ಡೈಲಿ ವಾರ್ತೆ:03 ಸೆಪ್ಟೆಂಬರ್ 2023

ವರದಿ : ವಿದ್ಯಾಧರ ಮೊರಬಾ

ಡಾ.ರಜತ್ ಶಿರೂರು ಮಾಲಿಕತ್ವದ ನಿರ್ಮಲ ಆಯುರ್ವೇದ ಮೆಡಿಕಲ್ & ಕ್ಲಿನಿಕ್ ಶುಭಾರಂಗ
ದೈಹಿಕ, ಮಾನಸಿಕ ಆರೋಗ್ಯ ರಕ್ಷಿಸುವ ಆಯುರ್ವೇದ : ವಿಠ್ಠಲದಾಸ ಕಾಮತ್

ಅಂಕೋಲಾ : ಆಯುರ್ವೇದ ನಮ್ಮ ಭಾರತದ ಪ್ರಾಚೀನ ಔಷಧೀಯ ಪದ್ಧತಿಯಾಗಿದ್ದು, ಇಂದು ಅಲೋಪತಿಯ ಭರಾಟೆಯಲ್ಲಿ ಇದು ಮರೆಯಾಗುತ್ತಿತ್ತು. ಆದರೆ ಯಾವುದೇ ಅಡ್ಡ ಪರಿಣಾಮ ಇಲ್ಲದೇ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಿಸುವ ಆಯುರ್ವೇದ ಈಗೀಗ ಮುನ್ನೆಲೆಗೆ ಬರುತ್ತಿರು ವುದು ಸಂತಸದ ಸಂಗತಿ. ಈ ಕ್ಲಿನಕ್ ಆಯುರ್ವೇದವನ್ನು ಮನೆಮನೆಗೆ ತಲುಪಿಸಲಿ, ಇದಕ್ಕೆ ನಮ್ಮೆಲ್ಲರ ಸಹಕಾರ ಇದೆ ಎಂದು ಹೊಸದಿಂಗತ ದಿನಪತ್ರಿಕೆಯ ಹುಬ್ಬಳ್ಳಿ ಆವೃತ್ತ ಮುಖ್ಯಸ್ಥರು ವಿಠ್ಠಲದಾಸ ಕಾಮತ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಎದುರಿನ ಶ್ರೀ ಕೃಷ್ಣ ಹೋಟೆಲ್ ಮೇಲಿನ ಮಹಡಿಯಲ್ಲಿ ಭಾನುವಾರ ಡಾ. ರಜತ್ ಶಿರೂರು ಮಾಲಿಕತ್ವದ ನಿರ್ಮಲ ಆಯುರ್ವೇದ ಮೆಡಿಕಲ್ & ಕ್ಲಿನಿಕ್ ಶುಭಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತ ಉಪನ್ಯಾಸಕ ಡಾ. ರಾಮ ಶಿರೂರು ಮಾತನಾಡಿ, ಆಯುರ್ವೇದವು ಆರೋಗ್ಯ ಮತ್ತು ವೈಯಕ್ತೀಕ ರಿಸಿದ ಔಷಧದ ಸಮಗ್ರ ವಿಧಾನವನ್ನು ಹೊಂದಿರುವ ಜೀವನದ ವಿಜ್ಞಾನವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಯ ಪ್ರಕಾರ ಶೇ.70 ರಿಂದ 80 ರಷ್ಟು ಜನರು ತಮ್ಮ ಆರೋಗ್ಯ ರಕ್ಷಣೆಯಲ್ಲಿ ಮುಖ್ಯವಾಗಿ ಗಿಡ ಮೂಲಿ ಕೆಗಳ ಮೂಲಗಳ ಅಸಾಂಪ್ರದಾಯಿಕ ಔಷಧಿಗಳ ಮೇಲೆ ಅವಲಂಬಿತರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ನಿವೃತ್ತ ನಿರೀಕ್ಷಕ ಅನಂತ ಶಾನಭಾಗ, ನಿವೃತ್ತ ಶಿಕ್ಷಕರಾದ ಪಾಂಡುರಂಗ ಹರಿಕಂತ್ರ, ಲಕ್ಷ್ಮಣ ಹರಿಕಂತ್ರ, ಶಿಕ್ಷಣ ಇಲಾಖೆಯ ನಿವೃತ್ತ ಅಧೀಕ್ಷಕ ಮೋಹನ ನಾಯ್ಕ, ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಬಾನು ಹರಿಕಂತ್ರ, ಶಿಕ್ಷಕಿ ನಿರ್ಮಲಾ ಶಿರೂರು, ಜಿಲ್ಲಾ ಇಂಜಿನಿ ಯರ್ಸ್ ಅಸೋಸಿಯೇಶನ್ ಅಧ್ಯಕ್ಷ ಹರಿಹರ ಹರಿಂತ್ರ ಹಿಲ್ಲೂರು, ಉ.ಕ.ಜಿಲ್ಲಾ ಮೀನುಗಾರ ಫೇಡರೇಶನ್ ನಿರ್ದೇಶಕ ರಾಜು ಟಿ.ಹರಿಕಂತ್ರ, ಪ್ರಮುಖರಾದ ದೇವೇಂದ್ರ ಹರಿಕಂತ್ರ, ಪ್ರಶಾಂತ ಶೆಟ್ಟಿ, ಕಾಶಿನಾಥ ರಾಯ್ಕರ, ಕೆ.ರಮೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.