ಡೈಲಿ ವಾರ್ತೆ: 15/OCT/2023
– ಕೆ.ಸಂತೋಷ್ ಶೆಟ್ಟಿ,ಮೊಳಹಳ್ಳಿ, ಕುಂದಾಪುರ. ಪತ್ರಕರ್ತರು, ಮಾಧ್ಯಮ ವಿಶ್ಲೇಷಕರು
ಕಾರ್ಕಳದ ಪರಶುರಾಮ ಮೂರ್ತಿ ರಾತ್ರೋರಾತ್ರಿ ಎತ್ತಂಗಡಿ…., ಥೀಮ್ ಪಾರ್ಕ್ ಮಾಡುವ ಉದ್ದೇಶದಿಂದ ಕೋಟಿ ಕೋಟಿ ಯೋಜನೆ ಮಣ್ಣು ಪಾಲು….., ಯಾರ ಪುರುಷಾರ್ಥಕ್ಕಾಗಿ ಈ ಪ್ರವಾಸೋದ್ಯಮದ ಥೀಮ್ ಪಾರ್ಕ್…? ಕಂಚಿನ ಪ್ರತಿಮೆ ಬದಲು, ನಕಲಿ ಪ್ರತಿಮೆ ಪ್ರತಿಷ್ಠಾಪನೆ ನಡೆದಿದ್ದು ಹೇಗೆ….? ಹಿಂದುಗಳ ಧಾರ್ಮಿಕ ಭಾವನೆಗೆ ದಕ್ಕೆ…? ಸಾರ್ವಜನಿಕರ ತೆರಿಗೆ ಹಣಕ್ಕೆ ಕೊಕ್ಕೆ…?
ಕಾರ್ಕಳ: ಕಾರ್ಕಳದಲ್ಲಿ ನಿರ್ಮಿತವಾದ ಪರಶುರಾಮನ ಮೂರ್ತಿ ಕಳಪೆ ಎಂದು ಕಾಂಗ್ರೆಸ್ಸಿಗರು ಮತ್ತು ಕೆಲವು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅದಲ್ಲದೆ ಪರುಶುರಾಮನ ಮೂರ್ತಿಯ ಕೆಲವು ಭಾಗಗಳು ಕೆಡಲು ಆರಂಭಿಸಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಅದಲ್ಲದೆ ವಿವಾದಕ್ಕೆ ಒಳಗಾಗಿದ್ದ ಪರಶುರಾಮ ಥೀಮ್ ಪಾರ್ಕ್ ಸಾರ್ವಜನಿಕ ನಿರ್ಬಂಧವನ್ನು ಹೆರಿತ್ತು. ಅದಲ್ಲದೆ ಕಾರ್ಕಳ ತಾಲೂಕಿನ ಬೈಲೂರು ಸಮೀಪ ಇರುವ ಥೀಮ್ ಪಾರ್ಕ್ ನಲ್ಲಿ ಪರಶುರಾಮನ ಪ್ರತಿಮೆಯನ್ನ ರಾತ್ರೋರಾತ್ರಿ ಅಲ್ಲಿಂದ ಕಿತ್ತು ತೆಗೆದುಕೊಂಡು ಹೋಗಿದ್ದಾರೆ. ಆದರೆ ಪೂರ್ತಿಯಾಗಿ ಪರಶುರಾಮನ ಮೂರ್ತಿ ಇರುವ ಜಾಗದಲ್ಲಿ ಹೊದಿಕೆಯನ್ನು ಮಾಡಿ ಆ ಜಾಗವನ್ನ ಮುಚ್ಚಿಸಿದ್ದಾರೆ.
ಅದಲ್ಲದೆ ಕಾರ್ಕಳದ ಪರಶುರಾಮನ ಮೂರ್ತಿ ನಕಲಿ ಎನ್ನುವುದು ಸಾರ್ವಜನಿಕರವಾದ ಇನ್ನೊಂದೆಡೆ ಸುನಿಲ್ ಕುಮಾರ್ ಅವಧಿಯಲ್ಲಿ ನಿರ್ಮಿತವಾದಂತಹ ಥೀಮ್ ಪಾರ್ಕ್ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು. ಕಾರ್ಕಳಕ್ಕೆ ಇನ್ನೊಂದು ಗರಿ ಎಂಬಂತೆ ನಿರ್ಮಿತವಾದ ಪರಶುರಾಮ ಸೃಷ್ಟಿಯ ಈ ನಾಡಿನಲ್ಲಿ ವಿಶಿಷ್ಟ ಥೀಮ್ ಪಾರ್ಕನ್ನ ರಚಿಸುವುದರ ಮೂಲಕ, ಜಗತ್ತಿಗೆ ಮನ್ನಣೆಯನ್ನ ನೀಡುವ ಉದ್ದೇಶದೊಂದಿಗೆ ನಿರ್ಮಿಸಲಾಗಿದೆ.
ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದ ಮೇಲೆ ನಿರ್ಮಾಣವಾಗಿರುವ ಥೀಂ ಪಾರ್ಕ್‌ನಲ್ಲಿ ತಲೆ ಎತ್ತಿದ್ದ ಪರಶುರಾಮನ ಪ್ರತಿಮೆ ರಾತ್ರೋರಾತ್ರಿ ಮಾಯವಾಗಿದೆ.ಹೌದು. ಬೆಟ್ಟದ ಮೇಲಿನಿಂದ ಪರಶುರಾಮನ ಪ್ರತಿಮೆ ಕಣ್ಮರೆಯಾಗಿದೆ. ಕಾರ್ಕಳ ಕಾಂಗ್ರೆಸ್ ಪರಶುರಾಮನ ವಿಗ್ರಹ ನಕಲಿ ಎಂದಿದ್ದು, ಈ ಬಗ್ಗೆ ಮಾಜಿ ಸಚಿವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸ್ಪಷ್ಟನೆ ಕೊಡಬೇಕೆಂದು ಆಗ್ರಹಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಥೀಂ ಪಾರ್ಕ್ ಲೋಕಾರ್ಪಣೆ ಮಾಡಿದ್ದರು. ವಿಧಾನ ಸಭಾ ಚುನಾವಣೆಗೆ ತಿಂಗಳು ಬಾಕಿ ಇರುವಾಗ ಥೀಂ ಪಾರ್ಕ್ ಉದ್ಘಾಟನೆ ಶಾಸಕರಿಗೆ ಭಾರೀ ಯಶಸ್ಸು ತಂದುಕೊಟ್ಟಿತ್ತು. ಉದ್ಘಾಟನೆಯಾದ ಬಳಿಕ ಸಿಡಿಲು ನಿರೋಧಕ ಅಳವಡಿಕೆ ಮತ್ತು ಇನ್ನಿತರ ಬಾಕಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಥೀಂ ಪಾರ್ಕ್ ಬಂದ್ ಮಾಡಿರುವ ವಿಚಾರವಾಗಿ, ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಪರಶುರಾಮನ ಮೂರ್ತಿ ನಕಲಿ ಎನ್ನುವ ಮೂಲಕ ಹೊಸ ವಿವಾದ ಆರಂಭವಾಗಿತ್ತು. ಇದೀಗ ಕಳೆದ ರಾತ್ರಿ ಬೆಟ್ಟದ ಮೇಲಿನ ಮೂರ್ತಿ ಮಾಯವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳು ಸ್ಪಷ್ಟವಾದ ಮಾಹಿತಿ ನೀಡದ ಹಿನ್ನಲೆಯಲ್ಲಿ ವಿಚಾರಣೆಗೆ ಆದೇಶ ನೀಡಿದ್ದರು. ಸದ್ಯ ಕೆಲವು ದಿನಗಳಿಂದ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕಾಮಗಾರಿ ನಡೆಸುತ್ತಿರುವುದರಿಂದ ಅನುಮಾನ ಇನ್ನಷ್ಟು ಹೆಚ್ಚಾಗಿತ್ತು. ಮೂರ್ತಿಯನ್ನು ಪೂರ್ತಿಯಾಗಿ ತೆರವು ಮಾಡಿದ್ದು, ಅನುಮಾನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಪರಶುರಾಮ ಥೀಮ್ ಪಾರ್ಕ್ ನಲ್ಲಿ ನಿರ್ಮಿತವಾದ ಅಂತಹ ಪರಶಿವನ ಮೂರ್ತಿ ಅಲ್ಲಿಂದ ತೆರವುಗೊಳಿಸಿ, ಕಂಚಿನ ಪ್ರತಿಮೆಯನ್ನು ನಿರ್ಮಿಸಿದರೆ, ಮಾತ್ರ ಮತ್ತು ಪರೀಕ್ಷಾರ್ಥವಾಗಿ ಇದು ಕಂಚಿನ ಮೂರ್ತಿ ಎಂದು ದೃಢವಾದ ಮಾತ್ರ ಪ್ರತಿಷ್ಠಾಪನೆಗೆ ಸರಕಾರ ಅಥವಾ ಹಿಂದೂ ಹೋರಾಟಗಾರರು ಅವಕಾಶ ನೀಡುತ್ತಾರೆ. ಇಲ್ಲವಾದರೆ ಮುಂದೊಂದು ದಿನ ಭಯಾನಕವಾದಂತ ಪರಿಸ್ಥಿತಿ ತಿಳಿಸಬೇಕಾಗುತ್ತದೆ ಎನ್ನುವುದು ಹಿಂದುಗಳ ವಾದ.
ಪರಶುರಾಮ ಮೂರ್ತಿಯನ್ನು ಪುನರ್ ಪ್ರತಿಷ್ಠಾಪನೆ ಮಾಡುವ ಮುಂಚೆ ಇಷ್ಟು ಕಾರ್ಯಗಳು ನಡೆಯಬೇಕಿದೆ.
1.ಪರಶುರಾಮ ಮೂರ್ತಿ ಕಂಚಿನ ಪ್ರತಿಮೆ ಎಂದು ತೀರ್ಮಾನ ಕೈಗೊಳ್ಳಬೇಕು.
2. ಕಾರ್ಕಳದಲ್ಲಿರುವ ಪರಶುರಾಮನ ಮೂರ್ತಿ ಪರೀಕ್ಷಾರ್ಥವಾಗಿ ಕೆಲಸ ಆಗಬೇಕು.
3. ಶಾಸಕ ಸುನಿಲ್ ಕುಮಾರ್ ಅವರ ತನಿಖೆಯಾಗಬೇಕು.
4. ಹಿಂದುಗಳ ಭಾವನೆಗೆ ಧಕ್ಕೆ ತಂದಿರುವಂತಹ ವಿಚಾರಗಳ ಬಗ್ಗೆ ಕೋರ್ಟ್ ಸಮ್ಮತಿ ನೀಡಬೇಕು.
5. ಕಾರ್ಕಳದ ಥೀಮ್ ಪಾರ್ಕ್ ಪ್ರವಾಸೋದ್ಯಮವನ್ನು ಮಾಡುವ ಸಲುವಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು.
6. ಸರ್ಕಾರದ ಮಟ್ಟದಲ್ಲಿ ತನಿಖೆಯನ್ನು ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು.
7. ಮೂರ್ತಿಯನ್ನು ಸಿದ್ಧಪಡಿಸಿದ ವ್ಯಕ್ತಿಗಳನ್ನು ತನಿಖೆಗೆ ಆದೇಶಿಸಬೇಕು, ತಪ್ಪಿಸ್ತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
8.ಉಡುಪಿ ಉಸ್ತುವಾರಿ ವಹಿಸಿಕೊಂಡಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಶೀಘ್ರವಾಗಿ ಇದರ ಮಾಹಿತಿಯನ್ನು ನೀಡಬೇಕು 9.ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಹೊಸ ಪ್ರತಿಮೆ ನಿರ್ಮಾಣವಾಗಬೇಕು ಮೂರ್ತಿ ನಿರ್ಮಾಣವಾಗುವ ಮುಂಚೆಯೇ ನಕಲಿಯು ಅಸಲಿ ಎನ್ನುವುದು ದೃಢವಾಗಬೇಕು
10. ಈ ಮೂರ್ತಿಯನ್ನು ಟೆಸ್ಟಿಗೆ ಕಳುಹಿಸಬೇಕು. ಮರು ಪ್ರತಿಷ್ಠಾಪನೆಯ ಸಾರ್ವಜನಿಕರವಾಗಿ ನಡೆಯಬೇಕು.
ಒಟ್ಟಾರೆಯಾಗಿ ಕಾರ್ಕಳದಲ್ಲಿ ನಡೆಯುವಂತಹ ಘಟನೆ ಇಡೀ ರಾಜ್ಯವನ್ನೇ ಮುಜುಗರ ಆಗುವಂತೆ ಮಾಡಿದೆ ಒಟ್ಟಾರೆಯಾಗಿ ನಕಲಿ ಪ್ರತಿಮೆಯನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಪಂಗನಾಮ ಹಾಕಿದಂತಹ ಅಧಿಕಾರಿಗಳು ಹಾಗೂ ಶಾಸಕರಿಗೆ ಸರ್ಕಾರ ನೋಟಿಸ್ ಅನ್ನು ಜಾರಿ ಮಾಡಿ ತನಿಖೆಗೆ ಆದೇಶಿಸಬೇಕು ಎನ್ನುವುದು ಸಾರ್ವಜನಿಕರ ವಲಯದಲ್ಲಿ ಕೇಳು ಬರುತ್ತಿರುವ ಮಾತು.