ಡೈಲಿ ವಾರ್ತೆ:05 ಸೆಪ್ಟೆಂಬರ್ 2023
ವರದಿ : ವಿದ್ಯಾಧರ ಮೊರಬಾ
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಮತ್ತು ಮಕ್ಕಳ ಕೊರತೆ ಇದ್ದರು ಶಿಕ್ಷಕರ ಪ್ರಾಮಾಣಕ ಸೇವೆ : ನಾಗೇಶ ರಾಯ್ಕರ
ಅಂಕೋಲಾ : ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಣದ ವ್ಯಾಪಾರಿಕರಣವಾಗುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಮತ್ತು ಮಕ್ಕಳ ಕೊರತೆ ಇದ್ದರು ಕೂಡ ಶಿಕ್ಷಕರು ಅತ್ಯಂತ ಪ್ರಾಮಾಣ ಕತೆಯಿಂದ ಸೇವೆಸಲ್ಲಿಸುವ ಮೂಲಕ ಮಕ್ಕಳು ಮಾನವರಾಗಿ, ನಾಗರಿಕರಾಗಿ ಇನ್ನೊಬ್ಬರೊಡನೆ ಸ್ನೇಹ, ಗೌರವ-ಘನತೆಗ ಳಿಂದ ವರ್ತಿಸುವಂತೆ ಮಾಡುವವರೇ ನಿಜವಾದ ಶಿಕ್ಷರು ಎಂದು ತಾಪಂ.ಆಡಳಿತಾಧಿಕಾರಿ ನಾಗೇಶ ರಾಯ್ಕರ ಹೇಳಿದರು.
ಪಟ್ಟಣದ ಸ್ಮಾರಕ ಭವನದಲ್ಲಿ ಮಂಗಳವಾರ ಆಯೋಜಿಸಿದ ಶಿಕ್ಷಕರ ದಿನಾಚರಣೆ ಸಮಿತಿ ಅಂಕೋಲಾ ಇವರ ಆಶ್ರಯದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಿ ಅವರು ಮಾತನಾಡಿ, ಜಿಲ್ಲೆಯ 4 ಶಿಕ್ಷಕರಿಗೆ ಶ್ರೇಷ್ಠ ಪ್ರಶಸ್ತಿ ಲಭ್ಯವಾಗಿರುವುದೇ ಜಿಲ್ಲೆ ಯಲ್ಲಿ ಶಿಕ್ಷಣ ಕ್ಷೇತ್ರ ಉತ್ತಮವಾಗಿದೆ ಎನ್ನುವದಕ್ಕೆ ಸಾಕ್ಷಿ ಎಂದರು.
ತಹಸೀಲ್ದಾರ್ ಅಶೋಕ ಎನ್.ಭಟ್ ಮಾತನಾಡಿ, ಮುಗ್ಧ ಮನಸ್ಸಿನ ಮಕ್ಕಳ ಜತೆ ಅತ್ಯಂತ ಮುಗ್ದತೆ ಯಿಂದ ಪಾಠ ಮಾಡುವ ವೃತ್ತಿ ಶಿಕ್ಷಕರ ವೃತ್ತಿಯಾಗಿರುವುದರಿಂದ ಶಿಕ್ಷಕರೂ ಅಷ್ಟೇ ಮುಗ್ದ ಮನಸ್ಸಿನವ ರಾಗಿರುತ್ತಾರೆ. ಶಿಕ್ಷಕರು ಮುಂದಿನ ಭವಿಷ್ಯವನ್ನು ರೂಪಿಸುವದರಿಂದ ತಮ್ಮ ವೃತ್ತಿಯಲ್ಲಿ ಆತ್ಮ ಸಂತ್ರಪ್ತಿ ಯನ್ನು ಹೊಂದಿರುತ್ತಾರೆ ಎಂದರು.
ಬಿಇಓ ಮಂಗಳಲಕ್ಷ್ಮೀ ಪಾಟೇಲ್ ತಮ್ಮ ಪ್ರಾಸ್ತಾವಿಕ ಮಾತನಲ್ಲಿ ಇತಿಹಾಶ-ಪುರಾಣ, ಸನಾತನ ಧರ್ಮ ಗಳಲ್ಲಿಯೂ ಗುರು-ಪರಂಪರೆ ಮತ್ತು ಗೌರವದ ಕುರಿತು ಕಾಣಬಹುದಾಗಿದೆ ಎಂದರು. ಹಿರಿಯ ಸಾಹಿತಿ ಹೊನ್ನಮ್ಮ ನಾಯಕ ಶಿಕ್ಷಕರ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. ತಾಪಂ. ಪ್ರಭಾರ ಇಓ ಸುನೀಲ ಎಂ. ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ 50 ಕ್ಕಿಂತ ಹೆಚ್ಚು ನಿವೃತ್ತ ಶಿಕ್ಷಕ ಮತ್ತು ಶಿಕ್ಷಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕøತರಾದ ಲಕ್ಷ್ಮೀ ನಾರಾಯಣ ನಾಯಕ, ವಿನಾಯಕ ಪುಟ್ಟು ನಾಯ್ಕ, ವಿಜಯಲಕ್ಷೀ ಎಚ್.ಗಾಂವಕರ, ಮೋಹನ ಬಾಬು ನಾಯ್ಕ, ಶಿಕ್ಷಕ ಸೇವಾರತ್ನ ಪ್ರಶಸ್ತಿ ವಿಜೇತರಾದ ನಾಗರಾಜ ಹಳೇಹಳ್ಳಿ, ವಿನೋದ ಎಸ್.ನಾಯ್ಕ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಅರ್ಬನ ಬ್ಯಾಂಕಿನ ಉಪಾಧ್ಯಕ್ಷ ಗೋವಿಂದ್ರಾಯ ನಾಯ್ಕ, ಅಕ್ಷರ ದಾಸೋಹ ಸಹಾಯ ನಿರ್ದೇಶಕ ವಿ.ಟಿ.ನಾಯಕ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಧ್ಯಾಪಕ ಭಾಸ್ಕರ ಗಾಂವಕರ, ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ ನಾಯಕ, ಪದವಿ ಪೂರ್ವ ಕಾಲೇಜ ಉಪನ್ಯಾಸಕರ ಸಂಘದ ಅಧ್ಯಕ್ಷ ಮಹೇಶ ನಾಯಕ ಹಿಚ್ಕಡ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಯ ನಾಯಕ, ಮಾದ್ಯಮಿಕ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಗಣಪತಿ ನಾಯಕ, ಶಿಕ್ಷಕ ದಿನಾಚರಣೆಯ ನೋಡಲ್ ಅಧಿಕಾರಿ ಬಿ.ಎಲ್.ನಾಯ್ಕ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಉದಯ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿಕ್ಷಕ ರಾಮನಾಥ ಸಂಗಡಿಗರು ರೈತಗೀತೆ ಪ್ರಸ್ತುತ ಪಡಿಸಿದರು, ಪ್ರಾ.ಶಾ.ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ ಸನ್ಮಾನಿತರ ಯಾದಿ ಓದಿದರು. ಶಿಕ್ಷಕ ಬಾಲಚಂದ್ರ ನಾಯಕ, ವೀಣಾ ಹೆಗಡೆ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಹರ್ಷಿತಾ ನಾಯಕ ನಿರ್ವಹಿಸಿದರು.