ಡೈಲಿ ವಾರ್ತೆ: 04/DEC/2023

ಉದ್ಯಮಿಗೆ ವಂಚಿಸಿದ ಪ್ರಕರಣ:
ಕೋಟಿ ಡೀಲ್‌ ಚೈತ್ರಾಗೆ ಜಾಮೀನು ಮಂಜೂರು!

ಬೆಂಗಳೂರು: ಉದ್ಯಮಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಚೈತ್ರಾ ಮತ್ತು ಸ್ನೇಹಿತ ಶ್ರೀಕಾಂತ್‌ಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ಮೂರನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಮಂಗಳವಾರ ಇಬ್ಬರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಲಿದ್ದಾರೆ. ಪ್ರಕರಣದಲ್ಲಿ ಚೈತ್ರಾ ಎ1 ಆರೋಪಿಯಾಗಿದ್ದರೆ ಶ್ರೀಕಾಂತ್‌ ಎ2 ಆರೋಪಿಯಾಗಿದ್ದಾರೆ.

ಚೈತ್ರಾ ಸೇರಿದಂತೆ 7 ಆರೋಪಿಗಳಿಗೆ ಸೆ.23 ರಂದು ಮೂರನೇ ಎಸಿಎಂಎಂ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿತ್ತು.