ಡೈಲಿ ವಾರ್ತೆ: 15/09/2023

ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೌಕರರ ವಸತಿ ಸಹಕಾರಿ ಸಂಘ(ನಿ) ಇದರ ಮಹಾಸಭೆಯ ಕಾರ್ಯಕ್ರಮ

ಕುಂದಾಪುರ: ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೌಕರರ ವಸತಿ ಸಹಕಾರಿ ಸಂಘ(ನಿ) ಇದರ ಮಹಾಸಭೆಯು ಮೆಸ್ಕಾಂ ವಿಭಾಗೀಯ ಕಛೇರಿ ಕಟ್ಟಡದ ಸಭಾಂಗಣದಲ್ಲಿ ನಡೆಯಿತು.

ಶ್ವೇತಾ ನಾಯಕ್ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೌಕರರ ವಸತಿ ಸಹಕಾರಿ ಸಂಘ ಅಧ್ಯಕ್ಷ ವಿಠಲ್ ಕುಲಾಲ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸಂತೋಷ ಕುಮಾರ ಶೆಟ್ಟಿ, ನಿರ್ದೇಶಕರುಗಳಾದ ಭಾಸ್ಕರ ಶೆಟ್ಟಿ, ಸದಾನಂದ ಪೂಜಾರಿ, ಎಸ್ ಬಸುರಾಜ್, ಅಶೋಕ ಶೆಟ್ಟಿ, ಸೋಮನಾಥ, ಕುಮಾರ, ಹರೀಶ ಕೆ ಬಾಬು, ಸುರೇಶ್ ಟಿ, ದಿನೇಶ್ ಪುತ್ರನ್ ವಿಠಲವಾಡಿ, ಶ್ವೇತಾ ನಾಯ್ಕ್, ಹೆಚ್ ಪುಷ್ಬವೇಣಿ,ಬಾಸ್ಕರ್ ಶೆಟ್ಟಿಗಾರ, ಕಾರ್ಯದರ್ಶಿ ರಮೇಶ್ ಹಾಗೂ ವಸತಿ ಸಹಕಾರಿ ಸಂಘದ ಸರ್ವಸದಸ್ಯರು, ಉಪಸ್ಥಿತರಿದ್ದರು.