ಡೈಲಿ ವಾರ್ತೆ:24 ಸೆಪ್ಟೆಂಬರ್ 2023
ವರದಿ : ವಿದ್ಯಾಧರ ಮೊರಬಾ
ಸಾರ್ವಜನಿಕ ಗಣೇಶೋತ್ಸವದಲ್ಲಿ ಸನ್ಮಾನ ಸ್ವೀಕರಿಸಿದ ಅಂಜುಮಾಲಾ ನಾಯಕ: ಹೆಣ್ಣು ಮಕ್ಕಳು ಪೊಲೀಸ್ ಇಲಾಖೆಗೆ ಸೇರಿದರೆ ಇಲಾಖೆ ಇನ್ನಷ್ಟು ಬಲಿಷ್ಠ – ಡಿವೈಎಸ್ಪಿ ನಾಯಕ
ಅಂಕೋಲಾ: ಹೆಣ್ಣು ಮಕ್ಕಳು ಪೊಲೀಸ್ ಇಲಾಖೆಗೆ ಸೇರುವದು ತೀರ ವಿರಳವಾಗಿದೆ. ಉತ್ತಮ ಬೌದ್ದಿಕ ಮಟ್ಟವನ್ನು ಹೊಂದಿರುವ ಈ ಭಾಗದ ಹೆಣ್ಣು ಮಕ್ಕಳು ಪೊಲೀಸ್ ಇಲಾಖೆಯನ್ನು ಸೇರಿದರೆ ಪೊಲೀಸ್ ಇಲಾಖೆ ಇನ್ನಷ್ಟು ಬಲಿಷ್ಠವಾಗಲಿದೆ. ಇದಕ್ಕೆ ಪಾಲಕರೂ ಕೂಡ ಮಾರ್ಗದರ್ಶನ ನೀಡಿ ಮಕ್ಕಳಿಗೆ ಉತ್ತಮ ಸಂಸ್ಕಾ ರಗಳನ್ನು ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣ ಗೊಳಿಸಿ ಎಂದು ಬೆಂಗಳೂರು ಸಿಐಡಿ ವಿಭಾಗದ ಡಿವೈಎಸ್ಪಿ ಅಂಜುಮಾಲಾ ನಾಯಕ ಹೇಳಿದರು.
ಅಗಸೂರು ಕೆಪಿಎಸ್ ಶಾಲೆಯ ಆವರಣದಲ್ಲಿ ಶನಿವಾರ ಅಗಸೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಯವರು ಆಯೋಜಿಸಿದ 41ನೇ ಗಣೇಶೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ, ಮಾತನಾಡಿದರು.
ವೃಕ್ಷಮಾತೆ ಪದ್ಮಶ್ರೀ ಡಾ.ತುಳಸೀ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜನರಲ್ಲಿ ಗಿಡ ನೆಡುವ ಪ್ರವೃತ್ತಿ ಬೆಳೆಯಬೇಕು. ಇಂದು ನಾವು ನೆಡುವ ಗಿಡಮರಗಳು ಮುಂದಿನ ಜನಾಂಗಕ್ಕೆ ಉಸಿರು ನೀಡುವದು ಎಂದರು.
ನಿವೃತ್ತ ಪ್ರಾಚಾರ್ಯ ಡಾ.ಶಿವಾನಂದ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕ ಗಣೇಶೋತ್ಸ ವ ಸಂಘಟನೆಗೆ ಒತ್ತು ನೀಡುತ್ತದೆ. ಇಲ್ಲಿ ಸನ್ಮಾನ ಮತ್ತು ಇತರೇ ಕಾರ್ಯಕ್ರಮ ಆಯೋಜಿಸಿದ ಈ ಗಣೇಶೋತ್ಸವಕ್ಕೆ ಇನ್ನಷ್ಟು ಮಹತ್ವ ಹೆಚ್ಚಿದೆ ಎಂದರು.
ಇದೇ ವೇಳೆ ಪದ್ಮಶ್ರೀ ಡಾ.ತುಳಸೀ ಗೌಡ, ರಾಷ್ಟ್ರಪತಿ ಪದಕ ಪುರಸ್ಕøತೆ ಡಿವೈಎಸ್ಪಿ ಅಂಜುಮಾಲಾ ನಾಯಕ, ಕಲಾವಿದ ಕುಮಾರ ಕಡೆಮನೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಾಲಚಂದ್ರ ನಾಯಕ ಪ್ರಾಸ್ತವಿಕವಾಗಿ ಮಾತನಾಡಿದರು. ಅಗಸೂರು ಗ್ರಾಪಂ.ಅಧ್ಯಕ್ಷೆ ನಿರ್ಮಲಾ ನಾಯಕ, ಉಪಾಧ್ಯಕ್ಷ ಯಶವಂತ ಟಿ.ಗೌಡ, ಸಹಕಾರಿ ಧುರೀಣ ಡಿ.ಎನ್. ನಾಯಕ, ನಿವೃತ್ತ ತಹಸೀಲ್ದಾರ್ ವಿ.ಜೆ.ಲಾಂಜೇಕರ್, ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ರವಿ ಆರ್.ನಾಯಕ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ದೇವಾನಂದ ನಾಯಕ ಉಪಸ್ಥಿತರಿದ್ದರು. ಕುಮಾರ ಕಡೆಮನಿ ಪ್ರಾರ್ಥಿಸಿದರು, ಸಂಜೀವ ನಾಯಕ ನಿರ್ವಹಿಸಿದರು. ಕಾರ್ಯಕ್ರಮದ ಬಳಿಕ ಕುಮಾರ ಕಡೆಮನಿ ತಂಡ ದವರು ರಸಮಂಜರಿ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.