ಡೈಲಿ ವಾರ್ತೆ:07 ಸೆಪ್ಟೆಂಬರ್ 2023

ತೆಲಂಗಾಣದಲ್ಲಿ ವಿಚಿತ್ರ ಘಟನೆ: ಬಾರಿ ಮಳೆಯಿಂದ ರಸ್ತೆಗಳ ಮೇಲೆ ಮೋಡದಂತ ಬಿಳಿ ಬಣ್ಣದ ವಸ್ತು ಜಮಾವಣೆ

ತೆಲಂಗಾಣ: ತೆಲಂಗಾಣದ ಶಿರಡಿ ನಗರ ಮತ್ತು ಕುಕಟ್ಪಲ್ಲಿಯ ಧರಣಿ ನಗರದ ಬೀದಿಗಳಲ್ಲಿ ಭಾರಿ ಮಳೆ ಸುರಿದಿದ್ದು, ಇದರಿಂದಾಗಿ ಭಾರಿ ಪ್ರಮಾಣದಲ್ಲಿ ರಸ್ತೆಗಳ ಮೇಲೆ ಬಿಳಿ ಬಣ್ಣದ ವಸ್ತು ಜಮಾವಣೆಗೊಂಡಿತ್ತು. ನೋಡಲು ಅಕ್ಷರಶಃ ಮೋಡಗಳೇ ಇಳಿದದ್ದೋ ಎನ್ನುವಂತಿದೆ. ಆದರೆ ಇಲ್ಲಿ ಆಗಿರುವ ಘಟನೆಯೇ ಬೇರೆ!

ನಗರದಲ್ಲಿ ಒಂದು ದಿನದ ಹಿಂದೆ ಸುರಿದ ಭಾರಿ ಮಳೆಯ ನಡುವೆಯೇ ಶಿರಡಿ ನಗರ ಮತ್ತು ಕುಕಟ್ಪಲ್ಲಿಯ ಧರಣಿ ನಗರದ ಬೀದಿಗಳಲ್ಲಿ ಭಾರಿ ರಾಸಾಯನಿಕ ನೊರೆ ಸಂಗ್ರಹವಾಗಿದೆ. ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ ಈ ನೊರೆ ಸಂಗ್ರಹವಾಗಿದೆ.

ಕಾಲೋನಿಗಳ ಪಕ್ಕದಲ್ಲಿ ಹಾದುಹೋಗುವ ಮಳೆ ನೀರು ಚರಂಡಿಗಳ ಮೂಲಕ ಹತ್ತಿರದ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯದೊಂದಿಗೆ ಬೆರೆತು ನೊರೆ ರೂಪುಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ಉಂಟಾದ ನೊರೆ ಸ್ಥಳೀಯ ಜನರಿಗೆ ಸಾಕಷ್ಟು ಕಷ್ಟ ನೀಡಿದೆ. ಸ್ಥಳೀಯರ ಪ್ರಕಾರ, ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ನಿನ್ನೆ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿದರು.