


ಡೈಲಿ ವಾರ್ತೆ: 05/OCT/2023


ಆಟವಾಡುತ್ತಾ ಆಕಸ್ಮಿಕ ಬಾವಿಗೆ ಬಿದ್ದು ಮಗು ಮೃತ್ಯು!
ಕಾರವಾರ: ಆಟವಾಡುತ್ತಾ ಆಕಸ್ಮಿಕವಾಗಿ ಬಾವಿಗೆ ಬಿದ್ದ ಮಗು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಸಿ.ಪಿ. ಬಜಾರದಲ್ಲಿ ನಡೆದಿದೆ.
ಅನುಶ್ರೀ ರಾಜಶೇಖರ ಶೆಟ್ಟರ್ (2) ಮೃತ ಬಾಲಕಿ. ಮಗು ಆಟವಾಡುತ್ತ ನೇರವಾಗಿ ಬಾವಿಗೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ತಾಯಿ ಸಹಾಯಕ್ಕಾಗಿ ಕೂಗಿದ್ದಾರೆ. ಸ್ಥಳೀಯರಾದ ಶಂಭು ಶೆಂಮಡಿ ಎಂಬವರು ಕೂಡಲೇ ಬಾವಿಗೆ ಇಳಿದು ಮಗುವನ್ನು ಹೊರಕ್ಕೆ ತೆಗೆದಿದ್ದಾರೆ. ಆದರೆ ಆಕೆ ಬಾವಿಯಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾಳೆ.