ಡೈಲಿ ವಾರ್ತೆ: 14/OCT/2023
ಮಲ್ಪೆ ಬೀಚ್ ಬೋಟ್ ಗಳ ಟೆಂಡರ್ ನಲ್ಲಿ ಭ್ರಷ್ಟಾಚಾರ ಆರೋಪ.?
ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಟೆಂಡರ್ ನಲ್ಲಿ ಅಕ್ರಮ ಆರೋಪಗಳ ಬಗ್ಗೆ ಕೇಳಿ ಬರುತ್ತಿದೆ.
ಅಧಿಕಾರಿಗಳು ಕೆಲವು ವ್ಯಕ್ತಿಗಳ ಒತ್ತಡಕ್ಕೆ ಮಣಿದು ಹೊರ ಜಿಲ್ಲಾ ಗುತ್ತಿಗೆದಾರರಿಗೆ ಬೇಕಾಗು ರೀತಿಯಲ್ಲಿ ಬದಲಾಯಿಸಿ ಟೆಂಡರ್ ಪಡೆಯಲು ಸಹಕರಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸುವರ್ಣ ಆರೋಪಿಸಿದ್ದಾರೆ.
ಇನ್ನು ಪ್ರಾರಂಭವಾಗದ ಮಲ್ಪೆ ಬೀಚ್ ನಲ್ಲಿ ಜಲ ಕ್ರೀಡಾ ಚಟುವಟಿಕೆಗಳು, ಮತ್ತು ಸೈಂಟ್ ಮೇರಿಸ್ ದ್ವೀಪಕ್ಕೆ ಹೋಗುವ ಬೋಟ್ ಇನ್ನು ಪ್ರಾರಂಭವಾಗದೆ ಪ್ರವಾಸಿಗರಿಗೆ ತೊಂದರೆಯಾಗುತ್ತಿದ್ದು ಸೆಪ್ಟೆಂಬರ್ 15ಕ್ಕೆ ಪ್ರಾರಂಭವಾಗಬೇಕಾಗಿದ್ದ ಚಟುವಟಿಕೆಗಳು, ಅ. 5ಕ್ಕೆ ಟೆಂಡರ್ ನೀಡಿದ್ದು. ಟೆಂಡರ್ ಪಡೆದವರಲ್ಲಿ ಬೇಕಾದ ಬೋಟ್, ಪ್ಯಾರಸೈಕ್ಲಿಂಗ್, ಮುಂತಾದ ಸಲಕರಣೆಗಳು ಲಭ್ಯವಿಲ್ಲದಿರುವ ಕಾರಣ ಹತ್ತು ದಿನ ಕಳೆದರು ಯಾವುದೇ ಚಟುವಟಿಕೆ ಆರಂಭವಾಗಿದೆ ಇರುವುದರಿಂದ ಟೆಂಡರ್ ನಲ್ಲಿ ಅಕ್ರಮ ನೆಡೆದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಕೂಡಲೇ ಜಲಕ್ರೀಡಾ ಚಟುವಟಿಕೆ ಪ್ರಾರಂಭಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಬೇಕು ಎಂದು ಸ್ಥಳೀಯ ಪ್ರಶಾಂತ್ ಸುವರ್ಣ ಆಗ್ರಹಿಸಿದ್ದಾರೆ ಅಲ್ಲದೆ ಅಧಿಕಾರಿಗಳು ನಡೆಸಿದ ಅಕ್ರಮಗಳ ಸಮಗ್ರ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸುದಾಗಿ ತಿಳಿಸಿದ್ದಾರೆ.