ಡೈಲಿ ವಾರ್ತೆ: 02/OCT/2023

ಕೋಟ, ಕೋಟತಟ್ಟು ಗ್ರಾ. ಪಂ. ಹಾಗೂ ಸಂಘ ಸಂಸ್ಥೆಗಳ ವತಿಂದ ಬೃಹತ್ ಸ್ವಚ್ಚತಾ ಆಂದೋಲನ

ಕೋಟ: ಸ್ವಚ್ಚತಾ ‌ಹೀ ಸೇವಾ ಆಂದೋಲನದ ಅಂಗವಾಗಿ ಕೋಟ ಗ್ರಾಮ ಪಂಚಾಯತ್, ಕೋಟತಟ್ಟು ಗ್ರಾಮ ಪಂಚಾಯತ್, ಗೀತಾನಂದ ಫೌಂಡೇಶನ್(ರಿ) ಮಣೂರು ಕೋಟ, ಮೊಗವೀರ ಯುವ ಸಂಘಟನೆ ಕೋಟ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಕೋಟ, ಪಂಚವರ್ಣ ಯುವಕ ಮಂಡಲ (ರಿ) ಕೋಟ , ಪಂಚವರ್ಣ ಮಹಿಳಾ ಮಂಡಲ ಕೋಟ,ಬಾರಿಕೆರೆ ಯುವಕ‌ ಮಂಡಲ(ರಿ) ಕೋಟ, ಅಮೃತ ಯುವಕ ಸಂಘ ಕದ್ರಿಕಟ್ಟು ಕೋಟ, ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘ ಕೋಟ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ದಿನ ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಚತಾ ಆಂದೋಲನ ವನ್ನು ಹಮ್ಮಿಕೊಳ್ಳಲಾಯಿತು.

ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮದ ಕುರಿತು ಮಾತನಾಡಿದ ಗೀತಾನಂದ ಫೌಂಡೇಶನ್ ನ ಪ್ರವರ್ತಕ ಆನಂದ್ ಸಿ‌.ಕುಂದರ್ ರವರು ಸ್ವಚ್ಚತೆಯ ಅರಿವು ಎಲ್ಲರಲ್ಲೂ ಮೂಡಿದಾಗ ಸ್ವಚ್ಚ ಸುಂದರ ನೈರ್ಮಲ್ಯ ಗ್ರಾಮ ನಿರ್ಮಾಣ ಸಾಧ್ಯ. ತ್ಯಾಜ್ಯ ನಿರ್ವಹಣೆಗೆ ಎಲ್ಲರೂ ಪಣತೊಡಬೇಕು. ಪ್ಲಾಸ್ಟಿಕ್ ಉತ್ಪನ್ನಗಳ ಅವಲಂಬನೆ ಕಡಿಮೆಯಾಗಬೇಕು ಇದರಿಂದ ಪರಿಸರ ಸಂರಕ್ಷಣೆ ಆಗಿ‌ ಜೀವ ಸಂಕುಲಗಳ ರಕ್ಷಣೆ ಆಗಿ ಪರಸರ ಸಮತೋಲನದಲ್ಲಿ ಇರುತ್ತದೆ ಎಂದರು.

ಮೊಗವೀರ ಯುವ ಸಂಘಟನೆಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಶಿವರಾಮ್ ಸ್ವಚ್ಚತಾ ಪ್ರತಿಜ್ಞಾ ವಿಧಿ‌ ಬೋಧಿಸಿದರು. ಬಳಿಕ ಮಾನವ ಸರಪಳಿಯನ್ನು ನಿರ್ಮಿಸಿ ಸ್ವಚ್ಚತಾ ಕಾರ್ಯಕ್ಕೆ ಸದಾ ಎಲ್ಲಾ ಸಂಘಸಂಸ್ಥೆಗಳು ಸಿದ್ದವೆಂಬ ಸಂದೇಶವನ್ನು ಸಾರಲಾಯಿತು‌‌.

ಬಳಿಕ ರಾಷ್ಟ್ರೀಯ ಹೆದ್ದಾರಿಗಳ ಅಕ್ಕ ಪಕ್ಕ , ಫಿಶರಿಸ್ ರಸ್ತೆ, ಪಡುಕರೆ ಸಮುದ್ರ ತೀರದಲ್ಲಿನ ಸ್ವಚ್ಚತಾ ಕಾರ್ಯ ವನ್ನು ಕೈಗೊಳ್ಳಲಾಯಿತು. ಮಾರುಕಟ್ಟೆ ಬಳಿ ಗಿಡಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ , ಕೋಟತಟ್ಟು‌ ಗ್ರಾಮ ಪಂಚಾಯತಿ ಅಧ್ಯಕ್ಷ ಸತೀಶ್ ಬಾರಿಕೆರೆ, ಜನತಾ ಫಿಶ್ ಮಿಲ್‌ ಮ್ಯಾನೇಜರ್ ಶ್ರೀನಿವಾಸ ಕುಂದರ್ , ಮೊಗವೀರ ಯುವ ಸಂಘಟನೆ ಕೋಟ ಇದರ ಅಧ್ಯಕ್ಷ ರಂಜಿತ್ ಬಾರಿಕೆರೆ , ಪತ್ರಕರ್ತ ರವೀಂದ್ರ ಕೋಟ , ಪಂಚಾಯತಿ ಸದಸ್ಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಲಕ್ಷೀ ಸೋಮ ಬಂಗೇರ ಕಾಲೇಜ್ ಪ್ರಾಂಶುಪಾಲೆ ಡಾ. ಸುನೀತಾ ,ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ,ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.. ಪಂಚಾಯತ್ ‌ಅಭಿವೃದ್ದಿ‌ ಅಧಿಕಾರಿ ಸತೀಶ್ ವಡ್ಡರ್ಸೆ ಧನ್ಯವಾದಗೈದರು .. ಗೀತಾನಂದ ಫೌಂಡೇಶನ್ ನ ಸಮಾಜ ಕಾರ್ಯ ವಿಭಾಗದ ರವಿಕಿರಣ್ ಕಾರ್ಯಕ್ರಮ ನಿರೂಪಿಸಿದರು.