ಡೈಲಿ ವಾರ್ತೆ: 25/Sep/2023
ಲಕ್ಷ್ಮೇಶ್ವರ: ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ ಹಾಗೂ ಸಸ್ಯ ಶಾಮಲಾ ಕಾರ್ಯಕ್ರಮ
ಗದಗ: ಗದಗ ಜಿಲ್ಲೆಯ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಲಕ್ಷ್ಮೇಶ್ವರದಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ ಹಾಗೂ ಸಸ್ಯ ಶಾಮಲಾ ಕಾರ್ಯಕ್ರಮವು ಸೆ. 25 ರಂದು ನೆರವೇರಿತು.
ಈ ಒಂದು ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದಂತಹ ಶ್ರೀ ಜಿಎಂ ಮುಂದಿನ ಮನಿಸಾಹೇಬರು ಸಸಿಯನ್ನು ನೆಡುವುದರ ಮೂಲಕ ಸಸ್ಯ ಶಾಮಲಾ ಕಾರ್ಯಕ್ರಮವನ್ನು ಉದ್ಘಾಟಿಸಿದರು ಅದೇ ರೀತಿಯಾಗಿ ಸಸ್ಯಗಳಿಂದ ಮರಗಳಿಂದ ಆಗುವ ಉಪಯೋಗಗಳನ್ನು ಮಕ್ಕಳಿಗೆ ತಿಳಿಸಿದರು ಅದೇ ರೀತಿಯಾಗಿ ರಾಷ್ಟ್ರೀಯ ಪೋಷಣ ಅಭಿಯಾನ ಹಾಗೂ ಸಿರಿಧಾನ್ಯ ವರ್ಷ ಕಾರ್ಯಕ್ರಮದ ಉದ್ಘಾಟನೆಯನ್ನು ಸಹ ಈ ಒಂದು ಸಮಯದಲ್ಲಿ ನೆರವೇರಿಸಲಾಯಿತು.
ಇದನ್ನು ನಮ್ಮ ತಾಲೂಕಿನ ಬಿ ಆರ್ ಪಿ ಗಳಾದಂತಹ ಶ್ರೀ ಈಶ್ವರ ಮೆಡ್ಲೇರ್ ಸರ್ ರವರು ಈ ಕಾರ್ಯಕ್ರಮವನ್ನು ಉದ್ಘಾಟಿಸುವುದರ ಮೂಲಕ ರಾಷ್ಟ್ರೀಯ ಪೋಷಣ ಅಭಿಯಾನ ಕುರಿತು ಅನಿಸಿಕೆಗಳನ್ನು ಹೇಳಿದರು ಅದೇ ರೀತಿಯಾಗಿ ಲಕ್ಷ್ಮೇಶ್ವರ ದಕ್ಷಿಣಭಾಗದ ಸಿಆರ್‌ಪಿಗಳಾದಂತಹ ಶ್ರೀ ಸತೀಶ್ ಬೊಂಬೆ ವರು ಸಹ ಈ ಒಂದು ಕಾರ್ಯಕ್ರಮವನ್ನು ಕುರಿತು ಪೋಷಣ ಅಭಿಯಾನದಲ್ಲಿ ಆರೋಗ್ಯ ಮತ್ತುವಿಟಮಿನ್ ಗಳು ಮಾನವನ ಆರೋಗ್ಯಕ್ಕೆ ಎಷ್ಟು ಮಹತ್ವ ಎಂಬುದನ್ನು ತಿಳಿಸಿಕೊಟ್ಟರುಎಸ್ ಡಿ ಎಂ ಸಿ ಯ ಅಧ್ಯಕ್ಷರಾದ ಶ್ರೀ ಮಲ್ಲೇಶಪ್ಪ ಬಸಾಪುರ್ ಪ್ರಧಾನ ಗುರುಗಳಾದ ಬಿಎಮ್ ಕುಂಬಾರ್ ಶ್ರೀಮತಿ ಎಚ್ಡಿ ನಿಂಗರೆಡ್ಡಿ ಆರ್ ಎಂ ಸಿರಹಟ್ಟಿ ಸ್ವಪ್ನ ಕಾಳೆ ಉಪ್ನಾಳ್ ಸರ್ ಪೂರ್ವಿ ಮುದುಕನ್ನವರ್ ಉಪಸ್ಥಿತರಿದ್ದರು