ಡೈಲಿ ವಾರ್ತೆ: 28/OCT/2023
ಇಂದು ವರ್ಷದ ಕೊನೆಯ ಚಂದ್ರಗ್ರಹಣ- ಮಧ್ಯರಾತ್ರಿ 1 ಗಂಟೆಗೆ ಗ್ರಹಣ ಸ್ಪರ್ಶ
ಬೆಂಗಳೂರು: ಇಂದು (ಶನಿವಾರ) ಈ ವರ್ಷದ ಕೊನೆಯ ಗ್ರಹಣವಾಗಿರುವ ಚಂದ್ರಗ್ರಹಣ ಸಂಭವಿಸಲಿದೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಉಂಟಾಗುತ್ತದೆ. ಚಂದ್ರ ಮಸುಕಾಗಿ ಕಾಣುತ್ತ ಬಳಿಕ ಕ್ರಮೇಣ ಕೆಂಪಾಗುವುದು ಚಂದ್ರಗ್ರಹಣದ ಸಂದರ್ಭದಲ್ಲಿ ನಡೆಯುತ್ತದೆ.
ಇಂದು ರಾತ್ರಿ 11.31ಕ್ಕೆ ಆರಂಭವಾಗಲಿರುವ ಈ ಭಾಗಶಃ ಚಂದ್ರಗ್ರಹಣ ಬೆಳಗ್ಗಿನ ಜಾವ 3.36 ಹಾಗೆ ಕೊನೆಯಾಗಲಿದೆ.
ರಾತ್ರಿ 11.31ರ ಹಾಗೆ ಗ್ರಹಣ ಆರಂಭವಾದರೂ ಅದರ ಸಂಪೂರ್ಣ ಛಾಯೆ ಮಧ್ಯರಾತ್ರಿ ಬಳಿಕವೇ ಅಂದರೆ ರಾತ್ರಿ 1.05ರ ಹಾಗೆ ಸಂಪೂರ್ಣವಾಗಿ ಆವರಿಸಿಕೊಳ್ಳಲಿದೆ. ಭಾನುವಾರ ರಾತ್ರಿ 2.24ರವರೆಗೂ ಇರಲಿದೆ. ಹೀಗಾಗಿ ಗ್ರಹಣದ ಈ ಅವಧಿ ಸುಮಾರು 1.19 ನಿಮಿಷದ್ದಾಗಿರಲಿದೆ. ಇಂದಿನ ಭಾಗಶಃ ಚಂದ್ರಗ್ರಹಣ ದೇಶಾದ್ಯಂತ ಗೋಚರಿಸಲಿದೆ.