ಡೈಲಿ ವಾರ್ತೆ: 08/OCT/2023

ಲಕ್ಷ್ಮೇಶ್ವರ ಶ್ರೀ ಉಮಾ ವಿದ್ಯಾಲಯ ಪುರಸಭೆಯ ಪ್ರೌಢಶಾಲೆ NMMS ಪರೀಕ್ಷೆಗೆ ನೋಂದಾಯಿಸಿರುವ ಮಕ್ಕಳಿಗೆ ಸರಣಿ ತರಬೇತಿ ಕಾರ್ಯಗಾರ ಉದ್ಘಾಟನೆ

ಲಕ್ಷ್ಮೇಶ್ವರ: ಸಂಪನ್ಮೂಲ ಶಿಕ್ಷಕರು ನೀಡುವ ಎಲ್ಲಾ ವಿಷಯಗಳನ್ನು ಅರ್ಥೈಸಿಕೊಂಡು ಆಯ್ಕೆಯಾಗಿ ಎಂದು ಹಾರೈಸಿ ಎಂ ಬಿ ಹೊಸಮನಿ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷರು ಲಕ್ಷ್ಮೇಶ್ವರ ಇಂದು ಶ್ರೀ ಉಮಾ ವಿದ್ಯಾಲಯ ಪುರಸಭೆಯ ಪ್ರೌಢಶಾಲೆ ಲಕ್ಷ್ಮೇಶ್ವರ ಎನ್ ಎಂ ಎಂ ಎಸ್ ಪರೀಕ್ಷೆಗೆ ನೋಂದಾಯಿಸಿರುವ ಮಕ್ಕಳಿಗೆ ಸರಣಿ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿರಹಟ್ಟಿ ಇವರ ಆಶಯದಂತೆ ಪ್ರತಿ ಶನಿವಾರ ಶ್ರೀ ಉಮಾ ವಿದ್ಯಾಲಯ ಪ್ರೌಢ ಶಾಲೆಯಲ್ಲಿ ಜರುಗುವ ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ಶಿಕ್ಷಕರು ವಾರಕ್ಕೊಮ್ಮೆ 11ಗಂಟೆಯಿಂದ 1 ಗಂಟೆವರೆಗೆ ವಿಶೇಷ ತರಬೇತಿಯನ್ನು ಇಲಾಖೆ ವತಿಯಿಂದ ಹಮ್ಮಿಕೊಂಡಿರುತ್ತಾರೆ.
ಮತ್ತು ಪ್ರಶ್ನೆ ಪತ್ರಿಕೆ ಬಿಡಿಸುವ ಕಾರ್ಯಗಾರ ಇರುತ್ತದೆ. ಇದರಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಎಂದು ಕಾರ್ಯಾಗಾರದ ನೋಡಲ್ ಆನಂದ ಮುಳಗುಂದ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರು ಲಕ್ಷ್ಮೇಶ್ವರ ಮಾತನಾಡಿದರು.

ಎಲ್ಲ ವಿದ್ಯಾರ್ಥಿಗಳು ಈ ಎನ್ಎಮ್ಎಂಎಸ್ ಪರೀಕ್ಷೆಯನ್ನು ಪಾಸ್ ಆಗಿ ಶಿಷ್ಯವೇತನ ಪಿಯುಸಿವರೆಗೂ ದೊರೆಯುವ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಎಸ್ ಹೆಚ್ ಪೂಜಾರ್ ಮುಖ್ಯ ಶಿಕ್ಷಕರು ಶ್ರೀ ಉಮಾ ವಿದ್ಯಾಲಯ ಪ್ರೌಢಶಾಲೆ ಲಕ್ಷ್ಮೇಶ್ವರ ಹೇಳಿದರು.

ಈ ಕಾರ್ಯಗಾರದಲ್ಲಿ ಎಸ್ ಎಸ್ ಬಿ ಆರ್ ಅಂಬೇಡ್ಕರ್ ಪ್ರೌಢಶಾಲೆ ವಿದ್ಯಾರ್ಥಿಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋವನಾಳ, ಉಮಾ ವಿದ್ಯಾಲಯ ಪ್ರೌಢಶಾಲೆ ಲಕ್ಷ್ಮೇಶ್ವರ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಂಡರು.

ಕಾರ್ಯಗಾರದಲ್ಲಿ ಸಿಆರ್‌ಪಿ ಸತೀಶ್ ಬೊಮಲೆ, ಸಂಪನ್ಮೂಲ ಶಿಕ್ಷಕರಾಗಿ ಎಂ ಬಿ ಸಂಗನಪೇಟ, ಆರ್ ಎಫ್ ದೊಡ್ಡಮನಿ, ಎಸ್ ಜಯಾ, ಎ ಜಿ ಲಿಂಗಶೆಟ್ಟಿ, ವಿ ಡಿ ಹುಲಬಜಾರ್, ವಿ ಎನ್ ಶೆಟ್ಟರ, ಎಮ್ ಎಫ್ ಗೊಣೆಪ್ಪನವರ, ಎಚ್ ಎಫ್ ಪೂಜಾರ, ಸುನಿತಾ ಬಂಡಿವಡ್ಡರ ಮತ್ತು ಇತರರು ಇದ್ದರು.