ಡೈಲಿ ವಾರ್ತೆ: 02/OCT/2023

ಕೊಡಾಜೆ : ಇಷ್ಕೇ ಮದೀನಾ ಮಿಲಾದ್ ಕಾರ್ಯಕ್ರಮ

ಬಂಟ್ವಾಳ : ಕೊಡಾಜೆ ಬದ್ರಿಯಾ ಜುಮಾ ಮಸೀದಿ, ಹಾಗೂ ತರ್ಬಿಯತುಲ್ ಇಸ್ಲಾಂ ಮದ್ರಸ ಹಳೆ ವಿದ್ಯಾರ್ಥಿ ಸಂಘ ಇದರ ವತಿಯಿಂದ ಇಷ್ಕೇ ಮದೀನಾ ಮಿಲಾದ್ ಕಾರ್ಯಕ್ರಮ ಭಾನುವಾರ ಮದರಸ ವಠಾರದಲ್ಲಿ ನಡೆಯಿತು.

ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ರಾಜ್ ಕಮಲ್ ಅಧ್ಯಕ್ಷತೆ ವಹಿಸಿದ್ದರು, ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಉದ್ಘಾಟಿಸಿದರು.

ಮಸೀದಿ ಉಪಾಧ್ಯಕ್ಷ ಅಶ್ರಫ್ ಹಾಜಿ ಕೊಡಾಜೆ, ಕೋಶಾಧಿಕಾರಿ ಮಹಮ್ಮದ್ ರಫೀಕ್ ಹಾಜಿ ಸುಲ್ತಾನ್, ಕಾರ್ಯದರ್ಶಿ ನವಾಝ್ ಭಗವಂತಕೋಡಿ, ಪದಾಧಿಕಾರಿ ಗಳಾದ ಸುಲೈಮಾನ್ ಮಾಣಿ, ಇಬ್ರಾಹಿಂ ಹಾಜಿ ನೆಡ್ಯಾಲು, ಅತಾವುಲ್ಲಾ ನೇರಳಕಟ್ಟೆ, ಸಮದ್ ಪರ್ಲೊಟ್ಟು, ಎಸ್.ಎಂ.ಎಸ್. ಇಬ್ರಾಹಿಂ ಅನಂತಾಡಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮುಹಮ್ಮದ್ ಶಾಹಿಲ್ ಭಗವಂತಕೋಡಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಕೊಡಾಜೆ ಬದ್ರಿಯಾ ಜುಮಾ ಮಸೀದಿ ಪೂರ್ವಾಧ್ಯಕ್ಷ, ಮಾಜಿ ಕಾರ್ಯದರ್ಶಿ ಹಾಗೂ ಮಾಣಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಾಜಿ ಇಬ್ರಾಹಿಂ ಕೆ.ಮಾಣಿ ಅವರನ್ನು ಸನ್ಮಾನಿಸಲಾಯಿತು.

ಸಮಸ್ತ ಕೇರಳ ಮತ ವಿದ್ಯಾಭ್ಯಾಸ ಬೋರ್ಡ್ ಕಳೆದ ವರ್ಷ ನಡೆಸಿದ 7ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ (ಟಾಪ್ ಪ್ಲಸ್) ಅಂಕ ಗಳಿಸಿದ ದ.ಕ.ಜಿಲ್ಲೆಯ ಒಟ್ಟು 12 ವಿದ್ಯಾರ್ಥಿಗಳ ಪೈಕಿ ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದರಸದ ವಿದ್ಯಾರ್ಥಿಗಳಾದ ಶಿಝಾ ಫಾತಿಮಾ, ಫಾತಿಮಾ ಸನಾ, ಹಾಗೂ ಅಮಾನಾ ಅವರನ್ನು ಪುರಸ್ಕರಿಸಲಾಯಿತು.

ಮಸೀದಿಯ ಎಲ್ಲಾ ಗುರುವರ್ಯರನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳಿಂದ ವಿವಿಧ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು, ಹಾಗೂ ಬಹುಮಾನ ವಿತರಿಸಲಾಯಿತು.

ಪಂತಡ್ಕ ಮದರಸ ಮುಖ್ಯ ಶಿಕ್ಷಕ ಜಾಫರ್ ಅರ್ಶದಿ, ಶಿಕ್ಷಕರುಗಳಾದ ಅಶ್ರಫ್ ಯಮಾನಿ, ಅಬ್ದುಲ್ ರಶೀದ್ ಅಲ್ ಅಝ್ ಹರಿ, ಇಬ್ರಾಹಿಂ ಬಾತಿಷಾ ಇರ್ಫಾನಿ, ಮಖ್ಬೂಲ್ ಫೈಝಿ, ಹಾಗೂ ಹಾರಿಸ್ ಮುಸ್ಲಿಯಾರ್ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು, ಕಾರ್ಯಕ್ರಮದ ನೇರ ಪ್ರಸಾರ ವಿಭಾಗದಲ್ಲಿ ಮಾಣಿಕ್ಯ ಮೀಡಿಯಾದ ಇಸ್ಮಾಯಿಲ್ (ಇನಾಮ್) ಮಾಣಿ, ದಾವೂದ್ ಫರಂಗಿಪೇಟೆ ಹಾಗೂ ತೀರ್ಪುಗಾರರಾಗಿ ನೂರುದ್ದೀನ್ ಮಾಸ್ಟರ್, ಯೂಸುಫ್ ಶಹೀದ್ ನೇರಳಕಟ್ಟೆ ಮತ್ತು ಝಾಹಿದ್ ಪಂತಡ್ಕ ಸಹಕರಿಸಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಂಝ (ಸಮೀರ್) ನೆಡ್ಯಾಲು ಸ್ವಾಗತಿಸಿ, ಇಲ್ಯಾಸ್ ನೇರಳಕಟ್ಟೆ ವಂದಿಸಿದರು. ಕೊಡಾಜೆ ಮದರಸ ಮುಖ್ಯ ಶಿಕ್ಷಕ ಪಿ.ಎ.ಝಕರಿಯಾ ಅಸ್ಲಮಿ ಮರ್ದಾಳ ಕಾರ್ಯಕ್ರಮ ನಿರೂಪಿಸಿದರು.