ಡೈಲಿ ವಾರ್ತೆ:21 ಸೆಪ್ಟೆಂಬರ್ 2023
ಗಂಗಾವತಿ: ಅನುಮತಿ ಇಲ್ಲದೇ ಗಣೇಶ ವಿಸರ್ಜನೆಗೆ ಡಿಜೆ ಬಳಕೆ: ಸೊತ್ತು ವಶಕ್ಕೆ ಪಡೆದ ಪೊಲೀಸರು
ಗಂಗಾವತಿ: ಗಣೇಶನ ವಿಸರ್ಜನೆಗೆ ಪೊಲೀಸರ ಅನುಮತಿ ಇಲ್ಲದೇ ಡಿಜೆ ಬಳಕೆ ಮಾಡಿದ್ದಕ್ಕೆ ನಗರಠಾಣೆಯ ಪೊಲೀಸರು ಎರಡು ಟ್ರಾಕ್ಟರ್ ಸಮೇತ ಡಿಜೆಗಳನ್ನು ವಶಕ್ಕೆ ಪಡೆದುಕೊಂಡ ಪ್ರಕರಣ ನಗರಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ನೀಲಕಂಠೇಶ್ವರ ಕ್ಯಾಂಪ್ ಕೊರವರ ಓಣಿ ಕೊರವರ ಸಮಾಜದ ಗಣೇಶ ಮತ್ತು ಸರೋಜಮ್ಮ ಕಲ್ಯಾಣ ಮಂಟಪ ಬಳಿ ಆರ್ಯ ಈಡಿಗರ ಸಂಘದ ಗಣೇಶನ ವಿಸರ್ಜನೆ ಗುರುವಾರ ರಾತ್ರಿ ಜರುಗಿದ್ದು ಈ ಸಂದರ್ಭದಲ್ಲಿ ಡಿಜೆ ಬಳಕೆ ನಿಷೇಧವಿದ್ದರೂ ಡಿಜೆ ಬಳಕೆ ಮಾಡಿ ಹೆಚ್ಚಿನ ಧ್ವನಿವರ್ಧಕದಿಂದ ರಾತ್ರಿ ವೇಳೆ ಸಾರ್ವಜನಿಕರಿಗೆ ಹೆಚ್ಚಿನ ಸೌಂಡ್ ನಿಂದ ತೊಂದರೆ ಪರಿಣಾಮವಾಗಿ ಎರಡು ಡಿಜೆಗಳನ್ನು ಟ್ರಾಕ್ಟರ್ ಸಮೇತ ಸೀಜ್ ಮಾಡಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಕೇಸ್ ದಾಖಲಿಸಲಾಗಿದೆ.
ಡಿಜೆ ಸಾಗಿಸಲು ಬಳಸಿದ ಟ್ರಾಕ್ಟರ್ ಗಳಿಗೆ ನಂಬರ್ ಪ್ಲೇಟ್ ಅಳವಡಿಸದೇ ಇರುವುದರಿಂದ ಪೊಲೀಸರು ಪ್ರತ್ಯೇಕ ಕೇಸ್ ದಾಖಲಿಸಿದ್ದಾರೆ.
ಪೂರ್ವಭಾವಿ ಸಭೆಯಲ್ಲಿ ಡಿಜೆ ಬಳಕೆ ಹಾಗೂ ನಿಯಮಗಳನ್ನು ಗಣೇಶನ ಪ್ರತಿಷ್ಠಾಪಿಸುವವರಿಗೆ ಮನವರಿಕೆ ಮಾಡಿದರೂ ನಿಯಮ ಉಲ್ಲಂಘಿಸಿ ಪುನಹ ಕೊರವರ ಸಮಾಜ ಹಾಗೂ ಆರ್ಯ ಈಡಿಗರ ಸಮಾಜದವರು ಗಣೇಶನ ವಿಸರ್ಜನೆ ಸಂದರ್ಭದಲ್ಲಿ ಡಿಜೆ ಬಳಸಿದ್ದರಿಂದ ಸೀಜ್ ಮಾಡಿ ಕೇಸ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.