ಡೈಲಿ ವಾರ್ತೆ: 17/OCT/2023
ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಸ್ವಚ್ಛತೆಗೆ ಆದ್ಯತೆ ಕೊಟ್ಟ ಕರಾವಳಿ ಪೇ ಪಾರ್ಕಿಂಗ್ & ಕರಾವಳಿ ಗ್ಯಾಸ್ ಪಾಯಿಂಟ್
ಮಲ್ಪೆ: ಮಲ್ಪೆ ಬಂದರು ಏಶ್ಯಾದಲ್ಲೇ ಬಹುದೊಡ್ಡ ಸರ್ವಋತು ಬಂದರು ಎಂಬ ಹೆಗ್ಗಳಿಕೆ ಪಡೆದಿದೆ. ಸಾವಿರಾರು ಮೀನುಗಾರಿಕಾ ಬೋಟ್ ಗಳು ಇಲ್ಲಿ ಕಾರ್ಯಾಚರಿಸುತ್ತಿವೆ. ಕೇವಲ ಮಲ್ಪೆ ಮಾತ್ರವಲ್ಲದೆ, ಈ ಕಡೆ ದಕ್ಷಿಣ ಕನ್ನಡ ಮತ್ತು ಇನ್ನೊಂದು ಕಡೆ ಉತ್ತರ ಕನ್ನಡದ ಬೋಟ್ ಗಳೂ ಮಲ್ಪೆಯನ್ನೇ ಕೇಂದ್ರೀಕರಿಸಿ ಮೀನುಗಾರಿಕಾ ಚಟುವಟಿಕೆಯಲ್ಲಿ ತೊಡಗಿಕೊಂಡಿವೆ.
ಇಂತಹ ಬೃಹತ್ ಬಂದರಿನಲ್ಲಿ ಸ್ವಚ್ಛತೆ ಬಹುದೊಡ್ಡ ಸವಾಲು. ಸಾವಿರಾರು ಜನ ಪ್ರತಿನಿತ್ಯ ಮೀನುಗಾರಿಕೆ ನಡೆಸಲು ಇಲ್ಲಿಗೆ ಆಗಮಿಸುತ್ತಾರೆ. ಮೀನುಗಾರಿಕೆಗೆ ಪೂರಕವಾಗಿ ಮಂಜುಗಡ್ಡೆ ಉದ್ಯಮವೂ ಇಲ್ಲಿದೆ. ಈ ಎಲ್ಲದರ ಪರಿಣಾಮ ಇಲ್ಲಿ ಸ್ವಚ್ಛತೆಗೆ ವಿಶೇಷ ಗಮನ ಕೊಡಬೇಕಾಗುತ್ತದೆ.
ಸದ್ಯ ಬಂದರು ಪ್ರದೇಶದಲ್ಲಿ ನಲ್ವತ್ತಕ್ಕೂ ಹೆಚ್ಚು ಸಿಬ್ಬಂದಿ ಇಲ್ಲಿನ ಸ್ವಚ್ಛತೆಯಲ್ಲಿ ತೊಡಗಿದ್ದಾರೆ. ಮೂರು ಬೃಹತ್ ಧಕ್ಕೆಯನ್ನು ನೀರು ಹಾಕಿ ಸ್ವಚ್ಛ ಮಾಡಬೇಕಾಗುತ್ತದೆ. ಮೀನು ವಿಲೇವಾರಿ ಮಾಡುವಾಗ ,ಬೋಟ್ ಮತ್ತು ಲಾರಿಗಳಿಗೆ ಲೋಡ್, ಅನ್ ಲೋಡ್ ಮಾಡುವಾಗ, ಹರಾಜು ಪ್ರಾಂಗಣದಲ್ಲಿ ಹರಡಿ ವ್ಯಾಪಾರ ಮಾಡುವಾಗ ಮೀನುಗಳು ಎಲ್ಲೆಂದರಲ್ಲಿ ಬೀಳುವುದು ಸಾಮಾನ್ಯ. ಇದರ ಸ್ವಚ್ಛತೆಗೆಂದೇ ಮಲ್ಪೆಯಲ್ಲಿ ಹಲವು ಜನರು ಇಡೀ ದಿನ ಕಾರ್ಯ ನಿರ್ವಹಿದುತ್ತಾರೆ. ನೀರು ಹಾಕಿ ಕಾಲಕಾಲಕ್ಕೆ ಸ್ವಚ್ಛತೆ ಮಾಡದೇ ಇದ್ದರೆ ಇಲ್ಲಿ ವಾಸನೆಯಿಂದ ಅತ್ತಿಂದಿತ್ತ ಓಡಾಡುವುದೇ ಕಷ್ಟ. ಇದೇ ಕಾರಣದಿಂದ ಹೊರಗುತ್ತಿಗೆ ಪಡೆದ ಕರಾವಳಿ ಪೇ ಪಾರ್ಕಿಂಗ್ & ಕರಾವಳಿ ಗ್ಯಾಸ್ ಪಾಯಿಂಟ್ ಸಂಸ್ಥೆಯು ಇಲ್ಲಿ ಕಾಲಕಾಲಕ್ಕೆ ಮಲ್ಪೆ ಬಂದರಿನ ಸ್ವಚ್ಛತೆಯಲ್ಲಿ ತೊಡಗಿಕೊಂಡಿದೆ.
8 ವರ್ಷಗಳ ಹಿಂದೆ ಸ್ಥಳೀಯರು ಯಾರೂ ಬಂದರ್ ಒಳಗಡೆ ಬರಲು ತಯಾರಿರಲಿಲ್ಲ ಕಾರಣ ಅಷ್ಟೊಂದು ಗಲೀಜುಗಳು, ದುರ್ವಾಸನೆಗಳಿಂದ ಕೂಡಿದ್ದವು. ಆದರೆ ಹೊರಗುತ್ತಿಗೆದಾರರಿಗೆ ಟೆಂಡರ್ ಕೊಟ್ಟ ಮೇಲೆ ಇಲ್ಲಿಯ ಸ್ವಚ್ಛತೆ ಹಿಡಿದು ಪಾರ್ಕಿಂಗ್ ವ್ಯವಸ್ಥೆ ಹಾಗೂ ವಿದ್ಯುತ್ ದೀಪಗಳು ಈ ಎಲ್ಲಾ ವ್ಯವಸ್ಥೆಗಳನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೆ. ಇದರಿಂದಾಗಿ ಸ್ಥಳೀಯರು, ಹೊರಗಿನವರು ಮೀನು ತೆಗೆಯಲು ಬರುತ್ತಾರೆ. ಅಲ್ಲದೆ ಮೀನಿನ ದರ ಸಹ ಹೆಚ್ಚಾಗಿರುತ್ತದೆ.
ಇನ್ನು ಮುಂದೆ ಮಲ್ಪೆ ಬಂದರು ಅಭಿವೃದ್ಧಿ ಹೊಂದುದರಲ್ಲಿ ಯಾವುದೇ ಸಂದೇಹ ಇಲ್ಲ ಸ್ಥಳೀಯರ ಅಭಿಪ್ರಾಯವಾಗಿರುತ್ತದೆ.