


ಡೈಲಿ ವಾರ್ತೆ:05 ಸೆಪ್ಟೆಂಬರ್ 2023


ದಕ್ಷಿಣ ಕನ್ನಡ: ಯುವಕನಿಗೆ ಚೂರಿ ಇರಿತ ಪ್ರಕರಣ ಮತ್ತೋರ್ವ ಆರೋಪಿಯ ಬಂಧನ
ಸುರತ್ಕಲ್: ಸುರತ್ಕಲ್ ಠಾಣಾ ವ್ಯಾಪ್ತಿಯ ಕಳವಾರು ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವಕನಿಗೆ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊರ್ವ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಒಟ್ಟು ಬಂಧಿತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಕೈಕಂಬ ಕಿನ್ನಿಕಂಬಳ ಕಂದಾವರ ಪದವು ನಿವಾಸಿ ಪುನೀತ್ (29 ) ಬಂಧಿತ ಆರೋಪಿ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಮುಖ ಅರೋಪಿ ಪ್ರಶಾಂತ್ ಯಾನೆ ಪಚ್ಚು, ಕಳವಾರು ಆಶ್ರಯ ಕಾಲನಿ ನಿವಾಸಿ ಧನರಾಜ್ ಮತ್ತು ಕಳವಾರು ಚರ್ಚ್ ಗುಡ್ಡೆ ಸೈಟ್ ನಿವಾಸಿ ಯಜ್ಞೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದರು.