ಡೈಲಿ ವಾರ್ತೆ: 07/DEC/2023
ಸೋಲನ್ನ ಮೆಟ್ಟಿಲಾಗಿಸಿ ಸೋಲು ಗೆಲುವನ್ನು ಸಮ ಪ್ರಮಾಣದಲ್ಲಿ ಸ್ವೀಕರಿಸಿ – ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಪದ್ಮಾವತಿ
ಕೋಟೇಶ್ವರ: ಸೋಲನ್ನ ಮೆಟ್ಟಿಲಾಗಿಸಿ ಸೋಲು ಗೆಲುವನ್ನು ಸಮ ಪ್ರಮಾಣದಲ್ಲಿ ಸ್ವೀಕರಿಸಿದಾಗ ಅದು ಕ್ರೀಡಾ ಮನೋಭಾವನೆ ಎಂದೆನಿಸುತ್ತದೆ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಓರೆಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ. ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಮೂಲಕ ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆ ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇಲ್ಲಿನ ವಾರ್ಷಿಕ ಕ್ರೀಡಾಕೂಟದ ಗೌರವ ರಕ್ಷೆ ಹಾಗೂ ಸನ್ಮಾನವನ್ನು ಸ್ವೀಕರಿಸಿದ ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗ ಳು ಸಂಸ್ಥೆಯ ಹಳೆ ವಿದ್ಯಾರ್ಥಿಯು ಆದ ಪದ್ಮಾವತಿ ಅಭಿಪ್ರಾಯ ಪಟ್ಟರು
ಕ್ರೀಡಾಕೂಟದ ಕ್ರೀಡಾಧ್ವಜವನ್ನು ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ವಿಶ್ವನಾಥ್ ರವರು ನೆರವೇರಿಸಿದರು ಕ್ರೀಡಾ ಜ್ಯೋತಿಯನ್ನು ಗ್ರಾಮ ಪಂಚಾಯತ್ ಸದಸ್ಯ ನಾಗರಾಜ ಕಾಂಚನ್ ರವರು ಬೆಳಗಿಸಿದರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಗಿಣಿ ದೇವಾಡಿಗ ಅವರು ಶಾಂತಿ ದೂತ ಪಾರಿವಾಳವನ್ನು ಹಾರಿ ಬಿಡುವುದರ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು
ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಶ್ರೀಮತಿ ಸುಶೀಲ ಹೊಳ್ಳ ಅತಿಥಿಗಳನ್ನು ಸ್ವಾಗತಿಸಿ ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ವಂದಸಿದರು ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್ ಹೊಳ್ಳ ಮತ್ತು ಉದಯ ಮಡಿವಾಳ ಎಂ ನಿರೂಪಿಸಿ ಸಂಘಟಿಸಿದ್ದರು