ಡೈಲಿ ವಾರ್ತೆ: 25/NOV/2023

ಚಂದ್ರಗಿರಿ ಸೇತುವೆಯಿಂದ ನದಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣು

ಕಾಸರಗೋಡು: ಚಂದ್ರಗಿರಿ ಸೇತುವೆಯಿಂದ ನದಿಗೆ ಹಾರಿ ವ್ಯಾಪಾರಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಉಳಿಯತ್ತಡ್ಕ ಶಿರಿಬಾಗಿಲಿನ ಹಸೈನಾರ್ (46) ಮೃತಪಟ್ಟವರು.ನನ್ನ ಜೀವನ ಅಂತ್ಯಗೊಳಿಸುವುದಾಗಿ ಕುಟುಂಬದ ವಾಟ್ಸಪ್ ಗ್ರೂಪ್ ನಲ್ಲಿ ಶುಕ್ರವಾರ ಮುಂಜಾನೆ ಸಂದೇಶ ಕಳುಹಿಸಿದ್ದ ಹಸೈನಾರ್ ಬಳಿಕ ಕಾರಿನಲ್ಲಿ ಬಂದು ಚಂದ್ರಗಿರಿ ಸೇತುವೆಯಲ್ಲಿ ನಿಲ್ಲಿಸಿ ನಂತರ ನದಿಗೆ ಹಾರಿದ್ದರು.

ನದಿಗೆ ವ್ಯಕ್ತಿ ಹಾರುತ್ತಿರುವುದನ್ನು ಗಮನಿಸಿದ ಪ್ರತ್ಯಕ್ಷದರ್ಶಿರೋರ್ವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು,ಅಗ್ನಿಶಾಮಕ ದಳದ ಸಿಬ್ಬಂದಿಗಳು,ನಾಗರಿಕರು ಶೋಧ ನಡೆಸಿದ್ದರು. ಘಟನೆ ನಡೆದ ಒಂದು ಕಿ.ಮೀ ದೂರದ ನದಿ ತೀರದಲ್ಲಿ ಇಂದು ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.