ಡೈಲಿ ವಾರ್ತೆ: 15/OCT/2023
✒️ ಓಂಕಾರ ಎಸ್. ವಿ. ತಾಳಗುಪ್ಪ
20 ಅಡಿ ಉದ್ದದ ಪೆನ್ ತಯಾರಿಸಿದ ಆವಿನಹಳ್ಳಿಯ ಕೃಷ್ಣಮೂರ್ತಿ- ಇಂಡಿಯನ್ ಬುಕ್ ಆಫ್ ರೆಕಾರ್ಡ್‍ನಲ್ಲಿ ಪೆನ್‍ಗೆ ಸ್ಥಾನ
ಸಾಗರ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆವಿನಹಳ್ಳಿಯ ಗಣೇಶ್ ಹಾರ್ಡ್ ವೇರ್ ಮತ್ತು ಜೈಗಣೇಶ್ ವುಡ್‍ವರ್ಕ್ ಮಾಲೀಕ ಕೃಷ್ಣಮೂರ್ತಿ ಆಚಾರ್ ತಯಾರಿಸಿದ 20 ಅಡಿ ಉದ್ದದ ಪೆನ್‍ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್‍ನಲ್ಲಿ ಸ್ಥಾನ ಸಿಕ್ಕಿದೆ.
ಕುಶಲಕರ್ಮಿ ಕೃಷ್ಣಮೂರ್ತಿ ಆಚಾರ್ ಅವರು ಕಳೆದ ಹತ್ತು ವರ್ಷಗಳ ಹಿಂದೆ ತಯಾರಿಸಿದ್ದ ಸುಮಾರು 20 ಅಡಿ ಉದ್ದದ ಪೆನ್‍ಗೆ ನವದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್‍ಗೆ ದಾಖಲಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೃಷ್ಣಮೂರ್ತಿ ಆಚಾರ್ ಅವರು ವಿಶ್ವಕರ್ಮಸ್ ಎಂಬ ಹೆಸರಿನಲ್ಲಿ ತಯಾರಿಸಿದ ಈ ಬೃಹತ್ ಪೆನ್‍ಗೆ ಹೈಬ್ರೀಡ್ ಅಕೇಶಿಯಾವನ್ನು ಬಳಕೆ ಮಾಡಿ ಸುಮಾರು 15 ದಿನಗಳ ನಿರಂತರ ಕೆಲಸದ ಮೂಲಕ ತಯಾರಿಸಿದ್ದಾರೆ. ಈ ವಿಶೇಷವಾದ ಪೆನ್ನನ್ನು ಗಿನ್ನಿಸ್ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್‍ಗೆ ಕಳಿಸಲಾಗಿತ್ತು. ಇದೀಗ ಇಂಡಿಯನ್ ಬುಕ್ ಆಫ್ ರೆಕಾರ್ಡ್‍ನಲ್ಲಿ ಪೆನ್‍ಗೆ ಸ್ಥಾನ ಸಿಕ್ಕಿದೆ.