ಡೈಲಿ ವಾರ್ತೆ:08 ಸೆಪ್ಟೆಂಬರ್ 2023
ವರದಿ : ವಿದ್ಯಾಧರ ಮೊರಬಾ
ಬೋಟ್ ನಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಯುವಕನೋರ್ವ ಆಯಾ ತಪ್ಪಿ ನೀರಿಗೆ ಬಿದ್ದು ಮೃತ್ಯು
ಅಂಕೋಲಾ : ಯುವಕನೋರ್ವ ಬೋಟ್‍ಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಆಯಾ ತಪ್ಪಿ ಸಮುದ್ರ ನೀರಿಗೆ ಬಿದ್ದು ಸಾವನ್ನೊಪ್ಪಿದ ಘಟನೆ ಗುರುವಾರ ಮಂಗಳೂರು ಮೀನುಗಾರಿಕೆ ಬಂದರು ಪ್ರದೇಶದಲ್ಲಿ ಸಂಭವಿಸಿದೆ.
ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಪಂ. ವ್ಯಾಪ್ತಿಯ ಕೇಣ ಬಾಳೇಕೊಪ್ಪದ ನಿವಾಸಿ ದೇವೇಂದ್ರ ತೇಕಾ ಹರಿಕಂತ್ರ (32) ಎಂಬಾತನೇ ಮೃತಪಟ್ಟ ಯುವಕ. ಈತನು ಬುಧವಾರ ಸಂಜೆ ಮಂಗಳೂರು ಮೀನುಗಾರಿಕೆ ಬಂದರನಲ್ಲಿ ಬೋಟ್‍ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬೋಟ್‍ನಿಂದ ಆಯಾ ತಪ್ಪಿ ಸಮುದ್ರಕ್ಕೆ ಬಿದ್ದು, ನಾಪತ್ತೆಯಾಗಿದ್ದ. ಗುರುವಾರ ಮುಂಜಾನೆ ಬಂದರು ವ್ಯಾಪ್ತಿಯ ಸಮುದ್ರ ತೀರದಲ್ಲಿ ಮೃತ ದೇಹ ಪತ್ತೆ ಯಾಗಿದೆ. ಈ ಕುರಿತು ಈ ಕುರಿತು ಮಂಗಳೂರು ಮೀನುಗಾರಿಕೆ ಬಂದರು ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇವೇಂದ್ರ ಮನೆಯ ಆಧಾರ ಸ್ತಂಭವಾಗಿ ಜೀವನ ನಡೆಸುತ್ತಿದ್ದ. ತಾಯಿ ಮತ್ತು ಮೂವರು ಸಹೋದರಿಯರು ಇದ್ದಾರೆ.