



ಡೈಲಿ ವಾರ್ತೆ: 11/OCT/2023


ಪಣಂಬೂರು: ತಣ್ಣೀರು ಬಾವಿ ದೈವಸ್ಥಾನದಲ್ಲಿ ಮಡಿಕೇರಿಯ ವ್ಯಕ್ತಿ ಆತ್ಮಹತ್ಯೆಗೆ ಶರಣು
ಪಣಂಬೂರು: ಮಡಿಕೇರಿಯ ವ್ಯಕ್ತಿಯೊಬ್ಬರು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಆತ್ಮಹತ್ಯೆ ಶರಣಾಗಿರುವ ರೀತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತರನ್ನು ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಗೋಪಾಲ (64) ಎಂದು ಎಂದು ಗುರುತಿಸಲಾಗಿದೆ.

ಗೋಪಾಲ ಅವರು ಮಡಿಕೇರಿಯಿಂದ ಸೋಮವಾರ ತಣ್ಣೀರು ಬಾವಿ ಬೀಚ್ ಗೆ ಬಂದಿದ್ದು, ಬಳಿಕ ದೈವಸ್ಥಾನ ಪ್ರಾಂಗಣದಲ್ಲಿ ನೈಲಾನ್ ಹಗ್ಗದಲ್ಲಿ ಕುತ್ತಿಗೆಗೆ ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಅವರು ಆತ್ಮಹತ್ಯೆಗೆ ಬಳಸಿರುವ ಹಗ್ಗ ದೈವಸ್ಥಾನದ ಇನ್ನೊಂದು ಪಾಶ್ವದಿಂದ ಬಂದಿದ್ದು, ಮೃತದೇಹದ ಕಾಲುಗಳು ಸುಮಾರು ಒಂದು 1-2 ಅಡಿಯಷ್ಟು ಭೂಮಿಗೆ ತಾಗಿಕೊಂಡಿದೆ ಎಂದು ತಿಳಿದು ಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸರು ಸ್ಥಳ ಮಹಜರು ನಡೆಸಿ ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದಾರೆ.