ಡೈಲಿ ವಾರ್ತೆ:12 ಸೆಪ್ಟೆಂಬರ್ 2023
ವರದಿ : ವಿದ್ಯಾಧರ ಮೊರಬಾ
ಅಂಕೋಲಾ : ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಸಾರಿಗೆ ಬಸ್ – ಹಲವು ಪ್ರಯಾಣಿಕರಿಗೆ ಗಾಯ!
ಅಂಕೋಲಾ : ಇಲ್ಲಿಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಆವರಣದಲ್ಲಿಯೇ ಚಾಲಕನ ನಿಯಂತ್ರಣ ತಪ್ಪಿದ ಬಸ್ ಇಳಿಜಾರಿನಲ್ಲಿದ್ದ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ 15ಕ್ಕೂ ಹೆಚ್ಚು ಪ್ರಯಾಣಕರು ಗಾಯಗೊಂಡು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ಬೆಳಿಗ್ಗೆ 8.30ರ ಸುಮಾರಿಗೆ ನಡೆದಿದೆ.
ಕಾರವಾರ ಘಟಕಕ್ಕೆ ಸಂಬಂಧಿಸಿದ ಕಾರವಾರ ಶಿರಸಿ ಮಾರ್ಗವಾಗಿ ಬೆಂಗಳೂರಿಗೆ ಹೊರಟ್ಟಿದ ಬಸ್ ಅಪ ಘಾತಕ್ಕಿಡಾಗಿರುವುದು. ಅಂಕೋಲಾ ಬಸ್ ನಿಲ್ದಾಣದಿಂದ ಚಾಲಕ ಎಚ್.ಬಿ.ಸ್ವಾಮಿ ಬಸ್ ಬಿಡಬೇಕಾದ ವೇಳೆ ಬಸ್ ಮುಂಭಾಗದಲ್ಲಿ ಪ್ರಯಾಣ ಕರೊಬ್ಬರು ಇಟ್ಟಿರುವ ಲೆಗೇಜ್ ಬಾಕ್ಸ್ ಕೆಳಗೆ ಬಿದ್ದಕಾರಣ ಚಾಲಕನು ಅದನ್ನು ನೋಡುತ್ತಿದ್ದಂತೆಯೇ ಬಸ್ ಮುಂದಕ್ಕೆ ಚಲಿಸಿ 30-40 ಅಡಿ ದೂರದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅಪಘಾತದ ರಭಸಕ್ಕೆ ಬಸ್ಸಿನ ಎಡ ಮುಂಭಾಗ ಜಖಂಗೊಂಡು ಬಸ್‍ನಲ್ಲಿದ್ದ 15 ಕ್ಕೂ ಹೆಚ್ಚು ಪ್ರಯಾಣ ಕರಿಗೆ ಅಲ್ಪಸ್ವಲ್ಪ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಪಿಐ ಸಂತೋಷ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪಿಎಸ್‍ಐ ಉದ್ದಪ್ಪ ಧರೆಪ್ಪನವರ ಮತ್ತು ಸಿಬ್ಬಂದಿಗಳು ಘಟನಾ ಸ್ಥಳಗಳನ್ನು ಪರಿಶೀಲಿಸಿ, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಕಾನೂನು ಕ್ರಮ ಮುಂದುವರಿಸಿದ್ದಾರೆ.
ಘಟಕ ವ್ಯವಸ್ಥಾಪಕಿ ಚೈತನ್ಯ ಅವರ ಸೂಚನೆ ಮೇರೆಗೆ ಎಟಿಎಸ್ ಶಿವಾನಂದ ನಾಯ್ಕ, ಸಂಚಾರಿ ನಿಯಂತ್ರಕ ಪ್ರಕಾಶ ನಾಯ್ಕ ಬಸ್ ನಿಲ್ದಾಣಕ್ಕೆ ಆಗಮಿಸಿ ಪ್ರಯಾಣ ಕರನ್ನು ವಿಚಾರಿಸಿ, ಆಸ್ಪತ್ರೆಗೆ ಭೇಟಿ ನೀಡಿ, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಪ್ರಾರಂಭದಿಂದಲ್ಲೂ ಅಂಕೋಲಾ ಬಸ್ ನಿಲ್ದಾಣದ ಅವೈಜ್ಞಾನಿಕ ಕಾಮಗಾರಿ ಮತ್ತು ಜಾರು ಬಂಡಿಯಂತೆ ಅತೀ ಇಳಿಜಾರಾಗಿ ಬಸ್ ನಿಲ್ದಾಣ ಆವರಣ ಇರುವುದು ಹಲವು ರೀತಿಯ ಅಪಾಯದ ಸಾಧ್ಯತೆಗೆ ಕಾರಣವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಶಿರಸಿಯ ಮುಸ್ಲಿಂಗಲ್ಲಿಯ ಮನ್ಸೂರು ಅಬ್ದುಲ್ ಸೈಯದ್, ಅಬ್ದುಲ್ ಅಜೀಬ ಖಾನ, ಶಹನಾ ಅಬ್ದುಲ್ ಅಜೀಜ್, ಅಕ್ಕಮ್ಮಾ ತಿಮ್ಮಣ್ಣ ಗೊಲ್ಲರ ದಾಸನಕೊಪ್ಪ, ಬನವಾಸಿಯ ಉಷಾ ಚೆನ್ನಬಸಪ್ಪ ಕರಡಿ, ರೇಣುಕಾ ಚೆನ್ನಬಸಪ್ಪ ಚೆನ್ನಯ್ಯಾ, ಶಾಂತವ್ವ ಗುರವಪ್ಪ ಗೊಲ್ಲರ ಹಾನಗಲ್, ಬಸ್ ನಿರ್ವಾಹಕ ಡಿ. ತಿಮ್ಮಯ್ಯ ಚಿತ್ರ ದುರ್ಗಾ, ಕಾರವಾರ ಸುಂಕೇರಿಯ ಉದಯ ಪಾಂಡರುತಂಗ ಅಂಕೋಲೆಕರ್, ಸುಷ್ಮಾ ಹರಿಕಂತ್ರ ಕಾರವಾರ, ನಮನ್ ಗೋಪಾಲಕೃಷ್ಣ ನಾಯ್ಕ ಬಿಣಗಾ, ಸುನಿತಾ ಉಲ್ಲಾಸ ಕಾರವಾರಕರ್, ಕಾರವಾರದ ಸದಾಶಿವಗಡದ ಪಾರವ್ವ ಲೋಕೇಶ ಲಮ್ಮಾಣ , ಅವರ್ಸಾ ತಾರಿಬೊಳೆಯ ಮಾರುತಿ ಬಲಿಯಾ ಅಂಬಿಗ, ಗಾಯತ್ರಿ ಮಾರುತಿ ಅಂಬಿಗ ಗಾಯಾಳುಗಳಾಗಿದ್ದು, ಇವರಿಗೆ ಡಾ.ಅನುಪಮಾ ನಾಯಕ ಚಿಕತ್ಸೆ ನೀಡಿದ್ದಾರೆ. ಗಾಯಗೊಂಡವರಲ್ಲಿ ಗಾಯತ್ರಿ ಅಂಬಿಗ ಅವರನ್ನು ಹೆಚ್ಚಿನ ಉಪಚಾರಕ್ಕಾಗಿ ಕಾರವಾರ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದೆ.