



ಡೈಲಿ ವಾರ್ತೆ:11 ಸೆಪ್ಟೆಂಬರ್ 2023


ವರದಿ: ವಿದ್ಯಾಧರ ಮೊರಬಾ
ಅಂಕೋಲಾ:ರೊಯ್ ಫ್ಯಾಶನ್ ಮಳಿಗೆ ಬೆಂಕಿಗಾಹುತಿ – ಲಕ್ಷಾಂತರ ರೂ. ನಷ್ಟ.!

ಅಂಕೋಲಾ : ಅಂಕೋಲಾ ಪಟ್ಟಣದ ಅಂಬಾರಕೊಡ್ಲ ಕ್ರಾಸಿಗೆ ಹೊಂದಿರುವ ರೊಯ್ ಫ್ಯಾಶನ್ ಬಟ್ಟೆ ಮಳಿಗೆಯಲ್ಲಿ ವಿದ್ಯುತ್ ಶಾರ್ಟ್ ಸಕ್ಯೂ೯ಟ್ ನಿಂದು ಬೆಂಕಿ ತಗಲಿ ಲಕ್ಷಾಂತರ ರೂ. ಮೌಲ್ಯದ ಬಟ್ಟೆಗಳು ಸುಟ್ಟು ಹೋದ ಘಟನೆ
ಭಾನುವಾರ ರಾತ್ರಿ 10.30ರ ಸುಮಾರಿಗೆ ನಡೆದಿದೆ.

ಪಟ್ಟಣದ ಹೊನ್ನೆಕೇರಿಯ ದೀಪಕ ತಾರಾನಾಥ ನಾಯ್ಕ ಸೇರಿದ ಮಳಗಿಯಾಗಿದ್ದು. ಗೌರಿ ಹಬ್ಬದ ಪ್ರಯುಕ್ತ ಲಕ್ಷಾಂತರ ರೂ. ಮೌಲ್ಯದ ಬಟ್ಟೆ ಶೇಖರಣೆ ಮಾಡಿದ್ದರು. ಆದರೆ ಭಾನುವಾರ ರಾತ್ರಿ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹಿಡಿದಿದೆ.


ಬೆಂಕಿಯ ಕೆನ್ನಾಲೆಗಿಗೆ ಪಕ್ಕದ ಮಹಾಸತಿ ಮೊಬೈಲ್ ಸವಿ೯ಸ್ ಸೆಂಟರ್ ಗೆ ಕೂಡ ಬೆಂಕಿ ತಗುಲಿದೆ. ಅಗ್ನಿಶಾಮಕ ತಂಡ ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅನಾಹುತ ಆಗದಂತೆ ತಡೆ ಮಾಡಿದ್ದಾರೆ. ಇದಕ್ಕೆ ಸಾವ೯ಜನಿಕರ ಸಹಕಾರ ದೊರೆತಿದೆ.
ಈ ಬೆಂಕಿ ಅವಘಡದಿಂದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಹೋಗಿದ್ದು ನಿಖರವಾದ ಹಾನಿ ಕುರಿತು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.