ಡೈಲಿ ವಾರ್ತೆ: 14/NOV/2023

ನೇಜಾರು ನಾಲ್ವರ ಹತ್ಯೆ ಪ್ರಕರಣ: ದೃಶ್ಯಮಾದ್ಯಮಗಳ ಅಸಂಬದ್ಧ ಹೇಳಿಕೆಗೆ ಕಡಿವಾಣ ಹಾಕಲು ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗೆ ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್ ಒತ್ತಾಯ

ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಅಧಿಕೃತ ಹೇಳಿಕೆ ಬರುವವರೆಗೆ ದೃಶ್ಯಮಾದ್ಯಮಗಳ ಅಸಂಬದ್ಧ ಹೇಳಿಕೆಗೆ ಕಡಿವಾಣ ಹಾಕಲು ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್ ಒತ್ತಾಯಿಸಿದೆ.

ತನ್ನ ಆಪ್ತರನ್ನು ಕಳೆದುಕೊಂಡು ಮಾನಸಿಕ ಹಾಗೂ ಶಾರೀರಿಕವಾಗಿ ನೊಂದಿರುವ ಕುಟುಂಬ ಸದಸ್ಯರಿಗೆ ಇನ್ನಷ್ಟು ಅಪಮಾನ ಮತ್ತು ಸಂಕಟವನ್ನು ಉಂಟುಮಾಡುವ ದೃಶ್ಯಮಾದ್ಯಮಗಳ ಅಸಂಬದ್ಧ ವರದಿಗಳನ್ನು ಕೊಡಲೆ ನಿಲ್ಲಿಸಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಅಧಿಕೃತ ಹೇಳಿಕೆ ಬರುವವರೆಗೆ ಅಪರಾಧಿಯ ಬಗ್ಗೆ ಅಥವಾ ಸಂತ್ರಸ್ತ ಕುಟುಂಬದ ಬಗ್ಗೆ ಯಾವುದೇ ವರದಿ ನೀಡದೆ ಇರಲೂ ದೃಶ್ಯ ಮಾದ್ಯಮಗಳಿಗೆ ನಿರ್ದೇಶನ ನೀಡಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ತ್ ಉಡುಪಿ ಜಿಲ್ಲಾ ಸಮಿತಿಯು ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ಒತ್ತಾಯಿಸಿದೆ. ಪೊಲೀಸ್ ಇಲಾಖೆಯ ಅಧಿಕೃತ ಹೇಳಿಕೆ ಬರುವ ಮೊದಲೇ ಅನೈತಿಕ ಸಂಬಂಧ ಎಂದು ಬೊಬ್ಬೆ ಹೊಡೆಯುತ್ತಿರುವ ದೃಶ್ಯ ಮಾದ್ಯಮಗಳ ವಿರುದ್ಧ ಇಲಾಖೆ ಸ್ವಯಂಪ್ರೇರಿತವಾಗಿ ಕೇಸು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಮಿತಿ ಆಗ್ರಹಿಸಿದೆ.