



ಡೈಲಿ ವಾರ್ತೆ: 08/OCT/2023


ಉಡುಪಿ: ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ – ಅಂಗಡಿ ನುಗ್ಗಿ ದಾಂದಲೆ, ನಾಲ್ವರು ಪೊಲೀಸ್ ವಶಕ್ಕೆ!
ಉಡುಪಿ: ನಗರದಲ್ಲಿ ದಾಂಧಲೆ ಮಾಡುತ್ತಿದ್ದ ನಾಲ್ವರು ಪುಡಿ ರೌಡಿಗಳನ್ನು ಪೊಲೀಸರು ವಶ ಪಡಿಸಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.
ಅಮಲು ಪದಾರ್ಥ ಸೇವಿಸಿದ ಇವರು ಹಿರಿಯ ನಾಗರಿಕರೊಬ್ಬರಿಗೆ ಹಲ್ಲೆ ಮಾಡಿದ್ದರು. ಇದನ್ನು ತಡೆಯಲು ಬಂದ ರಿಕ್ಷಾ ಚಾಲಕನ ಮೇಲೂ ಹಲ್ಲೆ ನಡೆಸಿದ್ದಾರೆ. ಜತೆಗೆ ಸ್ಥಳೀಯ ಅಂಗಡಿಗೂ ನುಗ್ಗಿ ಪುಂಡಾಟಿಕೆ ಮೆರೆದಿದ್ದಾರೆ.
ಕೂಡಲೇ ಉಡುಪಿ ನಗರ ಠಾಣೆಯ ಪೊಲೀಸರು ಆಗಮಿಸಿ ಎಲ್ಲರನ್ನೂ ವಶಕ್ಕೆ ಪಡೆದಿದ್ದಾರೆ.