ಡೈಲಿ ವಾರ್ತೆ: 18/09/2023

– ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ.ಉಡುಪಿ ಜಿಲ್ಲೆ.

ವಿಘ್ನ ವಿನಾಶಕನಿಗೆ ಚೌತಿಯ ಸಂಭ್ರಮ: ಮೋದಕ ಪ್ರಿಯ ಲಂಬೋದರನಿಗೆ ಆರಾಧನೆಯ ಚತುರ್ಥಿ ಮಹೋತ್ಸವ – ಸಮಸ್ತ ಕನ್ನಡಿಗರ ನಾಡಿನಲ್ಲಿ ಗಣೇಶ ಚೌತಿ ಆಚರಣೆ, “ಜೈ ಹೋ ಗಣಪ”

ಗಣೇಶ ಚತುರ್ಥಿ ನಾಡಿನ ಸಂಭ್ರಮದ ಹಬ್ಬಗಳಲ್ಲಿ ಶ್ರಾವಣ ಮಾಸವನ್ನ ಮಧ್ಯ ಭಾಗದಲ್ಲಿ ಆಚರಿಸುವಂತಹ ವಿಶಿಷ್ಟ ಪರಿಕಲ್ಪನೆಯ ಚತುರ್ಥಿ. ಈ ಬಾರಿ ಗಣೇಶ ಚತುರ್ಥಿಯು ನವರಾತ್ರಿ ಇಂದ, ಒಂದು ತಿಂಗಳ ಹಿಂಭಾಗದಲ್ಲಿ ಆಚರಿಸಲ್ಪಡುವ ಚತುರ್ಥಿ ಮಹೋತ್ಸವ. ಮೊದಲ ಪೂಜಿತ ಆರಾಧತೆಗೆ ವಿಶಿಷ್ಟ ರೀತಿಯಲ್ಲಿ ಆಚರಿಸಲ್ಪಡುವ ವಿನಾಯಕ ಚತುರ್ಥಿ, ವಿಘ್ನೇಶ್ವರನಿಗೆ ಮಾಡುವಂತಹ ಪೂಜಾ ಪುರಸ್ಕಾರಗಳು ಸಂತೃಪ್ತಿಯಾಗಿ, ನಂತರದ ದಿನಗಳಲ್ಲಿ ವಿಘ್ನೇಶ್ವರನು ಜಲ ಸ್ತಂಭನವಾಗುವುದರ ಮೂಲಕ ತನ್ನ ಶಕ್ತಿಯನ್ನು ಪ್ರಪಂಚಕ್ಕೆ ನೀಡಿ ತೆರಳುತ್ತಾನೆ. ವಿಘ್ನ ವಿನಾಶಕ ,ಲಂಬೋದರ, ಗಜಾನನ ,ವಿನಾಯಕ, ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ಮೋದಕ ಪ್ರಿಯನಿಗೆ ಚತುರ್ಥಿಯ ಸಂಭ್ರಮ ಮುಂಬೈ ಪಟ್ಟಣದಲ್ಲಿ ವಿಶೇಷವಾಗಿ ಆಚರಿಸಲ್ಪಡುವ ಗಣೇಶ ಚತುರ್ಥಿಯು ಬಹಳ ವಿಜೃಂಭಣೆಯಿಂದ ನಡೆಯುವುದರೊಂದಿಗೆ , ಭಕ್ತಿಗೆ ಸಾಂಕೇತಿಕ ರೂಪದಲ್ಲಿ ನೀಡುವ ಗಣೇಶ ಚತುರ್ಥಿ, ನಾಡಿಗೆ ದೊಡ್ಡದು ಎನ್ನುವ ಪ್ರಕ್ರಿಯೆ ಕೂಡ ನಡೆಯುತ್ತಲೇ ಇದೆ.

ಸತ್ಯ ,ಧರ್ಮ, ನ್ಯಾಯ, ನೀತಿ ಈ ಭೂಮಿಯಲ್ಲಿ ಇರೋತನಕ ವಿಗ್ನೇಶನ ಅನುಗ್ರಹವಿಲ್ಲದೆ ಒಂದು ಕಸವು ಕೂಡ ಅಲಗಾಡಲು ಸಾಧ್ಯವಿಲ್ಲ ಎನ್ನುವುದು ಪ್ರದೀತಿ. ಶಿವಪುರಾಣದಲ್ಲಿ ಹೇಳಿರುವಂತೆ ಗಣಪತಿಯನ್ನು ತುಳಸೀ ದಳದಲ್ಲಿ ಪೂಜಿಸಬಾರದು. ಏಕೆಂದರೆ ತುಳಸಿಯ ದರ್ಶನ ಮತ್ತು ಗಂಧಗಳು ಗಣೇಶ ದೇವರಿಗೆ ಸಂಬಂಧಪಟ್ಟ ಒಳಕೇಂದ್ರಗಳನ್ನು ಮುಚ್ಚುತ್ತವೆ. ಕೇತಕೀ ಪುಷ್ಪದ ಸ್ಪರ್ಶವು ಶಿವನ ದರ್ಶನಕ್ಕೆ ಸಂಬಂಧಪಟ್ಟ ಕೇಂದ್ರಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಚೌತಿಯ ಚಂದ್ರನ ದರ್ಶನವೂ ಗಣೇಶನ ಉಪಾಸನೆಗೆ ಪ್ರತಿಬಂಧಕವಾಗಿದೆ.ಸೂರ್ಯನು ಬುದ್ಧಿತತ್ವಕ್ಕೆ ಮತ್ತು ಚಂದ್ರನು ಮನಸ್ತತ್ವಕ್ಕೆ ದೇವತೆ. ಗಣೇಶನ ಆಳ್ವಿಕೆಗೆ ಒಳಪಟ್ಟಿರುವ ಇಪ್ಪತ್ತೊಂದು ತತ್ವಗಳಲ್ಲಿ ಕೊನೆಯದು ಮನಸ್ಸು. ಉಳಿದ ಇಪ್ಪತ್ತು ತತ್ವಗಳಾವುವೆಂದರೆ, ಪಂಚಭೂತಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚತನ್ಮಾತ್ರೆಗಳು. ಮನಸ್ಸನ್ನು ಸಂಯಮದಿಂದ ಒಳಗಿನ ಜ್ಞಾನಾಕಾಶದಲ್ಲಿ ಲಯಗೊಳಿಸಿದರೆ ಗಣೇಶನ ಮಹಿಮೆಯ ಅನುಭವ ಉಂಟಾಗುತ್ತದೆ.ಗಣೇಶ ಚತುರ್ಥಿಯ ರಾತ್ರಿ ಇಂತಹ ಸಂಯಮದಲ್ಲಿದ್ದು ಭಗವಂತನ ನಿಜಸ್ವರೂಪವನ್ನು ಅನುಭವಿಸುತ್ತಾ ಆನಂದವಾಗಿರಬೇಕು. ಹಾಗೆ ಮಾಡದೇ ಅದನ್ನು ಹೊರಗಿನ ಆಕಾಶದಲ್ಲಿ ಕಾಣುವ ಚಂದ್ರರೂಪದಲ್ಲಿ ನೋಡುವುದರಲ್ಲಿ ಆಸಕ್ತಿ ಹೊಂದಿದರೆ, ಗಣೇಶನ ಮಹಿಮೆಯ ಅರಿವು ಉಂಟಾಗದೇ ಅವನ ರೂಪವನ್ನು ಹಾಸ್ಯಮಾಡುವ ದುರ್ಬುದ್ಧಿಯುಂಟಾಗುತ್ತದೆ.ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಇನ್ನೊಂದು ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ.ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ, ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ.ಅವರು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿ ಆನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಅಂಟಿಸುವರು. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ.

ವಿಘ್ನ ವಿನಾಶಕ ವಿನಾಯಕನಾಗಿರುವನು.ನಮ್ಮ ದೇಶದಲ್ಲಿ ಗಣಪತಿಯ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಆನೆಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತಾಪಿ ಜನಗಳು ಆನೆಯ ಮುಖವುಳ್ಳ ದೇವನನ್ನು ಪೂಜಿಸಿದರೆ, ಗೋದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳನ್ನೂ ಪೂಜಿಸಿ ಇಬ್ಬರನ್ನೂ ಸಮಾಧಾನಿಸುವುದೂ ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು.ಅದಲ್ಲದೇ ಹೊಲಗಳಲ್ಲಿ ನಿಲ್ಲಿಸುವ ಬೆರ್ಚಪ್ಪನಿಗೂ ಗಣಪತಿಯಂತೆ ಡೊಳ್ಳು ಹೊಟ್ಟೆಯನ್ನು ಮಾಡಿರುತ್ತಾರೆ. ಇದಲ್ಲದೇ ಗಣಪತಿಯನ್ನು ಬರ್ಮಾ, ಮಲೇಶಿಯಾ, ಇಂಡೋನೇಶಿಯಾ, ಚೀನಾ, ಸುಮಾತ್ರಾ, ಜಾವಾ, ಜಾಪಾನ್ ಮತ್ತಿತರ ದೇಶಗಳಲ್ಲಿಯೂ ಪೂಜಿಸುತ್ತಿದ್ದರು. ವಿಜ್ಞಾನಿಗಳ ಸೃಷ್ಟಿಯ ವಿಕಾಸಕ್ಕೂ ನಮ್ಮ ಪುರಾಣಗಳಲ್ಲಿ ಹೇಳುವ ದಶಾವತಾರ ಕಥೆಗಳಿಗೂ ಹೋಲಿಕೆಯುಂಟು.ಮೊದಲಿಗೆ ನೀರಿನಲ್ಲಿರುವ ಅವತಾರಗಳಾದರೆ, ನಂತರ ಅರ್ಧ ಪ್ರಾಣಿ ಅರ್ಧ ಮನುಷ್ಯ. ಇದರಲ್ಲಿ ಗಣಪತಿಯೂ ಒಂದಾಗಿದೆ. ಗ್ರೀಕರ ಕಲ್ಪನೆಯಲ್ಲಿಯೂ ಇಂತಹ ಉದಾಹರಣೆಗಳಿವೆ.ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು. ಮಿಕ್ಕೆಲ್ಲ ದೇವರುಗಳಂತೆ ಇದಕ್ಕೂ ಷೋಡಶಾಂಗ ಪೂಜಾವಿಧಾನದ ರೀತ್ಯಾ ಪೂಜಿಸುವರು.ಪೂಜೆಯ ನಂತರ ಹತ್ತುದಿನಗಳ ವರೇಗೆ ನಿತ್ಯ ಪೂಜೆಯನ್ನು ಮಾಡಿ ೧೦ನೆಯ ದಿನ ಅಂದರೆ ಅನಂತ ಚತುರ್ದಶಿಯ ದಿನದಂದು ವಿಸರ್ಜನೆ ಮಾಡುವರು.ದೇಶದ ವಿವಿದೆಡೆ ವಿವಿಧ ರೀತಿಯಲ್ಲಿ ಗಣಪತಿಯ ಹಬ್ಬವನ್ನಾಚರಿಸುವರು. ದಕ್ಷಿಣ ದೇಶದಲ್ಲಿ ಮನೆ ಮನೆಗಳಲ್ಲಿ ಗಣಪತಿಯ ಮೂರ್ತಿಗೆ ಪೂಜಿಸಿದರೆ, ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ. ವಿಘ್ನ ವಿನಾಶಕನಿಗೆ ಚತುರ್ಥಿಯ ಸಂಭ್ರಮದಲ್ಲಿ ವಿನಾಯಕನಿಗೆ ಮೋದಕದ ಅಭಿಷೇಕವನ್ನು ಮಾಡಿ ಜಗತ್ಪ್ರಸಿದ್ಧಿ ಆದಂತಹ ಗಣನಾತನಿಗೆ ಐಕ್ಯನಾಗುವಂತಹ ವಿಜ್ಞೇಶ್ವರನಿಗೆ ಮೋದಕ ಅಭಿಷೇಕವನ್ನು ಮಾಡಿ ಪುನೀತರಾಗುತ್ತಾರೆ. ವಿಘ್ನವಿನಾಶಕನಿಗೆ ಬೇಕಾಗುವಂತಹ ಮೋದಕ ಪಂಚಕಜ್ಜಾಯ ಹಾಗೂ ಅಭಿಷೇಕಗಳನ್ನು ವಿವಿಧ ತರಹದ ರೀತಿಯಲ್ಲಿ ಆಚರಿಸುತ್ತಾರೆ ಅದು ಮೋದಕರಿಯ ವಿಘ್ನೇಶನಿಗೆ ಹೆಚ್ಚು ಇಷ್ಟವಾಗುವ ಪದಾರ್ಥಗಳಲ್ಲಿ ಇವುಗಳು ಒಂದು.

➤ಮೋದಕ ಪ್ರಿಯನಿಗೆ ಚತುರ್ಥಿಯ ಸಂಭ್ರಮ
➤ರಾಜ್ಯಾದ್ಯಂತ ಗಣೇಶ ಚತುರ್ಥಿಯ ಸಂಭ್ರಮಕ್ಕೆ ಕ್ಷಣಗಣನೆ
➤ಮೊದಲ ಪೂಜಿತ ಆರಾಧಿತನಿಗೆ ಚೌತಿಯ ಸಂಭ್ರಮ
➤ವಿಜ್ಞಾನನಾಶಕನಿಗೆ ಮೊದಲ ಪೂಜಿತ ಆರಾಧಿತನಿಗೆ ಮೋದಕ ಕಡಬು ಗರಿಕೆ ಹುಲ್ಲು ಪಂಚಪ್ರಾಣ.
➤ಬೇಕಾಗುವಂತಹ ಮೋದಕ ಹಾಗೂ ಇನ್ನಿತರ ಗಣಪತಿಗೆ ಇಷ್ಟವಾಗುವ ಪಂಚಕಜ್ಜಾಯಗಳು ಪ್ರತಿಯೊಂದು ದೇಗುಲದ ಹಾಗೂ ಗಣಪತಿ ವಾಸಿಸುವಂತಹ ಸ್ಥಳದಲ್ಲಿ ಅಗ್ರಗಣ್ಯವಾಗಿ ನಿಲ್ಲುವ ಪ್ರಸಾದವೇ ಪಂಚಕಜ್ಜಾಯ ಮೋದಕ
➤ವಿಘ್ನ ವಿನಾಶಕನಿಗೆ ಮೂರು ದಿನಗಳ ಕಾಲ ,ಒಂದು ತಿಂಗಳಗಳ ಕಾಲ, ಒಂದು ದಿನಗಳ ಕಾಲ ವಿಶಿಷ್ಟ ರೀತಿಯಲ್ಲಿ ಹಿಂದೂ ಸಂಪ್ರದಾಯದಂತೆ ಆಚರಣೆ ಮಾಡುವುದು ಪ್ರತೀತಿ.
➤ಧರ್ಮ ಸಂಸ್ಕೃತಿ, ಸಾಂಪ್ರದಾಯಿಕವಾದಂತ ನೆಲಕಟ್ಟಿನಲ್ಲಿ ಐಕ್ಯವಾಗುವ ವಿಘ್ನೇಶ್ವರನಿಗೆ ಚೌತಿಯ ಸಂಭ್ರಮ ಬಲು ಜೋರಾಗಿ ನಡೆಯುವುದು ಮುಂಬೈ ಹಾಗೂ ಕರ್ನಾಟಕದಲ್ಲಿ.
➤ವಿಘ್ನ ವಿನಾಶಕನಿಗೆ ವಿವಿಧವಾದಂತಹ ಭಕ್ಷ ಭೋಜನಗಳನ್ನ ಬಳಸಿ ನಿರಂತರ ಪೂಜೆ ಕೈಕಾರಿಯನ್ನು ಕೈಗೊಂಡು ನಂತರ ಜಲ ಸ್ತಂಭನ ಮಾಡುವುದರ ಮೂಲಕ ವಿಘ್ನೇಶ್ವರನ ಗಂಗೆಯ ಸನ್ನಿಧಾನದಲ್ಲಿ ವಿಸರ್ಜಿಸುತ್ತಾರೆ. ಒಟ್ಟಾರೆಯಾಗಿ ಗಣೇಶ ಚತುರ್ಥಿಯನ್ನು ಆಚರಿಸುವ ಮತ್ತು ಭಕ್ತಿ ಪ್ರಧಾನವಾದ ಗಣೇಶ ಚೌತಿಗೆ ನಾಡಿನ ಸಮಸ್ತ ಜನತೆಗೆ ಶುಭಾಶಯಗಳು. ವಿಘ್ನ ವಿನಾಶಕನಿಗೆ ಚೌತಿಯ ಸಂಭ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಗಣೇಶನ ಕೃಪಕಟಾಕ್ಷಕ್ಕೆ ನಾವು ಭಕ್ತಿ ಪೂರಕವಾದಂತ ನಮನವನ್ನು ಸಲ್ಲಿಸೋಣ.