ಡೈಲಿ ವಾರ್ತೆ: 14/OCT/2023
ನಾಗರಹಾವು ಹಿಡಿಯುವ ಸಂದರ್ಭ ಹಾವು ಕಚ್ಚಿ ಉರಗತಜ್ಞ ಸ್ಥಿತಿ ಗಂಭೀರ!
ಹೊನ್ನಾವರ: ಮನೆಯೊಂದರಲ್ಲಿ ಬಂದಿದ್ದ ನಾಗರ ಹಾವನ್ನು ಹಿಡಿಯಲು ಹೋದ ಉರಗ ತಜ್ಞನಿಗೆ ಹಾವು ಕಡಿದ ಪರಿಣಾಮ ಆಸ್ಪತ್ರೆಗೆ ದಾಖಲಿಸಿದ ಘಟನೆ ಹೊನ್ನಾವರ ತಾಲೂಕಿನ ಗುಂಡಬಾಳ ಹತ್ತಿರ ಸಂಭವಿಸಿದೆ.
ಹಾವುಕಚ್ಚಿ ಗಂಭೀರ ಸ್ಥಿತಿಯಲ್ಲಿರುವ ಉರಗತಜ್ಞ ಅಬುತಲಾ ಎಂದು ತಿಳಿದು ಬಂದಿದೆ.
ರಾತ್ರಿ ಸಮಯದಲ್ಲಿ ಮನೆಯ ಸಮೀಪ ಕಾಣಿಸಿಕೊಂಡ ನಾಗರಹಾವು ಹೋಗದೆ ಇರುದರಿಂದ ಉರಗತಜ್ಞ ಅಬು ತಲಾ ಇವರಿಗೆ ಮಾಹಿತಿ ನೀಡಿದರು. ಅದರಂತೆ ಹಾವು ಹಿಡಿಯಲು ಮುಂದಾದ ಉರಗತಜ್ಞರು ಹಾವನ್ನು ಹಿಡಿಯುವಾಗ ಆಕಸ್ಮಿಕವಾಗಿ ಕೈ ಭಾಗಕ್ಕೆ ಹಾವು ಕಚ್ಚಿದೆ. ಆದರು ಹಾವನ್ನು ಹಿಡಿದ್ದಾರೆ ನಂತರ ತಾಲೂಕು ಆಸ್ಪತ್ರೆಗೆ ಕರೆದೊಯ್ದರು ಸ್ಥಿತಿ ಗಂಭೀರವಾಗಿರುದರಿಂದ ಕೂಡಲೇ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರ ಸ್ಥಿತಿ ಗಂಭೀರವಾಗಿದ್ದು, ಗುಣಮುಖ ಆಗಲಿ ಎಂದು ತಾಲೂಕಿನ ಜನತೆಯು ಪ್ರಾರ್ಥಿಸುತ್ತಿದ್ದಾರೆ.