ಡೈಲಿ ವಾರ್ತೆ:02 ಸೆಪ್ಟೆಂಬರ್ 2023

ಕುಖ್ಯಾತ ಸರಗಳ್ಳನನ್ನು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಕೋಟೇಶ್ವರ ಗ್ರಾಮಸ್ಥರು (ವಿಡಿಯೋ ವೈರಲ್)

ವಿಡಿಯೋ ವೀಕ್ಷಿಸಿ

ಕುಂದಾಪುರ: ಕುಖ್ಯಾತ ಸರಗಳ್ಳನನ್ನು ಹಿಡಿದ ಕೋಟೇಶ್ವರ ಗ್ರಾಮಸ್ಥರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಹೊರ ರಾಜ್ಯದವನಾಗಿರುವ ಆರೋಪಿ ಕೋಟೇಶ್ವರದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಸರವೊಂದನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಂದರ್ಭ ಮಹಿಳೆ ಕೂಗಿಕೊಂಡಿದ್ದು, ಸ್ಥಳೀಯರು ಅಲರ್ಟ್ ಆಗಿ ಕಳ್ಳನನ್ನು ಹಿಡಿದಿದ್ದಾರೆ. ಬಳಿಕ ಧರ್ಮದೇಟು ನೀಡಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಈ ವಿಡಿಯೋ ಎಲ್ಲಡೆ ವೈರಲ್ ಆಗಿದೆ.