ಡೈಲಿ ವಾರ್ತೆ:26 ಸೆಪ್ಟೆಂಬರ್ 2023
ವರದಿ: ವಿದ್ಯಾಧರ ಮೊರಬಾ
ಅಂಕೋಲಾ ಜೆ.ಎಂ.ಎಫ್.ಸಿ. ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಸರ್ಕಾರಿ ಅಭಿಯೋಜಕರಾಗಿ ಹಾವೇರಿ ಜಿಲ್ಲೆಯ ವಿದ್ಯಾನಗರದ ಚೇತನಾ ಜಿ.ಎಸ್.ರವರು
ಅಂಕೋಲಾ : ಇಲ್ಲಿಯ ಜೆ.ಎಂ.ಎಫ್.ಸಿ. ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಸರ್ಕಾರಿ ಅಭಿಯೋಜಕರಾಗಿ ಹಾವೇರಿ ಜಿಲ್ಲೆಯ ವಿದ್ಯಾನಗರದ ಚೇತನಾ ಜಿ.ಎಸ್. ಅವರು ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಸಿವಿಲ್ ನ್ಯಾಯಾಲಯದ ವತಿಯಿಂದ ಹಿರಿಯ ನ್ಯಾಯಾಧೀಶ ಮನೋಹರ ಎಂ., ಅವರು ಮಂಗಳವಾರ ನೂತನವಾಗಿ ಆಗಮಿಸಿದ ಸರ್ಕಾರಿ ಅಭಿಯೋಜಕಿ ಚೇತನಾ ಜಿ.ಎಸ್.ಅವರನ್ನು ಸನ್ಮಾನಿಸಿ ಗೌರವಿಸಿದರು.
ಇದೇ ವೇಳೆ ಹಿರಿಯ ನ್ಯಾಯಾಧೀಶ ಮಹೋಹರ ಎಂ.,ಮಾತನಾಡಿ, ಸರ್ಕಾರ ಮತ್ತು ನ್ಯಾಯಾಲಯದ ನಡುವೆ ಇರುವ ಪ್ರಕರಣಗಳಲ್ಲಿ ನೊಂದ ಕಕ್ಷಿದಾರರಿಗೆ ನ್ಯಾಯ ಒದಗಿಸುವಲ್ಲಿ ನಮ್ಮ ನ್ಯಾಯಾಲಯಕ್ಕೆ ನೂತನವಾಗಿ ಆಗಮಿಸಿದ ಎಪಿಪಿ ಚೇತನಾ ಜಿ.ಎಸ್.ಅವರಿಗೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದ ರು.
ಎಪಿಪಿ ಚೇತನಾ ಜಿ.ಎಸ್.ಅವರು ಮಾತನಾಡಿ, ನಾನು ಮೂಲತಃ ಹಾವೇರಿ ಜಿಲ್ಲೆಯವಳ್ಳಾಗಿದ್ದು, ದಾವ ಣಗೇರಿ ಮತ್ತು ಹಾವೇರಿ ನ್ಯಾಯಾಲಯದಲ್ಲಿ ಸುಮಾರು 18 ವರ್ಷಗಳ ಕಾಲ ವಕೀಲರಾಗಿ ಕಾರ್ಯ ನಿರ್ವಹಿಸಿದ್ದೇನೆ. ಈ ನಡುವೆ ಸರ್ಕಾರಿ ಅಭಿಯೋಜಕರ ಆಯ್ಕೆಗೆ ಸಂಬಂಧಿಸಿದ ಪರೀಕ್ಷೆ ಬರೆದು, ಆಯ್ಕೆ ಯಾಗಿ ಪ್ರಮಥವಾಗಿ ಅಂಕೋಲಾ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ. ಇದಕ್ಕೆ ಇಲ್ಲಿ ಯ ಹಿರಿಯ ನ್ಯಾಯಾಧೀಶರಗಳ ಮತ್ತು ವಕೀಲರ ಸಂಘದವರು ಮತ್ತು ನ್ಯಾಯವಾದಿಗಳ ಸಹಕಾರ ಅಗತ್ಯ ಎಂದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರಶಾಂತ ಬಾದವಾಡಗಿ, ಹೆಚ್ಚುವರಿ ಸಿವಿಲ್ ನ್ಯಾಯಾ ಧೀಶೆ ಅರ್ಪಿತಾ ಬೆಲ್ಲದ್ ಮಾತನಾಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ಅಭಿಯೋಜಕರಾದ ಗಿರೀಶ ಪಟಗಾರ, ಶಿಲ್ಪಾ ನಾಯ್ಕ, ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ, ಉಪಾಧ್ಯಕ್ಷ ನಿತ್ಯಾನಂದ ಕವರಿ, ವಕೀಲರಾದ ಎಂ.ಪಿ.ಭಟ್, ವಿ.ಎಸ್. ನಾಯಕ, ಉಮೇಶ ಎನ್.ನಾಯ್ಕ, ನಾಗಾನಂದ ಬಂಟ, ಶಾಂತಾ ಹೆಗಡೆ, ಎನ್.ಆರ್.ನಾಯಕ, ಪಿ.ಆರ್. ನಾಯ್, ದಿಕ್ಷಿತ ನಾಯಕ, ವಿನಾಯಕ ನಾಯ್ಕ, ಆರ್.ಟಿ.ಗೌಡ, ವಿ.ಟಿ.ನಾಯಕ, ಮಮತಾ ಕೆರೆಮನೆ ಸೇರಿ ದಂತೆ ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಕೀಲ ಗುರು ನಾಯ್ಕ ನಿರ್ವಹಿಸಿದರು.