ಡೈಲಿ ವಾರ್ತೆ:31 ಆಗಸ್ಟ್ 2023
ಓಣಂ ರಜೆಯಲ್ಲಿ ಬಂದಿದ್ದ ಮೂವರು ಸಹೋದರಿಯರು ತಂದೆಯ ಕಣ್ಣೆದುರೇ ನೀರಿನಲ್ಲಿ ಮುಳುಗಿ ಮೃತ್ಯು.!
ಪಲಕ್ಕಾಡ್: ಓಣಂ ಹಬ್ಬದ ಸಂಭ್ರಮಾಚರಣೆಗೆಂದು ಊರಿಗೆ ಬಂದಿದ್ದ ಮೂವರು ಸಹೋದರಿಯರು ತಂದೆಯೇ ಕಣ್ಣೆದುರೇ ನೀರುಪಾಲಾದ ಘಟನೆ ಕೇರಳದ ಪಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ.
ರಮ್ಶೀನಾ (23), ನಶಿದಾ (26) ಮತ್ತು ರಿನ್ಶಿ (18) ನೀರಲ್ಲಿ ಮುಳುಗಿ ಸಾವನ್ನಪಿದ ದುರ್ದೈವಿಗಳಾಗಿದ್ದಾರೆ.
ಮದುವೆಯಾದ ರಮ್ಮಿನಾ ಮತ್ತು ನಶಿದಾ ಓಣಂ ಹಬ್ಬದ ಹಿನ್ನೆಲೆಯಲ್ಲಿ ತವರು ಮನೆಗೆ ಬಂದಿದ್ದರು. ತಂದೆಯೊಂದಿಗೆ ಮೂವರು ಹೆಣ್ಣುಮಕ್ಕಳು ಸ್ನಾನಕ್ಕೆ ಮತ್ತು ಬಟ್ಟೆ ಒಗೆಯಲೆಂದು ಭೀಮನಾಡಿನ ಹೊಂಡಕ್ಕೆ ತೆರಳಿದ್ದರು.
ಈ ವೇಳೆ ಸಹೋದರಿಯೊಬ್ಬಳು ಆಕಸ್ಮಿಕವಾಗಿ ಕೆರೆಗೆ ಜಾರಿ ಬಿದ್ದಿದ್ದಾಳೆ. ಅಲ್ಲಿಯೇ ಇದ್ದ ಇನ್ನಿಬ್ಬರು ಸಹೋದರಿಯರು ಆಕೆಯನ್ನು ಉಳಿಸಲೆಂದು ಕೆರೆಗೆ ಹಾರಿದರು. ಆದರೆ ಪ್ರಯತ್ನ ವ್ಯರ್ಥವಾಯಿತು.
ಮೂವರು ಸಹ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಣ್ಣೆದುರಲ್ಲೇ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದನ್ನು ಕಂಡು ಬೆಚ್ಚಿಬಿದ್ದ ತಂದೆ ಆ ಬಗ್ಗೆ ಮಾತನಾಡಲು ಕಷ್ಟಪಟ್ಟರು.
ತನ್ನ ಮಕ್ಕಳನ್ನು ರಕ್ಷಿಸಲು ತಂದೆಯ ಹತಾಶ ಪ್ರಯತ್ನವನ್ನು ನೋಡಿ, ಹತ್ತಿರದಲ್ಲಿದ್ದ ವಲಸೆ ಕಾರ್ಮಿಕರು, ಸ್ಥಳೀಯರಿಗೆ ಮಾಹಿತಿ ನೀಡಿದರು.
ಅಷ್ಟೊತ್ತಿಗಾಗಲೇ ತಡವಾಗಿತ್ತು. ನಿರ್ಜನ ಪ್ರದೇಶವಾಗಿದ್ದರಿಂದ ರಕ್ಷಣೆಯೂ ವಿಳಂಬವಾಯಿತು. ಸ್ಥಳೀಯರು ಮೂವರು ಸಹೋದರಿಯರನ್ನು ಹೊರತೆಗೆದು ಮನ್ನಾರ್ಕಾಡು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಸಲಾಗಲಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿ.
ಪೋಷಕರ ಮತ್ತು ಕುಟುಂಬಸ್ತರ ಆಕ್ರಂದನ ಮುಗಿಲು ಮುಟ್ಟಿದೆ.