ಡೈಲಿ ವಾರ್ತೆ: 20/OCT/2023

ವಂಡಾರು ಗೇರು ಬೀಜ ಕಾರ್ಖಾನೆಯಲ್ಲಿ ಮಾಲೀಕನಿಂದ ಹಲ್ಲೆ: ದೂರು ದಾಖಲು

ಕೋಟ:ಬ್ರಹ್ಮಾವರ ತಾಲೂಕಿನ ವಂಡಾರುವಿನಲ್ಲಿರುವ ಶ್ರೀಕೃಷ್ಣ ಪ್ರಸಾದ ಗೇರು ಬೀಜ‌ ಕಾರ್ಖಾನೆಯ ಮಾಲೀಕ ಸಂಪತ್ ಕುಮಾರ್ ಶೆಟ್ಟಿ ಅದೇ ಸಂಸ್ಥೆಯ ‌ಉದ್ಯೋಗಿ‌ ಮೇಲೆ ಹಲ್ಲೆ ನಡೆಸಿದ ಘಟನೆ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಲ್ಲೆಗೊಳಗಾಗಿ ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಸ್ತಾನ ಗುಂಡ್ಮಿ‌ ಗ್ರಾಮದ ಯಕ್ಷಿಮಠದ ನಿವಾಸಿ ವಿಜಯ್ (25) ಸಂಸ್ಥೆಯ ಟೆಕ್ನೀಶಿಯನ್.

ಆರೋಪಿ ಸಂಪತ್ ಕುಮಾರ್ ಶೆಟ್ಟಿ

ಗೇರುಬೀಜಗಳನ್ನು ದೊಡ್ಡ ಮೆಶೀನ್ ಗೆ ಹಾಕುವ ಬದಲು ಸಣ್ಣ ಮೆಶೀನ್ ಗೆ ಹಾಕಿದ‌ ಕಾರಣ ಮಾಲೀಕ‌ ಕೋಪಗೊಂಡು ವಿಜಯರವರು ಕೆಲಸ ಮಾಡುತ್ತಿದ್ದ ಜಾಗಕ್ಕೆ ಬಂದು ಕಾಲರ್ ಪಟ್ಟಿ ಹಿಡಿದು ಕೈಯಿಂದ ಕಪಾಲಕ್ಕೆ, ಹಾಗೂ ಹೊಟ್ಟೆಗೆ ಹಲ್ಲೆ ಮಾಡಿ ನಂತರ ಬೂಟು ಕಾಲಿಂದ ಎದೆ, ಹೊಟ್ಟೆ ಭಾಗಕ್ಕೆ ತುಳಿದು ಕಂಪನಿಯ ಕೆಲಸಗಾರರ ಎದುರುಗಡೆ ಅವರಿಗೆ ಅವಮಾನವಾಗುವ ರೀತಿಯಲ್ಲಿ ಅವಾಚ್ಯ ಶಬ್ದದಿಂದ ನಿಂದಿಸಿ ನಂತರ ಪುನಃ ಕ್ಯಾಬಿನ್ಗೆ ಎಳೆದುಕೊಂಡು ಹೋಗಿ ಅಲ್ಲಿ ಪುನಃ ಕೈಯಿಂದ ಹಲ್ಲೆ ಮಾಡಿ ಗೇರು ಬೀಜ ಕಟಿಂಗ್ ಮಾಡುವಾಗ ನಿನ್ನದೆ ತಪ್ಪು ಎಂದು ಒಪ್ಪಿಕೊಳ್ಳು ಕಂಪ್ಲೇಂಟ್ ಕೊಟ್ಟರೆ ನಿನ್ನನ್ನು ಉಳಿಯಲು ಬಿಡುವುದಿಲ್ಲ ರೇಫ್ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು‌ ವಿಜಯ್ ದೂರಿನಲ್ಲಿ ತಿಳಿಸಿದ್ದಾರೆ.
.