ಡೈಲಿ ವಾರ್ತೆ: 10/NOV/2023

ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದ ಕೆಇಎ ಪರೀಕ್ಷಾ ಅಕ್ರಮ ರೂವಾರಿ ಆರ್.ಡಿ.ಪಾಟೀಲ

ಕಲಬುರಗಿ: ಪ್ರಸಕ್ತ ಸಾಲಿನಲ್ಲಿ ನಡೆದ ಕೆಇಎ ಪರೀಕ್ಷೆಗಲ್ಲೂ ಬ್ಲೂಟೂತ್ ಬಳಕೆ ಮಾಡಿಸಿ ಅಕ್ರಮಕ್ಕೆ ಕಾರಣವಾಗಿದ್ದ ಆರೋಪದ ಅಡಿಯಲ್ಲಿ ಕಣ್ಮರೆಯಾಗಿದ್ದ ಆರ್.ಡಿ. ಪಾಟೀಲ ಅಲಿಯಾಸ್ ರುದ್ರಗೌಡ ಪಾಟೀಲರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿಯನ್ನಾದರಿಸಿ ಮಹಾರಾಷ್ಟ್ರದ ಸೊಲ್ಲಾಪುರ ಬಳಿ ಪಾಟೀಲನನ್ನು ವಶಕ್ಕೆ ಪಡೆದು ತರಲಾಗುತ್ತಿದೆ ಎಂದು ತಿಳಿದು ಬಂದಿದೆ.

ಎರಡು ದಿನಗಳ ಹಿಂದಷ್ಟೆ ನಗರದ ಅಪಾರ್ಟ್ಮೆಂಟ್ ನಲ್ಲಿ ತಂಗಿದ್ದ ಆತ ಪೊಲೀಸರ ದಾಳಿಯ ಸುಳಿವರಿತು ಅಲ್ಲಿಂದ ಪರಾರಿಯಾಗಿದ್ದ. ಆತನ ಹುಡುಕಾಟಕ್ಕೆ ನಗರ ಕಮಿಷನರೇಟ್ ಮತ್ತು ಎಸ್ಪಿ ಕಲಬುರಗಿ ಮಾರ್ಗದರ್ಶನ ದಲ್ಲಿ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿತ್ತು.

ಶುಕ್ರವಾರ ಮಹಾರಾಷ್ಟ್ರದಿಂದ ಬಂಧಿಸಿ ಕರೆ ತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಧಿಕೃತವಾಗಿ ಬಂಧನದ ವಿಚಾರ ಪೊಲೀಸರು ಬಹಿರಂಗ ಪಡಿಸಬೇಕಿದೆ.