ಡೈಲಿ ವಾರ್ತೆ: 25/OCT/2023

ವರದಿ: ಬಿ ಮಾರುತಿ ಕೊಟ್ಟೂರು

ವಿಜಯಪುರ: ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದಸರಾ ಹಬ್ಬ ಆಚರಣೆ

ವಿಜಯಪುರ: ಶಕ್ತಿ ದೇವತೆಯಾದ, ದುಗಾ೯ ,ಚಾಮುಂಡಿ ಇತರೆ ದೇವತೆಗಳನ್ನು , ಒಂಬತ್ತು ದಿನಗಳ ದೇವಿಯ ವಿವಿಧ ಅವತಾರಗಳಿಗೆ ಪೂಜೆ ಮಾಡಿ ವಿಜಯದಶಮಿ ದಿನ ಭಕ್ತಿ ಭಾವದಿಂದ ಬೀಳ್ಕೊಡಲಾಗುತ್ತದೆ. ಈ ವೈಭವದ, ವಿಜಯದಶಯ ಹಿಂದೆ ಅನೇಕ ಪುರಾಣ ಕಥೆಗಳಿವೆ. ಈ ಮಹತ್ವವಾದ ದಿನದಂದು ರಾಜ ಮಹಾರಾಜರು ಶತ್ರುಗಳ ವಿರುದ್ಧ ಹೋರಾಡುತ್ತಿದ್ದರು ಎನ್ನಲಾಗಿದೆ.

ನಮ್ಮಲ್ಲಿರುವ 10 ದುರ್ಗುಣಗಳನ್ನು ಕಾಮ, ಕ್ರೋಧ, ಮೋಹ ,ಲೋಬ ,ಮದ, ಮತ್ಸರ , ಸ್ವಾರ್ಥ, ಅನ್ಯಾಯ, ಅವಮಾನೀಯತೆ ಮತ್ತು ಅಹಂಕಾರವನ್ನು ನಿರ್ಮೂಲನೆ ಮಾಡುವುದೇ ದಸರಾ ಹಬ್ಬದ ಹಿಂದಿರುವ ತತ್ವ. ವಿಜಯದಶಮಿ ಎಂದರೆ ವಿಜಯದ ಸಂಕೇತ, ವಿಜಯ ಪರಾಕ್ರಮದ ಹಬ್ಬವೇ ವಿಜಯದಶಮಿ. ಈ ದಿನದಂದು ಯಾವುದೇ ಕಾರ್ಯಗಳನ್ನು ಪ್ರಾರಂಭಿಸಿದರು ವಿಜಯ ಖಚಿತ ಎಂಬ ನಂಬಿಕೆ ಅನಾದಿಕಾಲದಿಂದಲೂ ಬಂದಿದೆ.

ಈ ಮಹತ್ವವಾದ ಹಬ್ಬವನ್ನು ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಪೋಲಿಸ್ ಠಾಣೆಯಲ್ಲಿ
ಸಿ ಪಿ ಐ ಹಾಗೂ ಪಿ ಎಸ್ ಐ ಗೀತಾಂಜಲಿ ಮೇಡಂ ರವರ ನೇತೃತ್ವದಲ್ಲಿ ದಸರಾ ಹಬ್ಬದ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಪೊಲೀಸರಿಗೆ ಪ್ರತಿದಿನ ಖಾಕಿ ಬಟ್ಟೆಗಳೇ ಅವರಿಗೆ ಸಂಗಾತಿ. ಅವರ ವೃತ್ತಿ ಜೀವನದಲ್ಲಿ ಬಹುತೇಕ ಬಣ್ಣ ಬಣ್ಣದ ಬಟ್ಟೆ ಧರಿಸುವುದು ಆಗೊಮ್ಮೆ, ಹೀಗೊಮ್ಮೆ ಬಿಟ್ಟರೆ ಬೇರೆ ದಿನಗಳಲ್ಲಿ ಕನಸಿನ ಮಾತೇ ಸರಿ. ಕಷ್ಟ ಸುಖವು ಬಂದಿದ್ದೆಲ್ಲ ಬರಲಿ ಎಂದು ಚಳಿ , ಮಳಿ , ಗಾಳಿಗೆ ಮೈಯೋಡುತ್ತಾ, ದಿನನಿತ್ಯ ‘ಡ್ಯೂಟಿ’ ಎಂಬ ಜಂಜಾಟದಲ್ಲಿ ಒದ್ದಾಡುತ್ತಿರುತ್ತಾರೆ. ಅಂತಹ ಪೊಲೀಸರಿಗೆ ರಿಲ್ಯಾಕ್ಸ್ ಸಿಕ್ಕಿದರೆ ಹೇಗಿರುತ್ತದೆ ಎನ್ನುವುದಕ್ಕೆ ನಮ್ಮ ಕೊಟ್ಟೂರು ಪೊಲೀಸ್ ಠಾಣೆ ಸಾಕ್ಷಿಯಾಯಿತು.

ನಾಡಿನೆಲ್ಲಡೆ ಇಂದು ಸಂಭ್ರಮದ ಆಯುಧ ಪೂಜೆ ನಡೆಯುತ್ತದೆ. ಕೊಟ್ಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ರೀತಿಯ ಆಯುಧ ಪೂಜೆ ನಡೆಯಿತು. ದಿನಂಪ್ರತಿ ಖಾಕಿ ಬಟ್ಟೆಯಲ್ಲಿ ಪೊಲೀಸರು ಜಬರ್ದಸ್ತ್ ಆಗಿ ಕಾಣುತ್ತಿದ್ದ ಇವರು, ಸಾಂಪ್ರದಾಯಿಕ ಶೈಲಿಯ ಬಿಳಿ ಅಂಗಿ ಪಂಚೆಯನ್ನು ತೊಟ್ಟು ಕಂಗೊಳಿಸುತ್ತಿದ್ದರು.

ಠಾಣೆಯಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಿದರು. ವಾಹನಗಳು, ರಿವಾಲ್ವಾರ್, ಬಂದೂಕುಗಳನ್ನು ಅಲಂಕಾರಗೊಳಿಸಿ ಪೂಜಾ ಮಂತ್ರ ಪಠನೆಯ ಮೂಲಕ ನೆರವೇರಿಸಿದರು. ಪೂಜೆಯ ಬಳಿಕ ಸಿಬ್ಬಂದಿ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದು, ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.