಟಿಗೆ, ಸೊಪ್ಪು ಹೀಗೆ ಅನೇಕ ಪ್ರಯೋಜನ ಇದೆ. ಎಲ್ಲರೂ ಈ ಕಾರ್ಯವನ್ನು ಮುಂದುವರೆಸಿ ಪರಿಸರವನ್ನು ಉಳಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಹಸೀಲ್ದಾರ್ ಅಶೋಕ ಎನ್.ಭಟ್ ಮಾತನಾಡಿ, ಸರ್ಕಾರ ಗೃಹಣ ಯರಿಗಾಗಿ ಉತ್ತಮ ಯೋಜನೆಯನ್ನು ತಂದಿದೆ. ಈ ಯೋಜನೆಗಾಗಿ ತಾಲೂಕಿನಲ್ಲಿ 23,795 ಮಹಿಳೆ ಯರು ನೋಂದಾಯಿಸಿಕೊಂಡಿದ್ದು, ಸರಿಸಮ 20 ಸಾವಿರಕ್ಕಿಂತ ಹೆಚ್ಚು ಮಹಿಳೆಯರು ಪ್ರಯೋಜನವಾ ಗಲಿದೆ. ಇಂದು ಸಹೋದರತ್ವದ ಬಾಂಧವ್ಯವನ್ನು ಗಟ್ಟಿಗೊಳಿಸುವ ರಕ್ಷಾ ಬಂಧನ ಈ ದಿವಸ ಅಂಕೋಲಾ ದ ಎರಡು ಕೀರ್ತಿ ಕಲಶಗಳಾದ ಕಡಲ ತಡಿಯ ಪದ್ಮಶ್ರೀ ಸುಕ್ರೀ ಗೌಡ ಮತ್ತು ಸಹ್ಯಾದ್ರಿಯ ಮಡಲಿನ ಪದ್ಮಶ್ರೀ ತುಳಸೀ ಗೌಡರ ಕೈಯಿಂದ ಉದ್ಘಾಟನೆಗೊಂಡಿದೆ.
ಈ ಯೋಜನೆ ಖಂಡಿತವಾಗಿ ಯಶಸ್ವಿಯಾಗು ತ್ತದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಎನ್.ಆರ್.ಸ್ವಾಮಿ, ವಿವಿಧ ಇಲಾಖೆ ಅಧಿಕಾರಿಗಳಾದ ಡಾ.ಜಗದೀಶ ನಾಯ್ಕ, ಮಹಮ್ಮದ ಇಸಾಕ ಸೈಯದ, ಶ್ರೀಧರ ನಾಯ್ಕ, ಪುರಸಭೆ ಸದಸ್ಯರಾದ ಕಾರ್ತಿಕ ಎಸ್.ನಾಯ್ಕ, ಮಂಜುನಾಥ ನಾಯ್ಕ, ಸಬ್ಬೀರ ಶೇಖ್, ಅಶೋಕ ಶೆಡಗೇರಿ, ನಿರ್ಮಾಲಾ ಹುಲಸ್ವಾರ, ಪ್ರಮುಖರಾದ ಪುರುಷೋತ್ತಮ ನಾಯ್ಕ, ಸುರೇಶ ನಾಯ್ಕ, ಮೊನ್ನಪ್ಪ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುಕ್ರೀ ಗೌಡ ಮತ್ತು ತುಳಸೀ ಗೌಡರನ್ನು ಸನ್ಮಾನಿಸಿ ಗೌರವಿಸಲಾಯತು. ಸಿಡಿಪಿಓ ಸವಿತಾ ಶಾಸ್ತ್ರಿಮಠ ಸ್ವಾಗತಿಸಿದರು. ಶಿಕ್ಷಕ ರಾಮನಾಥ ಸಂಗಡಿಗರು ಪ್ರಾರ್ಥಿಸಿ, ನಾಡಗೀತೆ ಪ್ರಸ್ತುತ ಪಡಿಸಿ ದರು. ಜೈಹಿಂದ ಪ್ರೌಢಶಾಲೆಯ ಶಿಕ್ಷಕ ಪ್ರಶಾಂತ ನಾಯ್ಕ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಐನ್ನೂರು ಕ್ಕಿಂತ ಹೆಚ್ಚು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕಾರ್ಯ ಕ್ರಮದ ನೇರ ಪ್ರಸಾರವನ್ನು ಡಿಜಿಟಲ್ ಪರದೆಯ ಮೇಲೆ ವೀಕ್ಷಿಸಿದರು.
ಗೃಹಲಕ್ಷ್ಮೀ ಯೋಜನೆಯ ಕಾರ್ಯಕ್ರಮದ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಮಹಿಳೆಯರು ಸಭಾಭವನದಿಂದ ಹೊರಗೆ ಹೋಗುವಂತಾ ಗಿದ್ದು, ಕೆಲ ಗೊಂದಲ್ ವಾತಾವರಣ ಸೃಷ್ಠಿಯಾಯಿತು. ಪುರಸಭೆ ಸಿಬ್ಬಂದಿಗಳು ಮಹಿಳೆಯರಿಗೆ ಮೊದಲೇ ಮೊಬೈಲ್ ತರುವಂತೆ ಮತ್ತು ಓಟಿಪಿ ಬಿಡಲಾಗುವುದು ಎಂದಿದ್ದರಂತೆ. ಹೀಗಾಗಿ ಮಹಿಳೆ ಯರು ಓಟಿಪಿ ಬರುತ್ತದೆಂದು ಕಾರ್ಯಕ್ರಮವನ್ನು ಅರ್ಧದಲ್ಲಿಯೇ ಬಿಟ್ಟು ಹೊರಗೆ ಹೋಗಲು ಪ್ರಾರಂಭಿಸಿದರು. ಓಟಿಪಿ ಬಂದರೆ ಮಾತ್ರ ಗೃಹಲಕ್ಷ್ಮೀ ಹಣ ಬರುತ್ತಂತೆ ಎಂದು ಗಾಳಿಸುದ್ದಿ ಹರಡಿದ್ದರಿಂದ ಈ ಗೊಂದಲಕ್ಕೆ ಕಾರಣವಾಗಿತ್ತು. ವಾಸ್ತವದಲ್ಲಿ ಪುರಸಭೆಯವರು ಸ್ವಚ್ಛ ಭಾರತ ಸರ್ವೇಕ್ಷಣೆಯ ಅಭಿಪ್ರಾ ಯದ ಓಟಿಪಿ ಪಡೆಯಲು ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ ಸರಿಯಾದ ಮಾಹಿತಿ ಕೊರತೆಯಿಂದ ಗೊಂದಲ ಸೃಷ್ಠಿಯಾಗಿರುವುದನ್ನು ತಹಸೀಲ್ದಾರ್ ಅಶೋಕ ಭಟ್ ಮತ್ತು ಸಿಡಿಪಿಓ ಸವಿತಾ ಶಾಸ್ತ್ರಿಮಠ ಅವರು ಮಹಿಳೆಯರ ಬಳಿ ತೆರಳಿ ವಸ್ತುಸ್ಥಿತಿಯನ್ನು ತಿಳಿಸಿ ಮತ್ತೆ ಕಾರ್ಯಕ್ರಮ ಸುಸೂತ್ರಗೊಳಿಸಿದರು.