



ಡೈಲಿ ವಾರ್ತೆ: 05/OCT/2023


ಉಪ್ಪಿನಂಗಡಿ: ಕೊಲೆ ಆರೋಪಿ ಮತ್ತು ತಂಡದಿಂದ ನಾಲ್ವರ ಮೇಲೆ ಹಲ್ಲೆ..!
ಮಂಗಳೂರು: ಕೊಲೆ ಆರೋಪಿ, ಬಜರಂಗದಳ ಮುಖಂಡ ಮತ್ತು ತಂಡ ಅಂಗಡಿಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪೇಟೆಯಲ್ಲಿ ನಡೆದಿದೆ.
ಅಂಗಡಿಯಿಂದ ಹೊರಗೆಳೆದು, ನಡುರಸ್ತೆಯಲ್ಲಿ ನಾಲ್ವರ ಮೇಲೆ ಥಳಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೊಲೆ ಆರೋಪಿ, ಬಜರಂಗದಳ ಮುಖಂಡ ಭರತ್ ಕುಮ್ಡೇಲು, ಮತ್ತು ಸುದರ್ಶನ್ ಕುಮಾರ್ ತಂಡದವರು ಬಂಟು ಪಾಶ್ವನ್, ಜಗಜೀವನ್ ರೈ ಇವರನ್ನು ಅಂಗಡಿಗೆ ನುಗ್ಗಿ ಹೊರಗೆಳೆದು ಹಲ್ಲೆ ನಡೆಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಸ್ಸಿ ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಭರತ್ ಕುಮ್ಡೇಲು 2017ರಲ್ಲಿ ಎಸ್ ಡಿಪಿಐ ಮುಖಂಡ ಅಶ್ರಫ್ ಕಲಾಯಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ.