ಡೈಲಿ ವಾರ್ತೆ: 20/OCT/2023
ಸಾೈಬ್ರಕಟ್ಟೆ: ರಾಗಶ್ರೀ ಸಂಗೀತ ಶಾಲೆ ಶಾರದಾ ಪೂಜೆ – ಸಂಗೀತಾಪರ್ಣೆ
ಕೋಟ: ರಾಗಶ್ರೀ ಸಂಗೀತ ಶಾಲೆ ಸಾೈಬ್ರಕಟ್ಟೆ ಅಶ್ರಯದಲ್ಲಿ ಶಾರದಾ ಪೂಜೆ ಹಾಗೂ ವಿದ್ಯಾರ್ಥಿಗಳಿಂದ ಸಂಗೀತಾಪರ್ಣೆ ಕಾರ್ಯಕ್ರಮ ಅ. 20 ರಂದು ಸಾೈಬ್ರಕಟ್ಟೆ ಮೈಂಡ್ ಲೀಡ್ ಸಂಸ್ಥೆ ಸಭಾಂಗಣದಲ್ಲಿ ಜರಗಿತು.
ಸಂಗೀತ ಗುರುಗಳಾದ ವಿದ್ವಾನ್ ಅಶೋಕ್ ಆಚಾರ್ಯ ಸಾೈಬ್ರಕಟ್ಟೆ ಅವರು ಶಾರದಾ ದೇವಿಗೆ
ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಂಗೀತ
ಎನ್ನುವಂತದ್ದು ದೇವಿಗೆ ಸಮಾನವಾದದ್ದು ಹಾಗೂ ಇದರ ಅದಿ ದೇವತೆ ಶಾರದೆ. ಹೀಗಾಗಿ
ನವರಾತ್ರಿಯ ಪರ್ವಕಾಲದಲ್ಲಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ, ಸಂಗೀತಾಪರ್ಣೆಯನ್ನು
ನೆರವೇರಿಸುವುದರಿಂದ ಪುಣ್ಯ ಪ್ರಾಪ್ತವಾಗುತ್ತದೆ ಎಂದರು ಹಾಗೂ ರಾಗಶ್ರೀ ಸಂಗೀತ
ಶಾಲೆಯಲ್ಲಿ ಈಗಾಗಲೇ ನೂರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು ಅವರೆಲ್ಲರ
ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ನಿವೃತ್ತ ಪ್ರಾಂಶುಪಾಲ ವಾಸು ಶೆಟ್ಟಿ ಅಚ್ಲಾಡಿ ದೀಪ ಬೆಳಗಿಸಿ ಶುಭ ಹಾರೈಸಿದರು.
ರಾಗಶ್ರೀ ಸಂಗೀತ ಟ್ರಸ್ಟ್‌ನ ಸದಸ್ಯರಾದ ಮನೋಹರ್ ಆಚಾರ್ಯ, ರಾಘವೇಂದ್ರ ಆಚಾರ್ಯ ಸಾೈಬ್ರಕಟ್ಟೆ, ಈಶ್ವರ ಪೂಜಾರಿ, ಮೈಂಡ್‌ಲೀಡ್ ಸಂಸ್ಥೆಯ ಮುಖ್ಯಸ್ಥರಾದ ಅಜಿತ್ ಕುಮಾರ್, ಮುಖ್ಯ ಶಿಕ್ಷಕಿ ಸಂಧ್ಯಾ ಶೆಟ್ಟಿ, ಮುಖ್ಯಸ್ಥರಾದ ಶ್ಯಾಮಲಾ ಅಜಿತ್
ಮೊದಲಾದವರು ಉಪಸ್ಥಿತರಿದ್ದರು.
ರಾಗಶ್ರೀ ಸಂಗೀತ ಶಾಲೆಯ ಸಂಚಾಲಕರಾದ ಶ್ರೀದೇವಿ ಅಶೋಕ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಅನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರಗಿತು.