ಡೈಲಿ ವಾರ್ತೆ: 07/DEC/2023

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಳಿಬೆಟ್ಟು ಐರೋಡಿಯಲ್ಲಿ ‘ಸರಣಿ ಉದ್ಘಾಟನಾ ಕಾರ್ಯಕ್ರಮಗಳು’

ಸಾಸ್ತಾನ: ಗೋಳಿಬೆಟ್ಟು ಐರೋಡಿ ಸರ್ಕಾರಿ ಶಾಲೆಯಲ್ಲಿ ಇಲಾಖಾ ಅನುದಾನದಡಿ ಪುನರ್ವ್ಯವಸ್ಥಿತಗೊಳಿಸಿದ LKG UKG ತರಗತಿಯ ಕೊಠಡಿ ಉದ್ಘಾಟನೆಯೊಂದಿಗೆ ದಾನಿಗಳಾದ ಶ್ರೀಕರ ಮೆಂಡನ್, ಕೋಡಿ ಕನ್ಯಾನ ಇವರು ಕೊಡಮಾಡಿದ ಪೋಡಿಯಂನ ಉದ್ಘಾಟನೆ ಮತ್ತು SDMC ಯೊಂದಿಗೆ ಸ್ಟ್ಯಾನ್ಲಿ ಡಿಸೋಜಾ, ಪಾಂಡೇಶ್ವರ ಮತ್ತು ಮಹಾಬಲ ಉಪಾಧ್ಯ ಉಡುಪಿ ಇವರ ಪ್ರಾಯೋಜಕತ್ವದಲ್ಲಿ ಆನ್ಲೈನ್ ಶಿಕ್ಷಣದ ಆದ್ಯತೆಗಾಗಿ ಶಾಲೆಗೆ ನೀಡಿದ ಸ್ಮಾರ್ಟ್ ಟಿವಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬ್ರಹ್ಮಾವರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಉಮಾರವರು ಪುನರ್ವ್ಯವಸ್ಥಿತಗೊಳಿಸಿದ LKG UKG ತರಗತಿಯ ಕೊಠಡಿ ಉದ್ಘಾಟಿಸಿ, ‘ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂಬುವುದಕ್ಕೆ ಈ ಶಾಲೆಯ ಬೆಳವಣಿಗೆಯೇ ಸಾಕ್ಷಿ. ಈ ಶಾಲೆಯ ಅಭಿವೃದ್ಧಿಗೆ SDMC , ಸಮುದಾಯ ಮತ್ತು ಉತ್ತಮ ಶಿಕ್ಷಕ ವರ್ಗ ದುಡಿಯುತ್ತಿರುವುದು ಖುಷಿಯ ವಿಚಾರ. ಇದೇ ಸಹಕಾರ ಸಿಗಲಿ ಇನ್ನೂ ಎತ್ತರಕ್ಕೆ ಶಾಲೆ ಬೆಳೆದು ಉತ್ತಮ ಶಿಕ್ಷಣ ದೊರೆಯಲಿ ಎಂದು ಆಶಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬ್ರಹ್ಮಾವರ ವಲಯದ ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಪದ್ಮಾವತಿಯವರು ‘ಸಣ್ಣ ಸರ್ಕಾರಿ ಶಾಲೆಯಾದರೂ ಇಲ್ಲಿನ ಜನರ ಸಹಕಾರದಿಂದಾಗಿ ದೊಡ್ದ ಮಟ್ಟದ ಅಭಿವೃದ್ಧಿ ಕಾಣಸಿಗುತ್ತದೆ ಎಂಬುದು ಇಲಾಖೆಗೆ ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ತಮ್ಮೆಲ್ಲರ ಸಹಕಾರ ಸದಾ ಇದ್ದು ಶಾಲೆ ಮತ್ತು ಮಕ್ಕಳ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.
ಸ್ಥಳೀಯ ಜನಪ್ರತಿನಿಧಿಗಳಾದ ಸುಧಾಕರ ಪೂಜಾರಿಯವರು ಮಾತನಾಡಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ ದೊರೆಯುವ ಎಲ್ಲಾ ಸಹಕಾರಗಳನ್ನು ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದರು.


ಬ್ರಹ್ಮಾವರ ವಲಯದ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಹಾವಂಜೆ ಮಾತನಾಡಿ, ‘ತುಂಬಾ ಉತ್ತಮವಾದ ಕಲಿಕಾ ವಾತಾವರಣ ಕಂಡು ಮನಸ್ಸಿಗೆ ತುಂಬಾ ಸಂತಸವಾಗಿದೆ. ಶಿಕ್ಷಕರ ಶ್ರಮ ಎದ್ದು ಕಾಣುತ್ತಿದೆ. ಜೊತೆಗೆ SDMC ಮತ್ತು ಪೋಷಕರ ಸಹಕಾರವೂ ಇದೆ. ಶಿಕ್ಷಕರ ಮತ್ತು ಶಾಲೆಯ ಸಮಸ್ಯೆಗೆ ಸದಾ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಸಭಾ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು SDMC ಅಧ್ಯಕ್ಷೆ ಪೂರ್ಣಿಮಾ ಸತೀಶ್ ವಹಿಸಿದ್ದರು. ವೇದಿಕೆಯಲ್ಲಿ SDMC ಉಪಾಧ್ಯಕ್ಷರಾದ ವಿಜಯ್ ಪೂಜಾರಿ, ಸಾಸ್ತಾನ ವ್ಯವಸಾಯಿಕ ಸಹಕಾರಿ ಸಂಘದ ಸಿಇಓ ವಿಜಯ್ ಪೂಜಾರಿ, ಪಾಂಡೇಶ್ವರ ರಕೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ.ರಮೇಶ್ ರಾವ್ , ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್, ಕಾರ್ಯಾಧ್ಯಕ್ಷ ರವೀಂದ್ರ ಕೋಟ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಪಂಚವರ್ಣ ಮಹಿಳಾ ಮಂಡಲ ಕಾರ್ಯದರ್ಶಿ ಲಲಿತಾ ಪೂಜಾರಿ, ಯೋಗೀಶ್ ಬ್ರಹ್ಮಾವರ ಉಪಸ್ಥಿತರಿದ್ದರು.


ಕಾರ್ಯ್ರಮದಲ್ಲಿ ಶಾಲಾಭಿವೃದ್ಧಿಗೆ ಸಹಕರಿಸಿದ ಸತೀಶ್ ನಾಯ್ಕ್, ಗುಲಾಬಿ ಮಡಿವಾಳ, ಪೂರ್ಣಿಮಾ ಸತೀಶ್ , ವಿಜಯ್ ಪೂಜಾರಿ ಮತ್ತು ರಾಜು ಮರಕಾಲರನ್ನು ಸನ್ಮಾನಿಸಲಾಯಿತು. ಹಾಗೇ ಮಕ್ಕಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಕ್ರೀಡಾ ಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಸರ್ಕಾರ ನೀಡಿದ ಎರಡನೇ ಸಮವಸ್ತ್ರಗಳನ್ನು ಮಕ್ಕಳಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸರ್ವ SDMC ಸದಸ್ಯರು, ಪೋಷಕರು ಮತ್ತು ಮಕ್ಕಳು ನೆರೆದಿದ್ದರು. ಸಹ ಶಿಕ್ಷಕಿ ಭವಾನಿ ಮತ್ತು ಗೌರವ ಶಿಕ್ಷಕಿ ಅಕ್ಷತಾ ಸಹಕರಿಸಿದರು.