ಡೈಲಿ ವಾರ್ತೆ: 06/DEC/2023
ಕೋಟತಟ್ಟು ಗ್ರಾ. ಪಂ. ನ ಮಕ್ಕಳ, ಮಹಿಳಾ ಮತ್ತು ಕಿಶೋರಿಯರ ವಿಶೇಷ ಗ್ರಾಮ ಸಭೆ
ಕೋಟ: ಕೋಟತಟ್ಟು ಗ್ರಾಮ ಪಂಚಾಯಿತಿನ ಮಕ್ಕಳ, ಮಹಿಳಾ ಮತ್ತು ಕಿಶೋರಿಯರ ವಿಶೇಷ ಗ್ರಾಮ ಸಭೆಯು ದಿನಾಂಕ 6 ರಂದು ಬುಧವಾರ ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಂಚಾಯತ್ ಅಧ್ಯಕ್ಷ ಕೆ. ಸತೀಶ್ ಕುಂದರ್ ಬಾರಿಕೆರೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬಾಲ ನ್ಯಾಯ ಮಂಡಳಿ ಸಮಿತಿ ಸದಸ್ಯೆ ಶ್ರೀಮತಿ ಅಮೃತಕಲಾ ಅವರು ಮಕ್ಕಳ ಹಕ್ಕುಗಳು ಹಾಗೂ ಗ್ರಂಥಾಲಯಗಳ ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ತಿಳಿಸಿದರು.
ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ವೈದ್ಯರಾದ ಮಾಧವ ಪೈ ಅವರು ಮಕ್ಕಳ ಪೌಷ್ಠಿಕ ಆಹಾರದ ಬಗ್ಗೆ ಮತ್ತು ಮಕ್ಕಳ ಒಳ್ಳೆ ಸ್ಪರ್ಶ ಕೆಟ್ಟ ಸ್ಪರ್ಷಗಳ ಬಗ್ಗೆ ಮಾಹಿತಿ ನೀಡಿದರು.
ವಕೀಲರು ಹಾಗೂ ಪಂಚಾಯತ್ ಸದಸ್ಯರಾದ ಪ್ರಮೋದ್ ಹಂದೆ ಅವರು ಮಕ್ಕಳ ಕಾನೂನಿನ ಬಗ್ಗೆ ಅರಿವು ಮೂಡಿಸಿದರು
ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸರಸ್ವತಿ, ಸದಸ್ಯರಾದ ವಾಸು ಪೂಜಾರಿ, ಪ್ರಮೋದ್ ಹಂದೆ, ಪ್ರಕಾಶ್ ಹಂದಟ್ಟು, ರವೀಂದ್ರ ತಿಂಗಳಾಯ, ರಾಬರ್ಟ್ ರೋಡ್ರಿಗಸ್, ವಿದ್ಯಾ ಪಿ, ಜ್ಯೋತಿ, ಅಶ್ವಿನಿ, ಸೀತಾ, ಸಾಹಿರ ಬಾನು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಮೀನಾಕ್ಷಿ, ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕರಾದ ಕುಮಾರಿ. ನಯನ, ಕೋಟ ಆರಕ್ಷರ ಠಾಣೆಯ ಸಿಬ್ಬಂದಿ ಅಶ್ವಿನಿ, ಕೋಟ ಹಾಗೂ ಕೋಟತಟ್ಟು ಪಡುಕರೆ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರು, ಸಾರ್ವಜನಿಕರು, ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್ ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಂಚಾಯತ್ ಸದಸ್ಯ ವಾಸು ಪೂಜಾರಿ ಅವರು ಸ್ವಾಗತಸಿದರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರ ರಾವ್ ಅವರು ನಿರೂಪಿಸಿ ವಂದಿಸಿದರು.