ಡೈಲಿ ವಾರ್ತೆ: 25/NOV/2023

ಬಂಟ್ವಾಳ: ಅಪರಿಚಿತ ವ್ಯಕ್ತಿಯಿಂದ ವೃದ್ಧ ಮಹಿಳೆಗೆ ಚಾಕು ತೋರಿಸಿ ಚಿನ್ನ ಲಪಾಯಿಟಸಲು ಯತ್ನ – ದೂರ ದಾಖಲು

ಬಂಟ್ವಾಳ : ವೃದ್ಧ ಮಹಿಳೆಯೋರ್ವರಿಗೆ ಚಾಕು ತೋರಿಸಿ ಬೆದರಿಸಿ ಚಿನ್ನ ಲಪಾಯಿಟಸಲು ಯತ್ನಿಸಿದ ಘಟನೆ ಕುಳ ಗ್ರಾಮದ ನೀರಪಳಿಕೆ ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದಿದೆ,

ನೀರಪಳಿಕೆ ಮಹಮ್ಮದ್ ಕುಂಞಿ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ, ಮನೆ ಮಂದಿ ಚಿಕಿತ್ಸೆಗಾಗಿ ಆಸ್ಪತ್ರೆ ತೆರಳಿದ್ದು ಮನೆಯಲ್ಲಿ ವೃದ್ಧ ಮಹಿಳೆಯ ಒಬ್ಬರು ಮಾತ್ರ ಇರುವ ಸಂಧರ್ಭದಲ್ಲಿ ವ್ಯಕ್ತಿಯೋರ್ವ ಮುಖಕ್ಕೆ ಕವಚ (ಮಾಸ್ಕ್) ಹಾಕಿ ಒಳ ಪ್ರವೇಶಿಸಿ ಒಳಗಿನಿಂದ ಚಿಲಕ ಹಾಕಿ ಮಹಿಳೆಗೆ ಚಾಕು ತೋರಿಸಿ ಬೆದರಿಕೆ ಹಾಕಿ ಕಿವಿಯಲ್ಲಿ ಇರುವ ಚಿನ್ನ ಕೊಡುವಂತೆ ಕೇಳಿದ್ದಾನೆ ತಕ್ಷಣ ಬೆದರಿದ ವೃದ್ಧೆ ಹಿಂದಿನ ಬಾಗಿಲು ಮೂಲಕ ಹತ್ತಿರದ ಮನೆಯವರನ್ನು ಕೂಗಿ ಕರೆದಾಗ ಕಳ್ಳ ಹಿಂಬದಿಯ ತೋಟದ ದಾರಿಯಾಗಿ ಪರಾರಿಯಾಗಿದ್ದಾನೆ .

ತಕ್ಷಣ 112 ಗೆ ಕರೆಮಾಡಿ ಮಾಹಿತಿ ನೀಡಿದ್ದಾಗ ತಕ್ಷಣ ತುರ್ತು ಕಾರ್ಯಪಡೆಯ ಪೋಲಿಸ್ ತಂಡ ಸ್ಥಳಕೆ ಆಗಮಿಸಿದರು, ಬಳಿಕ ವಿಟ್ಲ ಪೋಲಿಸ್ ಠಾಣೆಗೆ ಮಾಹಿತಿ ನೀಡಲಾಯಿತು, ಈ ಬಗ್ಗೆ ವಿಟ್ಲ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.