ಡೈಲಿ ವಾರ್ತೆ: 29/Sep/2023
ವರದಿ : ವಿದ್ಯಾಧರ ಮೊರಬಾ
ಅಂಕೋಲಾ: ಭಾರೀ ಮಳೆಗೆ ಸರ್ಕಾರಿ ಶಾಲೆಯೊಂದರ ಮೇಲ್ಚಾವಣ ಕುಸಿತ – ತಪ್ಪಿದ ದುರಂತ
ಅಂಕೋಲಾ : ಎಡಬಿಡದೆ ಸುರಿದ ಭಾರೀ ಮಳೆಗೆ ಸರ್ಕಾರಿ ಶಾಲೆಯೊಂದರ ಮೇಲ್ಚಾವಣ ಕುಸಿದ ಪರಿಣಾಮ ತರಗತಿಯ ಕೊಠಡಿಯಲ್ಲಿ ಹೆಂಚು, ಪಕಾಸಿ ಬಿದ್ದು ಹಾನಿಯಾಗಿರುವ ಘಟನೆ ಶುಕ್ರ ವಾರ ಮುಂಜಾನೆ ಬೆಳಾಬಂದರನಲ್ಲಿ ನಡೆದಿದೆ.
ಬೊಬ್ರುವಾಡ ಗ್ರಾಪಂ.ವ್ಯಾಪ್ತಿಯ ಬೇಳಾಬಂದರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣ ಕುಸಿದಿದೆ. ಸುಮಾರು 74 ವರ್ಷದ ಹಳೆಯ ಶಾಲಾ ಕಟ್ಟಡ ಇದಾಗಿದ್ದು, ಅರ್ಧ ಗಂಟೆ ತಡವಾಗಿ ಕುಸಿದಿ ದ್ದರೆ ತರಗತಿಯ ಕೊಠಡಿಯಲ್ಲಿ ವಿದ್ಯಾರ್ಥಿಗಳಿರುತ್ತಿದ್ದರು. ಅದೃಷ್ಟವಶಾತ್ ತರಗತಿಗಳು ಪ್ರಾರಂಭವಾಗುವ ಪೂರ್ವದಲ್ಲಿಯೇ ಈ ಘಟನೆ ಆಗಿರುವುದರಿಂದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಕುರಿತು ಶಾಸಕ ಆಪ್ತ ಕಾರ್ಯದರ್ಶಿ ಜಗದೀಶ ಖಾರ್ವಿ ಅವರು ಸತೀಶ ಸೈಲ್ ಅವರಿಗೆ ಮಾಹಿತಿ ನೀಡಿದ, ತಕ್ಷಣ ಶಾಸಕ ಸೈಲ್ ಅವರು ತಹಸೀಲ್ದಾರ್ ಅಶೋಕ ಭಟ್ ಸ್ಥಳವನ್ನು ಪರಿಶೀಲಿಸಿ ಎಂದು ಸೂಚಿಸಿದರು.
ತಹಸೀಲ್ದಾರ್ ಅಶೋಕ ಭಟ್ ಅವರು ಶಾಲಾ ಕಟ್ಟಡವನ್ನು ಪರಿಶೀಲಿಸಿದರು.
ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳದಲ್ಲಿ ಕುಳ್ಳಿರಿಸುವಂತೆ ಹೇಳಿ ತುರ್ತಾಗಿ ಮೇಲ್ಚಾವಣ ಗೆ ತಾಡಪತ್ರಿ ಹೊರಿಸುವಂತೆ ಮತ್ತು ಪ್ರಕೃತಿ ವಿಕೋಪದಡಿಯಲ್ಲಿ ದುರಸ್ಥಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಕೂಡಲೇ ಮೇಲ್ಚಾವಣ ಯ ದುರಸ್ಥಿಗೊಳಿಸುವಂತೆ ಸಂಬಂಧಪಟ್ಟವರಿಗೆ ತಿಳಿಸುವದಾಗಿ ಹೇಳಿದರು.
ಬಿಇಓ ಮಂಗಳಲಕ್ಷ್ಮೀ ಪಾಟೀಲ ಭೇಟಿ ನೀಡಿ ತುರ್ತು ದುರಸ್ಥಿಯ ಕುರಿತು ಮುಖ್ಯಾಧ್ಯಾಪಕ ವಾಮನ ಆಗೇರ, ಎಸ್‍ಡಿಎಂಸಿ ಅಧ್ಯಕ್ಷ ರತ್ನಾಕರ ನಾಯ್ಕ, ಗ್ರಾಪಂ.ಸದಸ್ಯರ ಜತೆ ಸಮಾಲೋಜನೆ ನಡೆಸಿದರು. ಬೊಬ್ರುವಾಡ ಗ್ರಾಪಂ. ಪಿಡಿಓ ನಾಗೇಂದ್ರ ನಾಯ್ಕ ಭೇಟಿ ನೀಡಿ ಮೇಲ್ಚಾವಣ ಕುಸಿದ ತರಗತಿಗೆ ಸಂಪೂ ರ್ಣವಾಗಿ ತಾಡಪತ್ರಿ ಹೊದಿಸುವ ಕುರಿತು ಕ್ರಮಕೈಗೊಂಡರು. ಶಿಕ್ಷಣ ಸಂಯೋಜಕ ಬಿ.ಎಲ್.ನಾಯ್ಕ ಮಕ್ಕಳ ಸುರಕ್ಷತೆ ಮತ್ತು ದುರಸ್ಥಿಯ ಕುರಿತು ಶಾಲಾಡಳಿತಕೆಕ ಸೂಕ್ತ ಮಾರ್ಗದರ್ಶನ ನೀಡಿದರು.
ಸಾಮಾಜಿಕ ಕಾರ್ಯಕರ್ತ ಉಮೇಶ ಎನ್.ನಾಯ್ಕ ಮಾತನಾಡಿ, ಬೇಳಾಬಂದರಿನ ಸರ್ಕಾರಿ ಹಿರಿಯ ಶಾಲೆಯು 74 ವರ್ಷ ಹಳೆಯ ಕಟ್ಟಡವಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಅನೇಕ ಬಾರಿ ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಸರ್ಕಾರದಿಂದ ಇದುವರೆಗೂ ಅನುದಾನ ಬಂದಿಲ್ಲ. ಆದರೆ ದುರಸ್ತೆಗಾಗಿ ಮಾತ್ರ ಹಣ ಬರುತ್ತದೆ. ಸರ್ಕಾಕರದ ಸಂಬಂಧಪಟ್ಟ ಇಲಾಖೆಯು ಮುಂದಿನ ವರ್ಷ ಈ ಶಾಲೆಯ 75 ವರ್ಷ ಗಳನ್ನು ಪೂರೈಸುತ್ತಿದ್ದು, ಅಮೃತ ಮಹೋತ್ಸವದ ಸಂದರ್ಭದಲ್ಲಾದರೂ ಹೊಸ ಕಟ್ಟಡ ನಿರ್ಮಿಸಿಕೊ ಡುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ತಾಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಂಜುನಾಥ ಡಿ. ನಾಯ್ಕ, ಸದಸ್ಯೆ ಪ್ರಭಾ ನಾಯ್ಕ, ರವಿ ನಾಯ್ಕ, ಕಂದಾಯ ನಿರೀಕ್ಷಕ ಮಂಜುನಾಥ ನಾಯ್ಕ, ಸ್ಥಳೀಯ ಸುಜೀತ ನಾಯ್ಕ ನಾಗೇಂದ್ರ ನಾಯ್ಕ ಇತರರಿದ್ದರು.