ಡೈಲಿ ವಾರ್ತೆ: 04/DEC/2023

ವರದಿ: ವಿದ್ಯಾಧರ ಮೊರಬಾ

ಯುವಕರಲ್ಲಿ ಪೋಕ್ಸೊ ಕಾನೂನಿನ ತಿಳಿವಳಿಕೆ ಅಗತ್ಯವಿದೆ – ನ್ಯಾಯವಾದಿ ನಾಗರಾಜ ನಾಯಕ

ಅಂಕೋಲಾ : ಸಮಾಜದಲ್ಲಿ ಕಾನೂನು ಕೊನೆಗೊಂಡಾಗ ದಬ್ಬಾಳಿಕೆ ಪ್ರಾರಂಭವಾಗುತ್ತದೆ. ಮಹಿಳೆಯ ರನ್ನು ಶಕ್ತಿದೇವತೆ ಎಂದು ವೈಭವೀಕರಿಸುವ ಸಮಾಜದಲ್ಲಿ ಮಹಿಳೆಯರ ವಿರುದ್ಧ ಅನ್ಯಾಯ ನಡೆಯುತ್ತಿ ರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣ ಸಿ ಕಠಿಣ ಕಾನೂನುಗಳನ್ನು ರೂಪಿಸಲಾಗಿದೆ ಎಂದು ನ್ಯಾಯವಾದಿ ನಾಗರಾಜ ನಾಯಕ ಬಾಸಗೋಡ ಹೇಳಿದರು.
ಕರ್ನಾಕ ವಿದ್ಯಾವರ್ಧಕ ಸಂಘ ಧಾರವಾಡ ಕಾನೂನು ಮಂಟಪ ಹಾಗೂ ಜೆ.ಸಿ.ಕಾಲೇಜ್ ಅಂಕೋಲಾ ಸಯೋಗದಲ್ಲಿ ಜೆ.ಸಿ.ಕಾಲೇಜಿನ ಯುಜಿಸಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ ‘ಕರ್ನಾಟಕ 50 ರ ಸಂಭ್ರಮ’ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿ, ದೆಹಲಿಯಲ್ಲಿ 2012ರಲ್ಲಿ ನಿರ್ಭಯಾ ಹತ್ಯೆ ಬಳಿಕ ಹೆಣ ್ಣನ ಮಾನ ಪ್ರಾಣವನ್ನು ಪರಿಗಣ ಸಿ ಸರ್ಕಾರ ಪೋಕ್ಸೋ ಕಾಯ್ದೆ ಜಾರಿಗೆ ತರುವ ಜತೆಯಲ್ಲಿ ವಿವಿಧ ಐಪಿಸಿ ಕಲಂ ನ್ನು ಬದಲಾಯಿಸಿದರು. ಪೋಕ್ಸೋ ಕಾಯ್ದೆಯಲ್ಲಿ ಎಷ್ಟು ಆರೋಪಿಗಳು ಶಿಕ್ಷೆ ಅನುಭವಿಸಿದ್ದಾರೆ. ಈ ನಿಟ್ಟಿ ನಲ್ಲಿ ಯುವಜನತೆ ಕನಿಷ್ಠ ಮೆಟ್ಟಿಗಾದರು ಕಾನೂನು ತಿಳುವಳಿಕೆ ಅವಶ್ಯವಿದೆ ಎಂದರು.

ಧಾರವಾಡದ ಹಿರಿಯ ನ್ಯಾಯವಾದಿ ಮತ್ತು ಕಾನೂನು ಮಂಟಪದ ಸಂಚಾಲಕ ಗುರು ಹಿರೇಮಠ ಮಾತನಾಡಿ ಸುವರ್ಣಕರ್ನಾಟಕ ಸಂಭ್ರಮದಲ್ಲಿ ನಾಡಿನ ಏಕೀಕರಣಕ್ಕೆ ಹೋರಾಡಿದ ಮುಂಚೂಣ ಸಂಘ ಟನೆಯಾದ ವಿದ್ಯಾವರ್ಧಕ ಸಂಘವು ಗಡಿನಾಡಿನಿಂದ ಒಳನಾಡಿನ ಪ್ರದೇಶಗಳಲ್ಲಿ ಸುವರ್ಣ ಕರ್ನಾಟಕ ಸಂಭ್ರಮದ ಈ ವರ್ಷದಾದ್ಯಂತ ಉಪನ್ಯಾಸ ಕಾರ್ಯಕ್ರಮ ನೀಡುವ ಜತೆ ಕಳೆದ ನವಂಬರ್ ತಿಂಗಳಲ್ಲಿ ಸುಮಾರು 25 ಸಾವಿರ ವಿದ್ಯಾರ್ಥಿಗಳಿಗೆ ಕನ್ನಡ ಅರಿವು, ಕನ್ನಡ ಭಾಷೆ ಅಸ್ಮಿತ ಬಗ್ಗೆ ತಿಳುವಳಿಕೆ ನೀಡಿ ದ್ದೇವೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಸಹಾಯಕ ಸರ್ಕಾರಿ ಅಭಿಯೋಜಕಿ ಶಿಲ್ಪಾ ನಾಯ್ಕ ಹದಿಹರೆಯದ ಮಕ್ಕಳ ಲ್ಲಿ ಕುತೂಹಲ ಪ್ರವೃತ್ತಿಯಿಂದಾಗಿ ಹಲವಾರು ತಪ್ಪುಗಳು ಸಂಭವಿಸುತ್ತವೆ. ಇದರಿಂದಾಗಿ ಅರಿತೊಅರಿಯ ದೆಯೊ ಮಾಡಿದ ತಪ್ಪುಗಳಿಂದ ಜೀವನ ಪರ್ಯಂತ ಪರಿತಪಿಸುವಂತಾಗುತ್ತದೆ. ಆದ್ದರಿಂದ ಯುವಕರಿಗೆ ಪೋಕ್ಸೊ ಕಾನೂನಿನ ಕುರಿತು ತಿಳಿವಳಿಕೆ ನೀಡುವುದು ಅನಿವಾರ್ಯವಾಗಿದೆ. 2012ರಲ್ಲಿ ಜಾರಿಗೆ ಆದ ಪೋಕ್ಸೋ ಕಾಯ್ದೆಯ ಅನುಗುಣವಾಗಿ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಮಕ್ಕಳ ಸ್ನೇಹಿ ನ್ಯಾಯಾಂಗ ಕಾರ್ಯವಿಧಾನಗಳನ್ನು ಪರಿಚಯಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದೆ ಎಂದರು.

ಮಹಿಳಾ ವಿಭಾಗದ ಪ್ರೊ. ವೀಣಾ ತೊರ್ಕೆ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ.ಎಸ್.ವಿ. ವಸ್ತ್ರದ ಅಧ್ಯಕ್ಷ ತೆ ವಹಿಸಿದ್ದರು. ಪ್ರಾಧ್ಯಾಪಕರಾದ ವಿ.ಎಂ.ನಾಯ್ಕ, ಆರ್.ಪಿ.ಭಟ್, ಎಂ.ಎಂ.ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರತೀಕ್ಷಾ ಸಂಗಡಿಗರು ಪ್ರಾರ್ಥಿಸಿದರು. ಕಾನೂನು ಮಂಟಪದ ಸಲಹಾ ಸಮಿತಿ ಸದಸ್ಯರಾದ ಚಂದ್ರಶೇಖರ ಮಹಾಜನಶೆಟ್ಟರ, ಸರಸ್ವತಿ ಪೂಜಾರ ನಿರ್ವಹಿಸಿದರು. ಕಾನೂನು ಮಂಟಪದ ಅಧೀಕ್ಷಕ ಎಸ್.ಆಯ್.ಭಾವಿಕಟ್ಟೆ ಸಹಕರಿಸಿದರು.
ಉದ್ಯೋಗ ಸಂಬಂಧಪಟ್ಟಂತೆ ಜೆ.ಸಿ.ಕಾಲೇಜಿನ ವಿದ್ಯಾರ್ಥಿಗಳಿಗೆ ದೇಶಪಾಂಡೆ ಫೌಂಡೇಶನ್ ನೀಡಿದ ತರ ಬೇತಿಯ ಪ್ರಮಾಣ ಪತ್ರವನ್ನು ಶೈಲೇಶ ನಾಯಕ, ಪ್ರಜ್ಞಾ ನಾಯಕ, ಕಾವ್ಯ ನಾಯಕ, ಅಶ್ವಿನಿ ಕಾಮತ, ಪೂಜಾ ನಾಯ್ಕ, ರತಿಕ ವೆರ್ಣೇಕರ, ದೀಪಿಕ ನಾಯಕ, ಸೃಷ್ಠಿ ನಾಯಕ ವಿತರಿಸಲಾಯಿತು. ಈ ವೇಳೆ ಬೀಬಿ ಕುತೇಜ, ಗ್ರಂಥಪಾಲಕ ನಂಜುಡಯ್ಯ ಉಪಸ್ಥಿತರಿದ್ದರು.